ಅಂಜನಾಪುರದಲ್ಲಿ ನಟ ದಿ.ವಜ್ರಮುನಿ ಹುಟ್ಟುಹಬ್ಬ

By Rajendra

Actor Vajramuni
ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ ವಜ್ರಮುನಿ. ಖಳನಟನಾಗಿ ಅವರು ಪೋಷಿಸಿದ ಪಾತ್ರಗಳು ಇಂದಿಗೂ ಜನಮನದಲ್ಲಿ ಅಚ್ಚಾಗಿವೆ. ಸರಿಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ವಜ್ರಮುನಿ ಅವರು ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಜನಪ್ರಿಯರಾದವರು. ಪ್ರೇಮದ ಕಾಣಿಕೆ, ಬಬ್ರುವಾಹನ, ಅಂತ, ಸಂಪತ್ತಿಗೆ ಸವಾಲ್, ಬಹದ್ದೂರ್ ಗಂಡು, ಮಯೂರ, ರಾಯರು ಬಂದರು ಮಾವನ ಮನೆಗೆ ಮುಂತಾದವು ಅವರ ಅಭಿನಯದ ಪ್ರಸಿದ್ಧ ಚಿತ್ರಗಳು.

ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ, ವಜ್ರಮುನಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವೇಕಾನಂದ ಯುವ ವೇದಿಕೆ ಮೇ.14ರಂದು ರಂಗೋಲೆ ಸ್ಪರ್ಧೆಯನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಜನಾಪುರದಲ್ಲಿ ಹಮ್ಮಿಕೊಂಡಿದೆ. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ 10 ಮಂದಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ.

ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9900227398, 7795113268, 9900274516 ಎಂದು ವೇದಿಕೆ ಅಧ್ಯಕ್ಷ ಪಿ ಮುನಿರಾಜು (ತುಳಸಿ) ತಿಳಿಸಿದ್ದಾರೆ. ನಟ ಭೈರವ, ನಟ ಭಯಂಕರನ ಹುಟ್ಟುಹಬ್ಬವನ್ನು ಅರ್ಥವತ್ತಾಗಿ ಆಚರಿಸಲು ವಿವೇಕಾನಂದ ಯುವ ವೇದಿಕೆ ಸಜ್ಜಾಗಿದೆ. (ದಟ್ಸ್‌ಕನ್ನಡ ಸಿನಿ ವಾರ್ತೆ)

More from Filmibeat

English summary
Rangoli computation is organized for the women on the occasion of Kannada films villain Vajramuni birthday on May 14th at Anjanapur said the Vivekananda Yuva Vedike. For more details contact 99002 27398, 77951 13268, 99002 74516. Rangoli computation winners will get the certificates said the president of vedike P Muniraju.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X