»   » ಅಪರೂಪದ ತಾರೆ ಜೆನ್ನಿಫರ್ ಕೊತ್ವಾಲ್!

ಅಪರೂಪದ ತಾರೆ ಜೆನ್ನಿಫರ್ ಕೊತ್ವಾಲ್!

Posted By:
Subscribe to Filmibeat Kannada
jennifer kotwal
'ಜೋಗಿ' ಚಿತ್ರದ ಮೂಲಕ ಕನ್ನಡಕ್ಕೆ ಜೆನ್ನಿಫರ್ ಕೊತ್ವಾಲ್ ಎಂಬ ಬೆಡಗಿ ಪರಿಚಯವಾಗಿದ್ದು ಹಳೆಯ ವಿಚಾರ. ನಂತರ ಆ ಚಿತ್ರ ಬಾಕ್ಸಾಫೀಸ್ ದಾಖಲೆಗಳನ್ನು ಮುರಿದು ದಿನ ಬೆಳಗಾಗುವುದರಲ್ಲಿ ಆಕೆಯನ್ನು ಆಕಾಶಕ್ಕೇರಿಸಿತು. ಜೋಗಿ ಯಶಸ್ಸಿನಿಂದ ಶ್ರೀ, ಲವ ಕುಶ,ಉಗಾದಿ, ಸತ್ಯವಾನ್ ಸಾವಿತ್ರಿ,ಈ ಬಂಧನ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬಂದವು. ಆದರೂ ಜೆನ್ನಿಫರ್ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಅಳುಕು. ಬಾಲಿವುಡ್ ಚಿತ್ರಗಳಲ್ಲಿ ನಟಿಸಬೇಕೆಂಬ ಕನಸು.ಕಡೆಗೂ ಆಕೆಯ ಕನಸು ನನಸಾಗುವ ಕಾಲ ಕೂಡಿ ಬಂದಿದೆ.

ಬಾಲಿವುಡ್ ಚಿತ್ರ ರಸಿಕರ ಹೃದಯ ಚೋರ ಹಿಮೇಶ್ ರಶ್ಮಿಯಾ ಚಿತ್ರದಲ್ಲಿ ನಟಿಸುವ ಅವಕಾಶ ಜೆನ್ನಿಫರ್ ರನ್ನು ಹುಡುಕಿಕೊಂಡು ಬಂದಿದೆ. ಚಿತ್ರದ ಹೆಸರು 'ಮುಡ್ ಮುಡ್ ನಾ ದೇಖೋ'ಎಂದು. ತಮ್ಮ ಚೊಚ್ಚಲ ಚಿತ್ರ 'ಕರ್ಜ್'ನಂತರ ಹಿಮೇಶ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಬಾಲಿವುಡ್ ಗೆ ಪ್ರವೇಶಿಸುವ ಸುವರ್ಣಾವಕಾಶ ದೊರೆತಿದ್ದರೂ ಜೆನ್ನಿಫರ್ ಕನ್ನಡ ಚಿತ್ರರಂಗವನ್ನು ಮರೆತಿಲ್ಲ. ಆಕೆ ಕನ್ನಡದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

ಪ್ರಸ್ತುತ ಸುದೀಪ್, ವಿಜಯ ರಾಘವೇಂದ್ರ, ದಿಗಂತ್ ಹಾಗೂ ನಾಗಕಿರಣ್ ನಟಿಸಿರುವ 'ಮಸ್ತ್ ಮಜಾ ಮಾಡಿ' ಚಿತ್ರದಲ್ಲಿ ಜೆನ್ನಿಫರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟ ಧ್ಯಾನ್ ರೊಂದಿಗಿನ 'ಓ ಮನಸೆ' ಚಿತ್ರದಕ್ಕೆ ಸಹಿ ಹಾಕಿದ್ದಾರೆ. ಕನ್ನಡ ಚಿತ್ರರಂಗವನ್ನು ಏಣಿಯಂತೆ ಬಳಸಿಕೊಂಡು ನಂತರ ಅದನ್ನು ಒದೆಯುವ ಸಾಕಷ್ಟು ನಟಿಯರನ್ನು ಕನ್ನಡ ಚಿತ್ರರಂಗ ಕಂಡಿದೆ. ಆದರೆ ಜೆನ್ನಿಫರ್ ನಂತಹ ನಟಿಯರು ಮಾತ್ರ ಅಪರೂಪದಲ್ಲಿ ಅಪರೂಪ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada