ಬದಲಿ ನಾಯಕಿ ಶರ್ಮಿಳಾ ಬಡಾ ಆಸೆ
ಸ್ವಂತ ಪ್ರೊಡಕ್ಷನ್ ಚಿತ್ರ 'ಸಜನಿ" ಮೂಲಕ ಶರ್ಮಿಳಾ ಮಾಂಡ್ರೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಾಲ್ಕು ವರ್ಷಗಳೇ ಸಂದಿವೆ. ಆದರೆ ಅವರದ್ದು ಮಾತ್ರ ಆರಕ್ಕೇರದ-ಮೂರಕ್ಕಿಳಿಯದ ಪರಿಸ್ಥಿತಿ. ಈ ನಡುವೆ ಬದಲಿ ನಾಯಕಿಯಾಗಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಧನ್ ಧನಾ ಧನ್ ಚಿತ್ರದಲ್ಲಿ ಪಾರ್ವತಿ ಮೆನನ್ ಕೈಬಿಟ್ಟ ಪಾತ್ರ ಹಾಗೂ ತಮಿಳಿನಲ್ಲಿ ಜೆನಿಲಿಯಾ ಬೇಡ ಎಂದ ಸ್ಥಾನಕ್ಕೆ ಶರ್ಮಿಳಾರನ್ನು ಕರೆತರಲಾಗಿದೆ. ಇಷ್ಟಕ್ಕೂ ಈಕೆಗಿರುವ ಬಹುದೊಡ್ಡ ಆಸೆ ಏನು ಗೊತ್ತಾ?
'ನನಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸುವ ಆಸೆಯಿದೆ. ಇದೇ ವರ್ಷ ಅದು ಈಡೇರುವ ನಿರೀಕ್ಷೆಯಲ್ಲಿದ್ದೇನೆ' ಎಂದಿದ್ದಾರೆ. ಕನ್ನಡ ಚಿತ್ರರಂಗ ನನ್ನ ತವರು. ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಈಗ ಮಂಗಳೂರು ಮೂಲದ ವಿನಯ್ ನಾಯಕರಾಗಿರುವ 'ತಿಲು ಮುಲು" ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದೇನೆ.
ಉಳಿದಿರುವುದು ತೆಲುಗು ಮತ್ತು ಮಲಯಾಳಂ. ಅವೆರಡರಲ್ಲೂ ನಟಿಸುವುದು ನನ್ನ ಬಯಕೆ. ತೆಲುಗಿನಿಂದ ಈಗಾಗಲೇ ಕೆಲವು ಆಫರುಗಳು ಬಂದಿವೆ. ಆದರೆ ಯಾವ ಚಿತ್ರಕ್ಕೂ ಅಂತಿಮಗೊಂಡಿಲ್ಲ.ಇನ್ನು ಕೆಲವೇ ವಾರಗಳಲ್ಲಿ ನಾನು ಟಾಲಿವುಡ್ ಎಂಟ್ರಿ ಬಗ್ಗೆ ಅಂತೂ ಈ ವರ್ಷ ಮುಗಿಯುವುದರೊಳಗೆ ಎಲ್ಲಾ ನಾಲ್ಕು ಭಾಷೆಗಳಲ್ಲಿ ತಲಾ ಒಂದೊಂದರಂತೆ ಅಭಿನಯಿಸುವ ನಿರೀಕ್ಷೆಯಲ್ಲಿದ್ದೇನೆ ಚತುರ್ಭಾಷಾ ನಟಿ ಎನಿಸಿಕೊಳ್ಳಬೇಕು ಎನ್ನುತ್ತಾರೆ ಶರ್ಮಿಳಾ.
ತಮಿಳು ಚಿತ್ರದ ಪಾತ್ರ ಹೇಗಿದೆ?: ವಿನಯ್ ನಾಯಕನಾಗಿರುವ ಚಿತ್ರದಲ್ಲಿ ಬ್ರಿಟನ್‌ನಿಂದ ಭಾರತಕ್ಕೆ ಬರುವ ಬಬ್ಲಿ ಹುಡ್ಗಿ ಪಾತ್ರ. ತಮಿಳು ಶಬ್ದ ಒಂದೆರಡು ಕಲಿತೆ ಅಷ್ಟೇ. ಬಿಡುವಿಲ್ಲದ ಚಿತ್ರೀಕರಣ ಎಂದರು. ಅಂದ ಹಾಗೆ ತೆಲುಗಿನ ಡೀ ಚಿತ್ರದ ರಿಮೇಕ್ ಚಿತ್ರವಾದ "ತಿಲು ಮುಲು" ತಮಿಳು ಚಿತ್ರದಲ್ಲಿ ಬೆಂಗಳೂರಿನ ವಿನಯ್ ರೈ, ಶರ್ಮಿಳಾ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ತಮಿಳು, ತೆಲುಗಿನಲ್ಲಿ ಆಫರ್ ಗಳು ಹೆಚ್ಚಾಗಿ ಧನ್ ಧನಾ ಧನ್ ಚಿತ್ರದಿಂದ ಹೊರಬೀಳುವ ಸಾಧ್ಯತೆಯೂ ಇದೆ.


Click it and Unblock the Notifications











