ನಟಿ ಸಂಜನಾ ಹುಟ್ಟುಹಬ್ಬ ಆಚರಣೆ ಭರ್ಜರಿಯಂತೆ!
ನಟಿ ಸಂಜನಾ ಹುಟ್ಟುಹಬ್ಬ ಇಂದು. ಸದ್ಯಕ್ಕೆ ಮಲೆಯಾಳಮ್ ಚಿತ್ರದ ಶೂಟಿಂಗ್ ರಜದಲ್ಲಿ ಮನೆಯಲ್ಲಿರುವ ಸಂಜನಾ ಈ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಲು ಯೋಜಿಸಿದ್ದಾರಂತೆ. "ನಾನು, ನನ್ನ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತೀನಿ. ರಾತ್ರಿ 'ಕ್ಲೋಸೆಸ್ಟ್ ಫ್ರೆಂಡ್ಸ್' ಜೊತೆ ಪಾರ್ಟಿಗೆ ಹೋಗ್ತೀನಿ" ಎಂದಿದ್ದಾರೆ ಚೆಲುವೆ ಸಂಜನಾ. ಎಷ್ಟನೇ ಹುಟ್ಟುಹಬ್ಬ ಎಂದು ನಟಿಯರನ್ನು ಕೇಳಬಾರದಲ್ಲ!
ಸದ್ಯಕ್ಕೆ, ಮಮ್ಮೂಟ್ಟಿ, ಸುರೇಶ್ ಗೋಪಿ ಜೊತೆ 'ಕಿಂಗ್ ಅಂಡ್ ಕಮಿಷನರ್' ಮಲೆಯಾಳಮ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಸಂಜನಾ. "ನನಗೆ, ಶೂಟಿಂಗ್ ಕೆಲವು ದಿನಗಳು ಮುಂದಕ್ಕೆ ಹೋಗಿರುವುದರಿಂದ ಬಿಡುವು ದೊರೆತಿದೆ. ಹಾಗಾಗಿ ಇಲ್ಲಿಯೇ 'ಬರ್ಥ್ ಡೇ' ಆಚರಿಸಿಕೊಳ್ಳಲು ಅವಕಾಶವಾಗಿದೆ, ಐ ಆಮ್ ಸೋ ಹ್ಯಾಪಿ" ಎಂದಿದ್ದಾರೆ. ನಂತರ ಮೋಹನ್ ಲಾಲ್ ಜೊತೆ 'ಕ್ಯಾಸನೊವಾ' ಮುಗಿಸಲಿದ್ದಾರಂತೆ.
ಈ ವರ್ಷ ನನಗೆ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ದೊರಕಿದೆ. ಮೂರು ಇಂಡಸ್ಟ್ರಿಗಳಲ್ಲಿ ಬ್ಯುಸಿ ಆಗಿದೀನಿ, ಈ ವರ್ಷದ ಕೊನೆಯೊಳಗೆ ನನ್ನ ಐದು ಚಿತ್ರಗಳು ಬಿಡುಗಡೆಯಾಗಲಿವೆ" ಎಂದು ಸಂಭ್ರಮಿಸಿದರು ಸಂಜನಾ. ಇನ್ನೂ ಸಾಕಷ್ಟು ಮೇಲೇರಬೇಕಾಗಿದೆ, ಅದಕ್ಕಾಗಿ ಪ್ರಯತ್ನಸುತ್ತಿದ್ದೇನೆ ಎಂದು ಹೇಳಲೂ ಮರೆಯಲಿಲ್ಲ ಈ ಬೆಡಗಿ.
ಬಿಡುಗಡೆಯಾಗಿ ಎತ್ತಂಗಡಿ ಆದ ಸಂಜನಾ ಚಿತ್ರ, ಕನ್ನಡದ 'ಸಾರಿ, ಮತ್ತೆ ಬನ್ನಿ ಪ್ರೀತ್ಸೋಣಾ' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರಂತೆ. ಆದರೆ ಹಾಗಾಯಿತು. ಈಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಚೆನ್ನಾಗಿ ಓಡಲಿದೆ ಎಂದಿದ್ದಾರೆ. ಇನ್ನುಳಿದಂತೆ, ನರಸಿಂಹ, ಒಂದು ಕ್ಷಣದಲ್ಲಿ ಹಾಗೂ ಸಾಗರ್, ಕನ್ನಡದಲ್ಲಿ ಬರಲಿರುವ ಸಂಜನಾ ಚಿತ್ರಗಳು. ನವೆಂಬರ್ ಮಧ್ಯದಲ್ಲಿ ತೆಲುಗು ಚಿತ್ರವೊಂದು ಸೆಟ್ಟೇರಲಿದೆಯಂತೆ.
ಹ್ಯಾಪೀ ಬರ್ಥ್ ಡೇ ಟು ಯು, ಸಂಜನಾ... (ಒನ್ ಇಂಡಿಯಾ ಕನ್ನಡ)


Click it and Unblock the Notifications











