ಜಾಕಿ ಭಾವನಾ ಜತೆ ರಿಯಲ್ ಸ್ಟಾರ್ ಉಪೇಂದ್ರ

By Rajendra

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಅನೀಶ್ ವರ್ಮಾ ಆಕ್ಷನ್, ಕಟ್ ಹೇಳಲಿದ್ದಾರೆ. ಸದ್ಯಕ್ಕೆ 'ಸೂಪರ್' ತೆಲುಗು ಚಿತ್ರದ ಡಬ್ಬಿಂಗ್‌ನಲ್ಲಿ ಉಪ್ಪಿ ಬ್ಯುಸಿಯಾಗಿದ್ದಾರೆ. ಡಬ್ಬಿಂಗ್ ಕೆಲಸ ಮುಗಿದಕೂಡಲೆ ಇನ್ನೂ ಹೆಸರಿಡದ ಉಪ್ಪಿ ಹೊಸ ಚಿತ್ರ ಸೆಟ್ಟೇರಲಿದೆ.

ಈ ಹಿಂದೆ 'ಥಿಲಕಂ' ಎಂಬ ಚಿತ್ರವನ್ನು ಅನೀಶ್ ನಿರ್ಮಿಸಿದ್ದರು. ಅವರ ನಿರ್ದೇಶನದಲ್ಲಿ ಬಂದ 'ಕಾವ್ಯಂ' ಚಿತ್ರದಲ್ಲಿ ಸುರೇಶ್ ಗೋಪಿ ಮತ್ತು ನವ್ಯಾ ನಾಯರ್ ಮುಖ್ಯಭೂಮಿಕೆಯಲ್ಲಿದ್ದರು. ಈಗ ಅನೀಶ್ ಅವರು ಕೈಗೆತ್ತಿಕೊಂಡಿರುವ ಉಪ್ಪಿ ಚಿತ್ರ ಫೆಬ್ರವರಿಯಲ್ಲಿ ಸೆಟ್ಟೇರಲಿದೆ. ಈ ಚಿತ್ರವನ್ನು ಮಲಯಾಳಂನ ಅನ್ವರ್ ನಿರ್ಮಿಸಲಿದ್ದಾರೆ.

ಪುನೀತ್ ಜೊತೆ 'ಜಾಕಿ' ಚಿತ್ರದಲ್ಲಿ ಅಭಿನಯಿಸಿದ್ದ ಭಾವನಾ ಚಿತ್ರದ ನಾಯಕಿ. 'ಥಿಲಕಂ' ಚಿತ್ರದ ಮೂಲಕ ಭಾವನಾ ಅವರನ್ನು ಬೆಳ್ಳಿ ಪರದೆಗೆ ಪರಿಚಯಿಸಿದ್ದೇ ಅನೀಶ್ ವರ್ಮಾ ಅವರು. ಜೆಸ್ಸಿ ಗಿಫ್ಟ್ ಅವರ ಸಂಗೀತ, ಕಣ್ಣನ್ ಅವರ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ಬಳಗದಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಚಿತ್ರೀಕರಣ ದುಬೈ, ಮಂಗಳೂರು, ಗೋವಾ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. [ಸೂಪರ್]

More from Filmibeat

English summary
Real star Upendra to act with Jackie fame Bhavana in untitled Kannada movie. Renowned Malayalam film director Aneesh Verma to direct the movie. Jessie Gift is the music director. Camera work is handled by Kannan. The film shooting to be held in Dubai, Mangalore, Goa and Bangalore. The film shooting to be start from February.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X