For Quick Alerts
  ALLOW NOTIFICATIONS  
  For Daily Alerts

  ಗೀತಪ್ರಿಯ ಚಿಕಿತ್ಸೆಗೆ ಬಿಬಿಎಂಪಿ ರು.1 ಲಕ್ಷ ಚೆಕ್

  By Rajendra
  |

  ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ಗೀತಸಾಹಿತಿ ಗೀತಪ್ರಿಯ (81) ಅವರ ಚಿಕಿತ್ಸೆಗೆ ಎಲ್ಲಡೆಯಿಂದಲೂ ಧನಸಹಾಯ ಹರಿದುಬರುತ್ತಿದೆ. ಮೊನ್ನೆ ಮೊನ್ನೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರು.1.50 ಲಕ್ಷ ಧನ ಸಹಾಯ ನೀಡಲಾಗಿದೆ. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಗೀತಪ್ರಿಯ ಚಿಕಿತ್ಸೆಗೆ ರು.1 ಲಕ್ಷ ಧನ ಸಹಾಯ ನೀಡಿದೆ.

  ಬಿಬಿಎಂಪಿಯ ಉಪ ಮೇಯರ್ ಎಸ್ ಹರೀಶ್ ಅವರು ಒಂದು ಲಕ್ಷ ರುಪಾಯಿಗಳ ಚೆಕ್ ಅನ್ನು ಗೀತಪ್ರಿಯ ದಂಪತಿಗೆ ಹಸ್ತಾಂತರಿಸಿದರು. ಮಹಾಲಕ್ಷ್ಮಿ ಬಡಾವಣೆಯ ಗೀತಪ್ರಿಯ ನಿವಾಸಕ್ಕೆ ಭೇಟಿ ನೀಡಿ ಚೆಕ್ ವಿತರಿಸಲಾಯಿತು. ಗೀತಪ್ರಿಯ ಅವರು ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಪರೇಷನ್ ಕಾರಣದಿಂದಾಗಿ ಮಾತಾಡಲು ಬಾಯಿ ತೆಗೆದರೂ ಮಾತೇ ಹೊರಡದಂತಹ ಪರಿಸ್ಥಿತಿ ಅವರದು.

  ವರನಟ ಡಾ.ರಾಜ್‌ಕುಮಾರ್ ಅವರ 'ಮಣ್ಣಿನ ಮಗ' ಸೇರಿದಂತೆ ಹಲವು ಉತ್ತಮ ಚಿತ್ರಗಳನ್ನು ಗೀತಪ್ರಿಯ ಅವರು ಕೊಟ್ಟಿದ್ದಾರೆ. ಅವರ ಸಾಮಾಜಿಕ ಕಳಕಳಿ ಸ್ಮರಣಾರ್ಹ ಎಂದಿರುವ ಹರೀಶ್, ಕನ್ನಡ ಚಿತ್ರೋದ್ಯಮವೂ ಅವರ ಚಿಕಿತ್ಸೆಗೆ ನೆರವಾಗಲಿ ಎಂದಿದ್ದಾರೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  The Bruhat Bangalore Mahanagara Palike (BBMP) has been given Rs.1 lakh aid for Kannada lyricist Geethapriya. Geethapriya (81), a living legend of Kannada filmdom is fighting ill health. BBMP deputy Mayor S.Harish has handed over a cheque of Rs.1 lakh to the Geethapriya couple in his Mahalakshmilayout residence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X