'ಜರಾಸಂಧ'ನಿಂದ ಚಿಗರೆ ಐಂದ್ರಿತಾ ರೇಗೆ ಬಿಡುಗಡೆ

By Rajendra

2011ನೇ ವರ್ಷ ಚಿಗರೆ ಕಂಕಳ ಬೆಡಗಿ ಐಂದ್ರಿತಾ ರೇಗೆ ಆರಂಭದಲ್ಲೇ ಶಾಕ್ ನೀಡಿದೆ. 'ಧೂಳ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಕೈಕೊಟ್ಟರು ಎಂಬ ಕಾರಣಕ್ಕೆ ಐಂದ್ರಿತಾ ಮೇಲೆ ಚಿತ್ರದ ನಿರ್ದೇಶಕ ಭರಣಿ ಕೆಂಡ ಕಾರಿದ್ದರು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ 'ಜರಾಸಂಧ' ಚಿತ್ರದ ಅವಕಾಶ ಐಂದ್ರಿತಾ ರೇ ಕೈತಪ್ಪಿದೆ.

'ಜರಾಸಂಧ' ಚಿತ್ರದಲ್ಲಿ ಅಭಿನಯಿಸುವ ಅವಕಾಶ 'ಪೊರ್ಕಿ' ಚಿತ್ರದಲ್ಲಿ ಅಭಿನಯಿಸಿದ್ದ ಪ್ರಣೀತಾ ಪಾಲಾಗಿದೆ. ಆದರೆ ಐಂದ್ರಿತಾ ಮೇಲಿನ ಕೋಪಕ್ಕೋ ಅಥವಾ ಆಕೆ ಇಷ್ಟವಾಗದ ಕಾರಣಕ್ಕೋ 'ಜರಾಸಂಧ' ಕೈತಪ್ಪಿಲ್ಲ. ಡೇಟ್ಸ್ ಹೊಂದಾಣಿಕೆಯಾಗದೆ ಇರುವುದೇ ಐಂದ್ರಿತಾರನ್ನು ಕೈಬಿಡಲು ಕಾರಣ ಎನ್ನಲಾಗಿದೆ. ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ಶಶಾಂಕ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

ಅಂದಹಾಗೆ 'ಜರಾಸಂಧ' ಚಿತ್ರದ ನಾಯಕ ನಟ ದುನಿಯಾ ವಿಜಯ್. ಸದ್ಯಕ್ಕೆ 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್'ನಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಈ ತಿಂಗಳಲ್ಲೇ ಚಿತ್ರೀಕರಣ ಆರಂಭಿಸಬೇಕಿದ್ದ 'ಜರಾಸಂಧ' ಫೆಬ್ರವರಿಗೆ ಮುಂದೂಡಲ್ಪಟ್ಟಿದೆ. ಐಂದ್ರಿತಾ ರೇಗೆ ಅವಕಾಶ ತಪ್ಪಿದ್ದು ಹಾಗೂ ವಿಜಯ್ ಬ್ಯುಸಿಯಾಗಿರುವುದೇ 'ಜರಾಸಂಧ' ಚಿತ್ರೀಕರಣ ಮುಂದೂಡಲು ಕಾರಣವಾಗಿದೆ. [ಪ್ರಣೀತಾ]

More from Filmibeat

English summary
Actress Aindrita Ray has been replaced by Porki fame actress Pranitha in Director Shashank forthcoming Kannada movie Jarasandha, which stars Duniya Vijay. Producers Basavaraj and Gangadhar have dumped Andy from the project due to the clash of her dates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X