»   » ಕಾಂಜಿ ಪಿಂಜಿ ಚಿತ್ರಗಳಲ್ಲಿ ಶ್ರುತಿ ನಟಿಸೊಲ್ಲವಂತೆ

ಕಾಂಜಿ ಪಿಂಜಿ ಚಿತ್ರಗಳಲ್ಲಿ ಶ್ರುತಿ ನಟಿಸೊಲ್ಲವಂತೆ

Subscribe to Filmibeat Kannada

ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಇನ್ನು ಮುಂದೆ ಕಾಂಚಿ ಪಿಂಜಿ ಚಿತ್ರಗಳಲ್ಲಿ ನಟಿಸುವುದಿಲ್ಲವಂತೆ. ಇನ್ನೇನಿದ್ದರೂ ತಮಗೆ ಸವಾಲೊಡ್ಡುವ ಪಾತ್ರಗಳಲ್ಲಿ ಮಾತ್ರ ನಟಿಸುತ್ತಾರಂತೆ.ಅದಕ್ಕೆ ಇರಬೇಕು ಈ ವರ್ಷ ಶ್ರುತಿ ಎರಡೇ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ವರ್ಷಾರಂಭದಲ್ಲಿ ಬಿಡುಗಡೆಯಾದ ಕವಿತಾ ಲಂಕೇಶ್ ರ ಅವ್ವ ಹಾಗೂ ವರ್ಷಾಂತ್ಯಕ್ಕೆ ಅಕ್ಕ ತಂಗಿ ಚಿತ್ರದಲ್ಲಿ ನಟಿಸಿದ್ದರು. ಅಕ್ಕ ತಂಗಿ ಚಿತ್ರದಲ್ಲಿನ ಅವರ ಅಭಿನಯ ಅತ್ತ ಮಾಧ್ಯಮದವರ ಇತ್ತ ಪ್ರೇಕ್ಷಕರ ಗಮನ ಸೆಳೆದಿದೆ.

ಮದುವೆಯಾದ ನಂತರ ಬಹಳಷ್ಟು ನಟಿಯರು ಅಡುಗೆ ಮನೆಗೆ ಸೀಮಿತವಾಗುತ್ತಾರೆ. ಆದರೆ ಶ್ರುತಿ ವಿಚಾರದಲ್ಲಿ ಹಾಗಾಗಲಿಲ್ಲ. ಅವರು ಬಿಡುವು ಸಿಕ್ಕಾಗಲೆಲ್ಲಾ ಮುಖಕ್ಕೆ ಬಣ್ಣಬಳಿದುಕೊಳ್ಳುತ್ತಿದ್ದಾರೆ. ಅಳುಮುಂಜಿ ಪಾತ್ರಗಳನ್ನು ಪ್ರೇಕ್ಷಕರು ಎಷ್ಟು ದಿನ ಅಂತ ಸಹಿಸಿಕೊಳ್ಳಲು ಸಾಧ್ಯ ಹೇಳಿ. ಹಾಗಾಗಿ ಇನ್ನು ಮುಂದೆ ಅಂತಹ ಪಾತ್ರಗಳಲ್ಲಿ ನಟಿಸುವುದಿಲ್ಲ.ಅಳೆದು ತೂಗಿ ಚಿತ್ರಗಳನ್ನು ಒಪ್ಪಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಈ ವರ್ಷ ಬಿಡುಗಡೆಯಾದ ಅವ್ವ ಮತ್ತು ಅಕ್ಕ ತಂಗಿ ಚಿತ್ರಗಳು ಸೊಗಸಾಗಿವೆ ಎಂದು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada