ನಟಿಯರಾದ ತಾರಾ, ಐಂದ್ರಿತಾ ರೇಗೆ ಗ್ಲೂಕೋಸ್ ಪರೀಕ್ಷೆ
ಬದಲಾಗುತ್ತಿರುವ ಜೀವನಶೈಲಿಯಿಂದ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಧುಮೇಹದ ಬಗ್ಗೆ ಜನಜಾಗೃತಿ ಮೂಡಿಸಲು ಬುಧವಾರ (ನ.9) ಲೈಫ್‌ಸ್ಟೈಲ್ ಮಾಲ್‌ನಲ್ಲಿ ನಡೆದ 'ಬೀಟ್ ಡಯಾಬೆಟೀಸ್' ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾ ತಾರೆಗಳು ಪಾಲ್ಗೊಂಡಿದ್ದರು.
ತಾರಾ, ಐಂದ್ರಿತಾ ರೇ, ಯೋಗರಾಜ್ ಭಟ್ ಗ್ಲೂಕೋಸ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲೈಫ್‌ಸ್ಟೈಲ್ ವ್ಯವಸ್ಥಾಪಕ ನಿರ್ದೇಶಕ ಕಬೀರ್ ಲುಂಬಿ ಮಾತನಾಡುತ್ತಾ, ಆಹಾರ, ವ್ಯಾಯಾಮ ಇತ್ಯಾದಿ ಆರೋಗ್ಯ ಸೂತ್ರಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ವಿವರಿಸಲಾಗುತ್ತದೆ ಎಂದರು.
ಈ ಕಾರ್ಯಕ್ರಮದ ಭಾಗವಾಗಿ ಶ್ರೀಸಾಮನ್ಯರು ತಮ್ಮ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಉಚಿತವಾಗಿ ಪರೀಕ್ಷಿಸಿಕೊಳ್ಳಬಹುದು. ನವೆಂಬರ್ 11ರಿಂದ 13ರವರೆಗೆ ಬೆಂಗಳೂರಿನ ಲೈಫ್‌ಸ್ಟೈಲ್, ಸ್ಪಾರ್, ಮ್ಯಾಕ್ಸ್, ಶ್ಲಾಷ್, ಬೋಸ್ನಿ, ಫಿಟೆನೆಸ್ ಫಸ್ಟ್ ಕೇಂದ್ರಗಳಲ್ಲಿ ಈ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಿದ್ದಾರೆ.
ನವೆಂಬರ್ 21ರಂದು ಕಂಠೀರವ ಸ್ಟೇಡಿಯಂ, ಕಬ್ಬನ್ ಪಾರ್ಕ್, ಕಬ್ಬನ್ ರಸ್ತೆ, ಕಸ್ತೂರಬಾ ರಸ್ತೆ, ವಿಧಾನಸೌಧ, ಕೆ ಆರ್ ಸರ್ಕಲ್‌ನಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಸಿನಿಮಾ ತಾರೆಗಳು ಈ ಪಾದಯಾತ್ರೆಗೆ ಕೈ ಜೋಡಿಸಲಿದ್ದಾರೆ. ಮತ್ತಷ್ಟು ವಿವರಗಳಿಗಾಗಿ www.beatdiabetes.in ಜಾಲತಾಣವನ್ನು ನೋಡಬಹುದು. (ಒನ್‌ಇಂಡಿಯಾ ಕನ್ನಡ)


Click it and Unblock the Notifications











