ಪುತ್ರೋತ್ಸಾಹದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ!

ರಕ್ಷಿತಾ ಅವರು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ದೇಸಾಯಿ ನರ್ಸಿಂಗ್ ಹೋಮ್ ನಲ್ಲಿ ಪ್ರಸೂತಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ನವೆಂಬರ್ 3ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ 'ರಾಜ್-ದಿ ಶೊ ಮ್ಯಾನ್'ಚಿತ್ರೀಕರಣದಲ್ಲಿ ತಲ್ಲೀನರಾಗಿರುವ ಪ್ರೇಮ್ ರ ಸಂಭ್ರಮ ಇಮ್ಮಡಿಸಿದೆ.
ವಿಜಯಲಕ್ಷ್ನಿ ಅವರು ಅಕ್ಟೋಬರ್ 31ರಂದು ಗಂಡು ಮಗುವನ್ನು ಹಡೆದರು. ದರ್ಶನ್ ಅವರಿಗೆ ಒಂದು ಕಡೆ 'ನವಗ್ರಹ' ಚಿತ್ರ ಬಿಡುಗಡೆಯಾದ ಸಂಭ್ರಮ ಮತ್ತೊಂದು ಕಡೆ ಅದೇ ಸಮಯಕ್ಕೆ ಮಗುವಾದ ಖುಷಿ.ದರ್ಶನ್ ,ಪ್ರೇಮ್ ದಂಪತಿಗಳಿಗೆ ಹಾಗೂ ಅವರ ಕಂದಮ್ಮಗಳಿಗೆ ಶುಭವಾಗಲಿ ಎಂದು ದಟ್ಸ್ ಕನ್ನಡ ಹಾರೈಸುತ್ತದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications