»   »  ನೈಜ ಘಟನೆ ಆಧಾರಿತ ಪಾಟೀಲರ ಸಲ್ಯೂಟ್

ನೈಜ ಘಟನೆ ಆಧಾರಿತ ಪಾಟೀಲರ ಸಲ್ಯೂಟ್

Subscribe to Filmibeat Kannada
BC Patil makes comeback through Salute
ಸುದೀರ್ಘ ವಿರಾಮದ ನಂತರ ಮಾಜಿ ಪೊಲೀಸ್, ಹಾಲಿ ಶಾಸಕ ಬಿ.ಸಿ.ಪಾಟೀಲ್ ರ 'ಸಲ್ಯೂಟ್' ಚಿತ್ರ ಸೆಟ್ಟೇರಿದೆ. ಪಾಟೀಲ್ ಈ ಚಿತ್ರದ ನಾಯಕ ಮಾತ್ರವಲ್ಲ ನಿರ್ಮಾಪಕ ಜತೆಗೆ ಚಿತ್ರಕಥೆ, ಸಂಭಾಷಣೆಯನ್ನು ಹೆಣೆದಿದ್ದಾರೆ. ಪೊಲೀಸ್ ವೃತ್ತಿಜೀವನದ ನೈಜ ಘಟನೆಗಳನ್ನು ಸಲ್ಯೂಟ್ ಒಳಗೊಂಡಿದೆ ಎನ್ನುತ್ತಾರೆ ಪಾಟೀಲ್.

ಈ ಚಿತ್ರದಲ್ಲಿ ಅವರು ಪೊಲೀಸ್ ಪೇದೆಯಿಂದ ಹಂತಹಂತವಾಗಿ ಗೃಹ ಸಚಿವ ಸ್ಥಾನಕ್ಕೇರುತ್ತಾರಂತೆ. ಚಿತ್ರದ ನಾಯಕಿ ಅಶ್ವಿನಿ, ಆಕೆಯದು ಕಡಕ್ ಪೊಲೀಸ್ ಅಧಿಕಾರಿ ಪಾತ್ರ. ತಮ್ಮ ಸ್ವಕ್ಷೇತ್ರವಾದ ಹಿರೇಕೆರೂರು, ಹಾವೇರಿಗಳಲ್ಲಿ ಸಲ್ಯೂಟ್ ಚಿತ್ರೀಕರಣ ಬಿರುಸಾಗಿ ಸಾಗುತ್ತಿದೆ. ಈ ವರ್ಷ ಜೂನ್ ವೇಳೆಗೆ ಚಿತ್ರವನ್ನು ತೆರೆಗೆ ತರಲು ಪಾಟೀಲ್ ಶ್ರಮಿಸುತ್ತಿದ್ದಾರೆ.

ನೈಸ್ ಕಂಪನಿ ಮಾಲೀಕ ಅಶೋಕ್ ಖೇಣಿ ಈ ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದ್ದಾರೆ. ಪೊಲೀಸ್ ಕಮೀಷನರ್ ಪಾತ್ರ ನಿರ್ವಹಿಸಲು ಹಾಲಿ ಸಂಸದ ಹೆಚ್ ಟಿ ಸಾಂಗ್ಲಿಯಾನ ಒಪ್ಪಿಕೊಂಡಿದ್ದಾರೆ. ಖಳನಾಯಕನಾಗಿ ವಿಜಯ್ ಕೌಂಡಿನ್ಯ ಅಭಿನಯವಿರುತ್ತದೆ.

''ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯೂ ನಾಗರಿಕನಿದ್ದಂತೆ ಹಾಗೆಯೇ ಪ್ರತಿಯೊಬ್ಬ ನಾಗರಿಕನು ಪೊಲೀಸ್ ಇದ್ದಂತೆ'' ಎಂಬ ಸಿದ್ಧಾಂತವೇ ಸಲ್ಯೂಟ್ ಚಿತ್ರದ ತಳಪಾಯ. ಕೌರವ ವೆಂಕಟೇಶ್, ರವಿವರ್ಮಾರ ಸಾಹಸ ಚಿತ್ರದ ಬೆನ್ನಿಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನಿರ್ಮಾಪಕ ಸಂಘದ ಫತ್ವಾಗೆ ಪಾಟೀಲ್ ವಿರೋಧ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada