ಈ ವಾರ ಭದ್ರನ ಜೊತೆ ಸೊಗಸುಗಾರ ರಿಂಗ ರಿಂಗಾ
ಈ ವಾರ (ಆ.12) ಎರಡು ಕನ್ನಡ ಚಿತ್ರಗಳು ಚಿತ್ರಮಂದಿರಗಳಿಗೆ ನುಗ್ಗಲಿವೆ. ಆದರೆ ಪ್ರೇಕ್ಷಕರ ನೂಕು ನುಗ್ಗಲು ಇರುತ್ತದೋ ಇಲ್ಲವೋ ಗೊತ್ತಿಲ್ಲ. ಈ ಎರಡೂ ಚಿತ್ರಗಳ ನಡುವೆ ಅಂಥಹಾ ಭಾರಿ ಸ್ಪರ್ಧೆಯೇನು ಇಲ್ಲದಿದ್ದರೂ ತಕ್ಕಮಟ್ಟಿಗೆ ಸುದ್ದಿ ಮಾಡಿದ ಚಿತ್ರಗಳಿವು. ಸೊಗಸುಗಾರ ಚಿತ್ರವಂತೂ ಬಾಕ್ಸ್‌ನಿಂದ ಹೊರಬರುತ್ತಿರುವುದೇ ಒಂದು ಪವಾಡ.
ಭದ್ರ: ಪ್ರಜ್ವಲ್ ಈ ಚಿತ್ರದ ನಾಯಕನಾಗಿ ನಟಿಸಿರುವ 'ಭದ್ರ'ನ ನಾಯಕಿಯಾಗಿ ಡೈಸಿ ಶಾ ಅಭಿನಯಿಸಿದ್ದಾರೆ. ಸತ್ಯಜಿತ್, ಶರಣ್, ಬುಲೆಟ್ ಪ್ರಕಾಶ್, ಕಾಶಿ, ಗಿರೀಶ್, ಸಂಪತ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಎಂ.ಎನ್.ಕೆ ಮೂವೀಸ್ ಲಾಂಛನದಲ್ಲಿ ಎಂ.ಎನ್.ಕುಮಾರ್ ನಿರ್ಮಿಸಿರುವ ಚಿತ್ರವಿದು.
ಮಹೇಶ್‌ರಾವ್ ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಶ್ರೀಗುರು ಸಂಗೀತ ನೀಡಿದ್ದಾರೆ. ಜೈಆನಂದ್ ಛಾಯಾಗ್ರಹಣ, ಶ್ರೀಕಾಂತ್ ತೆಂಗಿನತೋಟ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಉಮೇಶ್‌ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ಶಂಕರ್ ಬಿಲ್ಲೆಮನೆ ಸಂಭಾಷಣೆ ಬರೆದಿದ್ದಾರೆ.
ಸೊಗಸುಗಾರ: ರವಿಚಂದ್ರನ್ ಅವರು ಅಭಿನಯಿಸಿದ 'ಕನಸುಗಾರ' ಚಿತ್ರವನ್ನು ನಿರ್ದೇಶಿಸಿದ್ದ ಕರಣ್ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿರುವ ಕರಣ್ ಈ ಚಿತ್ರದ ನಿರ್ಮಾಪಕರು ಹೌದು. ಚೋಟಾ.ಕೆ.ನಾಯ್ಡು ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಜೇಶ್‌ರಾಮನಾಥ್ ಸಂಗೀತ ನೀಡಿದ್ದಾರೆ.
ವಿನಯನ್ ಕಥೆ, ಸಂಜೀವರೆಡ್ಡಿ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಜೈಸೂರ್ಯ, ನಿಷಾ, ದೊಡ್ಡಣ್ಣ, ಸಾಧುಕೋಕಿಲಾ, ತಾರಾ, ಚಿತ್ರಾಶೆಣೈ, ಶ್ರೀನಾಥ್, ಹೇಮಾಚೌಧರಿ, ಮಂಡ್ಯರಮೇಶ್, ಬಿ.ವಿ.ರಾಧಾ, ಗಜರ್‌ಖಾನ್ ಮುಂತಾದವರಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











