»   » 'ಭೀಮಾ ತೀರದಲ್ಲಿ' ಸ್ಟೋರಿ ನಿಜಕ್ಕೂ ಯಾರ ಸ್ವತ್ತು?

'ಭೀಮಾ ತೀರದಲ್ಲಿ' ಸ್ಟೋರಿ ನಿಜಕ್ಕೂ ಯಾರ ಸ್ವತ್ತು?

Posted By:
Subscribe to Filmibeat Kannada
<ul id="pagination-digg"><li class="next"><a href="/news/10-plagiarism-allegation-on-ravi-belagere-by-malagonda-aid0052.html">Next »</a></li></ul>

"ಚಂದಪ್ಪ ಹರಿಜನ ಬಗ್ಗೆ ಮೊದಲು ಬರೆದದ್ದು ನಾನು. ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಗೆ ಮಾಹಿತಿ, ಫೋಟೋ ಕೊಟ್ಟದ್ದೂ ನಾನೇ. ಪುಸ್ತಕದಲ್ಲಿ ಸೌಜನ್ಯಕ್ಕೂ ನನ್ನ ಹೆಸರು ಹಾಕಿಲ್ಲ" ಎಂದು ಪತ್ರಕರ್ತ ಟಿ.ಕೆ.ಮಳಗೊಂಡ ಎಂಬುವವರು ಕನ್ನಡಪ್ರಭ ಪತ್ರಿಕೆಯಲ್ಲಿ ನೇರವಾಗಿ ಆರೋಪಿಸುವ ಮೂಲಕ "ಭೀಮಾ ತೀರದ" ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ.

'ಅಪರಾಧಕ್ಕೆ ಸವಾಲು' ಎಂಬ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿರುವ ಇವರು, ಭೀಮಾ ತೀರದ ಸರಣಿ ಹತ್ಯೆಗಳ ಕುರಿತು ಮೊದಲು ವರದಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ರವಿ ಬೆಳಗೆರೆ ಅವರನ್ನು ಮಹಾನ್ ಸುಳ್ಳುಗಾರ ಎಂದು ಜರಿದಿರುವ ಮಳಗೊಂಡ, ಭೀಮಾ ತೀರದ ಹತ್ಯೆಗಳು, ಹಂತಕರನ್ನು ವಿಜೃಂಭಿಸಿ, ಅತಿರಂಜಿತ ವರದಿಗಳನ್ನು ಮಾಡಿ ಮತ್ತಷ್ಟು ರಕ್ತಪಾತ ಹೆಚ್ಚಲು ಬೆಳಗೆರೆ ಕಾರಣವಾಗಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.

ತಮ್ಮ ವರದಿಗಳನ್ನು ತಿರುವು ಮರುವು ಮಾಡಿ ರವಿ ಬೆಳಗೆರೆ ಅವರು ತಮ್ಮ ಹಾಯ್ ಬೆಂಗಳೂರಿನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಈಗ ಅವರು ನಾನೇ ಮೊದಲು ಪ್ರಕಟಿಸಿದ್ದು ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಳಗೊಂಡ ವಿಷಾದಿಸಿದ್ದಾರೆ.

<ul id="pagination-digg"><li class="next"><a href="/news/10-plagiarism-allegation-on-ravi-belagere-by-malagonda-aid0052.html">Next »</a></li></ul>
English summary
Kannada movie Bheema Theeradalli plagiarism row lands in another controversy. Journalist TK Malagonda has claimed that (In Kannada Prabha), he has first reported on Chandappa Harijana, a leading criminal of the Bheema Basin who was killed in a police encounter in May 2000.
Please Wait while comments are loading...