ಚಿತ್ರೀಕರಣದಲ್ಲಿ ಸಮೀರಾ ರೆಡ್ಡಿಗೆ ಗಂಭೀರ ಗಾಯ
ಅರೇಬಿಯನ್ ಹಾರ್ಸ್ ಬ್ಯೂಟಿ ಸಮೀರಾ ರೆಡ್ಡಿ ಚಿತ್ರೀಕರಣದಲ್ಲಿ ಬುಧವಾರ (ಆ.10)ಗಂಭೀರವಾಗಿ ಗಾಯಗೊಂಡಿದ್ದಾರೆ. ತಮಿಳು ಚಿತ್ರ 'ವೆಟ್ಟೈ' ಚಿತ್ರೀಕರಣ ವೇಳೆ ಈ ಅವಘಡ ಸಂಭವಿಸಿದೆ. ಕೊಯಂಬತ್ತೂರಿನಲ್ಲಿ ಮಳೆ ಹಾಡಿನ ಚಿತ್ರೀಕರಣದ ವೇಳೆ ವಾಹನದಿಂದ ಕೆಳಗೆ ಬಿದ್ದ ಸಮೀರಾ ಬಲವಾಗಿ ಗಾಯಗೊಂಡಿದ್ದಾರೆ.
ಸಮೀರಾ ರೆಡ್ಡಿಗೆ ಎಲ್ಲೆಲ್ಲಿ ಪೆಟ್ಟಾಗಿದೆ ಎಂಬ ವಿವರಳನ್ನು ನಿರೀಕ್ಷಿಸಲಾಗಿದೆ. ಚಿತ್ರತಂಡದ ಪ್ರಕಾರ ಅವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಈ ಚಿತ್ರಕ್ಕೆ ಲಿಂಗುಸ್ವಾಮಿ ಎಂಬುವವರು ನಿರ್ದೇಶಕರು.
ಇತ್ತೀಚೆಗೆ ಸಮೀರಾ ತಮ್ಮ ತೀರದ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅದೇನೆಂದರೆ ತಾವು ಕನ್ನಡದಲ್ಲಿ ಅಭಿನಯಿಸಬೇಕು ಎಂಬುದು. ಕನ್ನಡ ಚಿತ್ರ ನಿರ್ಮಾಪಕರಿಗೆ ಆಕೆಯ ಕಾಲ್‍ಶೀಟ್ ಖಾಲಿ ಇದೆ. ಆದರೆ ಕನ್ನಡ ನಿರ್ಮಾಪಕರು ಮಾತ್ರ ಯಾಕೋ ಏನೋ ಇನ್ನೂ ಧೈರ್ಯ ಮಾಡಿಲ್ಲ. (ಏಜೆನ್ಸೀಸ್)
More from Filmibeat
English summary
The Arabian horse beauty Sameera Reddy badly injured during the shooting of her Tamil film Vettai at Coimbatore. Details about the extent of injury are not known but some unit members mentioned she got few bad bruises.


Click it and Unblock the Notifications











