ಚಿತ್ರ ನಿರ್ದೇಶನಕ್ಕೆ ಚಳಿ ಚಳಿ ತಾಳೆನು ಖ್ಯಾತಿಯ ಅಂಬಿಕಾ

By Rajendra

ಎಂಬತ್ತರ ದಶಕದಲ್ಲಿ ಚಿತ್ರರಸಿಕರ ಮನಸೂರೆಗೊಂಡಿದ್ದ ತಾರೆ ಅಂಬಿಕಾ ಈಗ ಆಕ್ಷನ್, ಕಟ್ ಹೇಳಲು ಮುಂದಾಗಿದ್ದಾರೆ. ತನ್ನ ಸಹೋದರಿ ಹಾಗೂ ತಾರೆ ರಾಧಾ ಜೊತೆ ಅಂಬಿಕಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ್ದರು.

ಸಾಮಾನ್ಯವಾಗಿ ಕನ್ನಡಿಗರಿಗೆ ಅಂಬಿಕಾ ಎಂದರೆ ನೆನಪಾಗುವುದು 'ಚಕ್ರವ್ಯೂಹ' ಚಿತ್ರದ "ಚಳಿ ಚಳಿ ತಾಳೆನು ಈ ಚಳಿಯಾ..." ಎಂಬ ಮತ್ತೇರಿಸುವ ಹಾಡು. ಚಿ ಉದಯಶಂಕರ್ ಸಾಹಿತ್ಯ ಜಾನಕಿ ಮತ್ತು ಬಾಲಸುಬ್ರಹ್ಮಣ್ಯಂ ಗಾಯನಕ್ಕೆ ಅಂಬರೀಷ್ ಮತ್ತು ಅಂಬಿಕಾ ಜೀವತುಂಬಿದ್ದರು.

ಈಗಲೂ ಆ ಹಾಡನ್ನು ನೆನಪಿಸಿಕೊಂಡರೆ ಮೈಬೆಚ್ಚಗಾಗುತ್ತದೆ ಎನ್ನುತ್ತಾರೆ ಆಗಿನ ಕಾಲದ ಚಿತ್ರರಸಿಕರು. ಇರಲಿ ವಿಷಯ ಅದಲ್ಲ. ಆಕೆ ತಮಿಳು ಮತ್ತು ಮಲೆಯಾಳಂನ ದ್ವಿಭಾಷಾ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎನ್ನುವುದು. ಈ ಚಿತ್ರದ ಬಗೆಗಿನ ವಿವರಗಳನ್ನು ಅಧಿಕೃತವಾಗಿ ಡಿಸೆಂಬರ್‌‍ನಲ್ಲಿ ಪ್ರಕಟಿಸಲಾಗುತ್ತದಂತೆ.

ಅಂದರೆ ಚಳಿಗಾಲದಲ್ಲೇ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರವನ್ನು ಅಂಬಿಕಾ ಪ್ರಕಟಿಸುತ್ತಿರುವುದು ಪಡ್ಡೆಗಳ ಪಾಲಿಗೆ ಕುತೂಹಲ ಮೂಡಿಸಿದೆ. ಆದರೆ ಚಿತ್ರದಲ್ಲಿ ಚಳಿ ಚಳಿ ಹಾಡುಗಳು, ಬಿಸಿ ಬಿಸಿ ದೃಶ್ಯಗಳು ಇರುತ್ತವೋ ಇಲ್ಲವೋ ಎಂಬುದನ್ನು ತಿಳಿಯಬೇಕಾದರೆ ಡಿಸೆಂಬರ್ ತನಕ ಕಾಯಬೇಕು.

ಎರಡು ನಕ್ಷತ್ರಗಳು, ಚಲಿಸುವ ಮೋಡಗಳು, ಮೂರು ಜನ್ಮ, ಬಜಾರ್ ಭೀಮ, ಜೀವನ ಜ್ಯೋತಿ, ಚಕ್ರವ್ಯೂಹ, ಪ್ರಳಯಾಂತಕ ಎಂಬ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ ಅಂಬಿಕಾ ಅಭಿನಯಿಸಿದ್ದರು. ಎಂಬತ್ತರ ದಶಕದಲ್ಲಿ ಹಾಟ್ ಬೆಡಗಿ ಎನ್ನಿಸಿದ್ದ ಅಂಬಿಕಾ ನಿರ್ದೇಶಿಸಲಿರುವ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X