»   » 'ಬಿಂದಾಸ್ ಹುಡುಗಿ'ಯಾಗಿ ಪ್ರಿಯಾ ಹಾಸನ್

'ಬಿಂದಾಸ್ ಹುಡುಗಿ'ಯಾಗಿ ಪ್ರಿಯಾ ಹಾಸನ್

Subscribe to Filmibeat Kannada

ಪ್ರಿಯಾ ಹಾಸನ್ ನಿರ್ದೇಶದಲ್ಲಿ ಬರುತ್ತಿರುವ 'ಬಿಂದಾಸ್ ಹುಡುಗಿ' ಅ.9ರಂದು ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತು. ಪ್ರಿಯಾ ಹಾಸನ್ ನಿರ್ದೇಶಿಸಿ, ನಟಿಸಿದ್ದ 'ಜಂಭದ ಹುಡುಗಿ' ಚಿತ್ರ ಬೆಂಗಳೂರಿನ ಸಪ್ನ ಹಾಗೂ ಹುಬ್ಬಳ್ಳಿಯ ಚಿತ್ರಮಂದಿರಗಳಲ್ಲಿ 125 ದಿನ ಪ್ರದರ್ಶನ ಕಂಡಿತ್ತು.ಈ ಯಶಸ್ಸಿನಿಂದ ಅವರ ಹೆಸರಿಗೆ ಜೂನಿಯರ್ ಮಾಲಾಶ್ರೀ ಎಂಬ ಬಿರುದು ಅಂಟಿಕೊಂಡಿತ್ತು.ಆನಂತರ ಪ್ರಿಯಾ ಹಾಸನ್ ಸುಮ್ಮನೆ ಕೂರಲಿಲ್ಲ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನಕ್ಕೆ ಬೇಕಾದ ಸಾಕಷ್ಟು ಪೂರ್ವ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈಗ ಎಲ್ಲವನ್ನೂ ಸಿದ್ಧ ಮಾಡಿಕೊಂಡೆ ಆಖಾಡಕ್ಕೆ ಇಳಿದಿದ್ದಾರೆ.

ಜಂಭದ ಹುಡುಗಿಯ ಜೋಡಿ ಯಾರೆಂದು ಇನ್ನೂ ನಿರ್ಧರಿಸಿಲ್ಲ. ಈ ಚಿತ್ರಕ್ಕೆ ಆರ್.ಗಿರಿ ಛಾಯಾಗ್ರಹಣ, ತೆಲುಗು ಮೂಲದ ರಮೇಶ್ ಸಂಗೀತವಿದೆ. ಉಳಿದಂತೆ ತಾರಾಗಣದಲ್ಲಿ ನೀನಾಸಂ ಅಶ್ವಥ್, ಸುರೇಶ್ ಪೈ ಮುಂತಾದವರು ಇದ್ದಾರೆ. ಪ್ರಿಯಾ ಹಾಸನ್ ಅವರ ಅಣ್ಣ ಮೋಹನ್ ಗೌಡ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಚಿತ್ರದಲ್ಲಿ ಹಾಡು ಹಾಗೂ ಹೊಡೆದಾಟದ ಸನ್ನಿವೇಷಗಳಿಗೆ ಹೆಚ್ಚಿನ ಒತ್ತು ನೀಡಿರುವುದಾಗಿ ಪ್ರಿಯಾ ತಿಳಿಸಿದರು.

ಈಗಾಗಲೇ ಅವರ ನಿರ್ದೇಶನದ 'ಹುಬ್ಬಳ್ಳಿ ಹುಡುಗಿ' ಸೆಟ್ಟೇರಬೇಕಿತ್ತು. ಕೆಲವು ತಾಂತ್ರಿಕ ತೊಂದರೆಗಳಿಂದ ಅದನ್ನು ಮುಂದೂಡಲಾಯಿತು ಎನ್ನುತ್ತಾರೆ ಪ್ರಿಯಾ. ಒಟ್ಟಿನಲ್ಲಿ 'ಹುಡುಗಿ'ಯರ ಹಿಂದೆ ಬಿದ್ದಿರುವ ಪ್ರಿಯಾ ಹಾಸನ್ 'ಬಿಂದಾಸ್ ಹುಡುಗಿ' ಮೂಲಕ ಮತ್ತಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸೋಣ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada