twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗದ ಬದುಕು ಎಲ್ಲವನ್ನೂ ನೀಡಿದೆ: ಭಾರತಿ

    By Mahesh
    |

    ನಾನು ಯಾವುದೇ ಪಾತ್ರಕ್ಕೂ ಆಸೆಪಡಲಿಲ್ಲ. ಆದರೆ ಬಂದ ಎಲ್ಲ ಪಾತ್ರವನ್ನೂ ಆಸೆ ಅನುಭವಿಸಿದೆ, ಜೀವ ತುಂಬಿದೆ. ಕ್ರೀಡೆ, ಸಂಗೀತ ಹಾಗೂ ನೃತ್ಯದಲ್ಲಿ ಇದ್ದ ಆಸಕ್ತಿ ಆರಂಭದಲ್ಲಿ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಭಗವಂತನ ಕರುಣೆಯಿಂದ ಇಂದೆಲ್ಲ ದೊರೆತಿದೆ. ವಿಷ್ಣುವರ್ಧನ್ ರಂಥ ಮೇರು ನಟನ ಪತ್ನಿಯಾಗಿದ್ದು ನನ್ನ ಸೌಭಾಗ್ಯ' ಎಂದು ಹಿರಿಯ ಕಲಾವಿದೆ ಪಂಚ ಭಾಷಾ ತಾರೆ ಭಾರತಿ ವಿಷ್ಣುವರ್ಧನ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

    ಶನಿವಾರ ಕರ್ನಾಟಕ ಚಿತ್ರಕಲಾ ಅಕಾಡೆಮಿ ಆಶ್ರಯದಲ್ಲಿ ನಡೆದ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಚಿತ್ರ ರಂಗದಲ್ಲಿ ತಾವು ಪಾದಾರ್ಪಣೆ ಮಾಡಿದ ಕಾಲದಿಂದ ಹಿಡಿದು ಈಗಿನ ನಾಯಕಿಯರ ಬಗ್ಗೆ ನಿರರ್ಗಳವಾಗಿ ಮಾತನಾಡಿದರು.

    'ಚಿತ್ರರಂಗದ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲದ ಸಮಯದಲ್ಲಿ ನಾನು ಚಿತ್ರರಂಗಕ್ಕೆ ಕಾಲಿಟ್ಟೆ, ಆದರೆ ನಾನು ಚಿತ್ರರಂಗ ಪ್ರವೇಶಿಸಲು ಕಾರಣರಾದ ತಂದೆಯ ಎಲ್ಲ ಆಸೆಯನ್ನು ಭಗವಂತ ನೆರವೇರಿಸಿದ್ದಾನೆ ಎಂಬುದೇ ತನಗಿರುವ ಸಂತೃಪ್ತಿ' ಎಂದರು.

    ಚಿತ್ರರಂಗದಲ್ಲಿ ಒಗ್ಗಟ್ಟಿರಬೇಕು: ಚಿತ್ರರಂಗ ಸಂಸಾರ ಇದ್ದಂತೆ. ಅಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಒಗ್ಗಟ್ಟಿದ್ದರೆ ಮಾತ್ರ ಚಿತ್ರರಂಗ ಬೆಳೆಯಲು ಸಾಧ್ಯ. ನಾವು ಒಂದು ಗೂಡದಿರುವುದಕ್ಕೆ ನಮ್ಮ ಮನಸು, ಚಿಂತೆ ಇದಕ್ಕೆ ಕಾರಣ. ಕಲಾತ್ಮಕ ಹಾಗೂ ವಾಣಿಜ್ಯ ಚಿತ್ರ ಎನ್ನುವುದು ತಪ್ಪು ಎಂದರು. ನಮ್ಮಲ್ಲಿಯೂ ಉತ್ತಮ ಕಲಾವಿದರಿದ್ದಾರೆ. ಅದರಲ್ಲೂ ಮುಖ್ಯವಾಗಿ ನಾಯಕಿಯರಿದ್ದಾರೆ. ಆದರೆ ಅವರ ಬಗ್ಗೆ ನಮಗೆ ಕಾಳಜಿ ಇಲ್ಲ. ಪರಿಸ್ಥಿತಿ ಹೀಗೆ ಇದ್ದರೆ ನಮ್ಮ ಚಿತ್ರರಂಗ ಉದ್ದಾರವಾಗುವುದು ಹೇಗೆ ಎಂದು ಪ್ರಶ್ನಿಸಿದ ಭಾರತಿ, ಇಂದು ಹೊರಗಿನವರಿಗೆ ಮಣೆ ಹಾಕುವ ಕೆಲಸ ನಡೆದಿದೆ. ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಎಂದು ಕೋರಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಿರ್ದೇಶಕ ಟಿ.ಎಸ್. ನಾಗಾಭರಣ ಉಪಸ್ಥಿತರಿದ್ದರು.

    Sunday, October 10, 2010, 15:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X