For Quick Alerts
  ALLOW NOTIFICATIONS  
  For Daily Alerts

  ಆಹಾ ಹೋಳಿಗೆ ತುಪ್ಪ ಬಡಿಸಲಿದ್ದಾರೆ ನಟಿ ಸ್ನೇಹಾ

  By Rajendra
  |

  ಆಹಾ ನನ್ನ ಮದುವೆಯಂತೆ ಓಹೋ ನನ್ನ ಮದುವೆಯಂತೆ ಎಂದು ಸ್ನೇಹಾ ಕುಣಿದಾಡುತ್ತಿದ್ದಾರೆ. ಮೇ 11ಕ್ಕೆ ಸ್ನೇಹಾ ತನ್ನ ಪ್ರಿಯಕರನ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಚೆನ್ನೈನ ಶ್ರೀವಾರು ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಇವರಿಬ್ಬರ ಮದುವೆ ನೆರವೇರಲಿದೆಯಂತೆ.

  ಪ್ರಸನ್ನ ಹಾಗೂ ಸ್ನೇಹಾ ಇಬ್ಬರೂ ಒಟ್ಟಿಗೆ ತಮಿಳಿನ 'ಅಚಮುಂಡು ಅಚಮುಂಡು' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಆಗಲೇ ಇವರಿಬ್ಬರ ನಡುವೆ ಪ್ರೇಮ ಚಿಗುರೊಡೆದಿತ್ತು. ತಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಶೀಘ್ರದಲ್ಲೆ ಮದುವೆಯನ್ನೂ ಮಾಡಿಕೊಳ್ಳಲಿದ್ದೇವೆ ಎಂದಿದ್ದರು ಈ ತಾರಾ ಜೋಡಿ.

  ಯಾವೊನಿಗೆ ಗೊತ್ತು, ಕೊನೆಯ ಕ್ಷಣದಲ್ಲಿ ಮುಹೂರ್ತ ಬದಲಾದರೂ ಆಗಬಹುದು. ಒಟ್ಟಿನಲ್ಲಿ ಈ ಬಾರಿ ಸ್ನೇಹಾ ಮದುವೆ ಗ್ಯಾರಂಟಿ ಎನ್ನಲಾಗಿದೆ. ತನ್ನ ಬಾಯ್‌ಫ್ರೆಂಡ್ ಪ್ರಸನ್ನ ಜೊತೆ ಸ್ನೇಹಾ 'ಅಂದರ್ ಬಾಹರ್' ಆಡಿದ್ದು ಗುಟ್ಟಾಗೇನು ಉಳಿದಿರಲಿಲ್ಲ. ಈಗ ಮದುವೆ ಮೂಲಕ ಇಬ್ಬರೂ ಒಂದಾಗುತ್ತಿದ್ದಾರೆ ಅಷ್ಟೇ. (ಏಜೆನ್ಸೀಸ್)

  English summary
  South Indian actress Sneha is all set to enter the wedlock with her long time boyfirned Prasanna soon. The latest buzz is that the couple will tie the wedding knot on May 11, 2012 at Sri Varu Venkateshwara Kalyana Mandapam in Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X