For Quick Alerts
  ALLOW NOTIFICATIONS  
  For Daily Alerts

  ಶಾಪರ್ಸ್ ಸ್ಟಾಪ್ ಚಿಲ್ಲರೆ ಮಳಿಗೆಯಲ್ಲಿ ನಟಿ ರಮ್ಯಾ

  By Rajendra
  |

  ಇದೇನಿದು ಗೋಲ್ಡನ್ ಗರ್ಲ್ ರಮ್ಯಾ ಚಿಲ್ಲರೆ ಮಳಿಗೆಯಲ್ಲಿ ಎಂದು ಹುಬ್ಬೇರಿಸಬೇಡಿ. ಆದರಿದು ಅಂತಿಂಥಹ ಚಿಲ್ಲರೆ ಮಳಿಗೆಯಲ್ಲ ಶಾಪರ್ ಸ್ಟಾಪ್ ಎಂಬ ಲೈಫ್ ಸ್ಟೈಲ್ ಮಳಿಗೆ. ಇತ್ತೀಚೆಗೆ ಶಾಪರ್ಸ್ ಸ್ಟಾಪ್ 50ನೇ ಶಾಖೆ ಬೆಂಗಳೂರಿನಲ್ಲಿ ಆರಂಭವಾಯಿತು. ತಮ್ಮ ಅಮೃತ ಹಸ್ತದಿಂದ ಗೋಲ್ಡನ್ ಗರ್ಲ್ ರಮ್ಯಾ ಗುರುವಾರ (ಫೆ.9) ಉದ್ಘಾಟಿಸಿದರು.

  ಬೆಂಗಳೂರಿನ ಹಳೆ ಮದ್ರಾಸ್ ರಸ್ತೆ ಸಮೀಪದ ಬೆಳಗನಹಳ್ಳಿಯಲ್ಲಿರುವ ಗೋಪಾಲನ್ ಸಿಗ್ನೇಚರ್ ಟವರ್‌ನಲ್ಲಿ ಶಾಪರ್ಸ್ ಸ್ಟಾಪ್ 50ನೇ ಮಳಿಗೆ ಆರಂಭವಾಗಿದೆ. ಒಟ್ಟು 56,000 ಚದರ ಅಡಿ ವಿಸ್ತೀರ್ಣದ ಈ ಮಳಿಗೆಯಲ್ಲಿ ಏನುಂಟು ಏನಿಲ್ಲ. ಕಿಸೆಯಲ್ಲಿ ದುಡ್ಡು, ಕಾರ್ಡು ಯಾವುದಿದ್ದರೂ ಪರ್ವಾಗಿಲ್ಲ ಶಾಪಿಂಗ್ ಭರ್ಜರಿಯಾಗಿ ಮಾಡಬಹುದು.

  ಮಳಿಗೆಯನ್ನು ಉದ್ಘಾಟಿಸಿದ ರಮ್ಯಾ ಮಾತನಾಡುತ್ತಾ, ಶಾಪರ್ಸ್ ಸ್ಟಾಪ್ 50ನೇ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದಕ್ಕೆ ಹೆಮ್ಮೆ ಅನ್ನಿಸುತ್ತಿದೆ. ಶಾಪರ್ಸ್ ಸ್ಟಾಪ್‌ನಲ್ಲಿ ಎಲ್ಲ ಬ್ರ್ಯಾಂಡ್‌ನ ಉತ್ಪನ್ನಗಳು ಸಿಗುತ್ತವೆ. ಹೊಸ ಮಳಿಗೆಯಲ್ಲಿ ನಿಮಗಿಷ್ಟವಾದ ಫ್ಯಾಷನ್ ಉಡುಗೆ ತೊಡುಗೆಗಳನ್ನು ಎಂಜಾಯ್ ಮಾಡಿ ಎಂದಿದ್ದಾರೆ. (ಏಜೆನ್ಸೀಸ್)

  English summary
  Shoppers Stop, India’s premier fashion and lifestyle destination, celebrates a milestone with the opening of its Fiftieth (50th) store in the country. The newest Shoppers Stop store, located at Gopalan Signature Towers in Bengaluru, was inaugurated with heartfelt cheers and joyful celebrations. To add a dash of glamour, renowned Kannada actress- Ramya graced the occasion with her presence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X