ಬೆಳ್ಳಿಹೆಜ್ಜೆಯಲ್ಲಿ ರಾಜೇಂದ್ರ ಸಿಂಗ್ ಬಾಬು ತಾಯಿ ಪ್ರತಿಮಾ

By Rajendra

KCA logo
ಈ ಬಾರಿ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಒಂದು ಕಾಲದ ಅಭಿನೇತ್ರಿ ಪ್ರತಿಮಾ ದೇವಿ ತಮ್ಮ ಹೆಜ್ಜೆ ಗುರುತುಗಳನ್ನು ಸಭಿಕರೊಂದಿಗೆ ಹಂಚಿಕೊಳ್ಳಲಿದ್ದಾರೆ(ಜೂ.11). ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ವಿಜಯಲಕ್ಷ್ಮಿ ಸಿಂಗ್ ಅವರ ತಾಯಿ, ಡೆಡ್ಲಿ ಆದಿತ್ಯ ಹಾಗೂ ರಿಷಿಕಾ ಸಿಂಗ್ ಅವರ ಅಜ್ಜಿ ಪ್ರತಿಮಾ.

ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮಕ್ಕೆ ಅಪಾರ ಜನಮೆಚ್ಚುಗೆಯೂ ವ್ಯಕ್ತವಾಗಿದೆ. ಈಗಾಗಲೆ ಹಲವಾರು ಖ್ಯಾತ ಸಿನಿಮಾ ತಾರೆಗಳು ಈ ಕಾರ್ಯಕ್ರಮದಲ್ಲಿ ಚಿತ್ರರಂಗದೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಂಜೆ 5ಗಂಟೆ ಸುಮಾರಿಗೆ ಜೆ ಸಿ ರಸ್ತೆಯ ಬಾದಾಮಿ ಹೌಸ್ ಪ್ರಿಯದರ್ಶಿನಿ ಸಭಾಂಗಣದಲ್ಲಿ ಪ್ರತಿಮಾ ಅವರನ್ನು ಕಾಣಬಹುದು.

ಐವತ್ತರ ದಶಕದ ಆರಂಭದಲ್ಲಿ ಮೊಟ್ಟ ಮೊದಲ ಬೆಳ್ಳಿ ಹಬ್ಬ ಆಚರಿಸಿಕೊಂಡಚಿತ್ರದ ನಾಯಕಿ ಎಂಬ ಹೆಗ್ಗಳಿಕೆಗೆ ಪ್ರತಿಮಾ ಅವರು ಪಾತ್ರರಾಗಿದ್ದಾರೆ. ಆ ಚಿತ್ರ ಬೇರಾವುದೂ ಅಲ್ಲ 'ಜಗನ್ಮೋಹಿನಿ'.ಅಲ್ಲಿಂದ ಆರಂಭವಾದ ಅವರ ಬೆಳ್ಳಿಹೆಜ್ಜೆ ಯಾತ್ರೆಯಲ್ಲಿ ಮುಟ್ಟಿದ್ದೆಲ್ಲಾ ಚಿನ್ನ.

ಪ್ರತಿಮಾ ಅವರ ಪತಿ ಶಂಕರ್ ಸಿಂಗ್ ತಮ್ಮ ಮಹಾತ್ಮ ಪಿಕ್ಚರ್ಸ್ ಮೂಲಕ ಹಲವಾರು ಚಿತ್ರಗಳನ್ನು ತೆರೆಗೆ ತಂದರು. 'ಕೃಷ್ಣ ಲೀಲಾ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಪ್ರತಿಮಾ ಅವರು ಸರಿಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಗಕನ್ಯೆ, ಶ್ರೀನಿವಾಸ ಕಲ್ಯಾಣ, ಮುಟ್ಟಿದ್ದೆಲ್ಲಾ ಚಿನ್ನ, ಚಂಚಲ ಕುಮಾರಿ, ಧರ್ಮಸ್ಥಳ ಮಹಾತ್ಮೆ, ಮಂಗಳಸೂತ್ರ, ಧರಣಿ ಮಂಡಳ ಮಧ್ಯದೊಳಗೆ ಅವರು ಅಭಿನಯಿಸಿದಜನಪ್ರಿಯ ಚಿತ್ರಗಳು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada films senior artist Pratima Devi, mother of SV Rajendra Singh Babu, Vijayalakshmi Singh will be the guest of honor at 'Belli Hejje' organized by Karnataka Chalanachitra Academy. She acted in Nagakanye, Jaganmohini, Srinivasa Kalyana, Muttidella Chinna and others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X