»   » ಛಾಯಾ ಬಂದಳು ಗಾಂಧಿಬಜಾರ್ ಕಡೆಗೆ

ಛಾಯಾ ಬಂದಳು ಗಾಂಧಿಬಜಾರ್ ಕಡೆಗೆ

Subscribe to Filmibeat Kannada

ಪ್ರತಿಭಾವಂತ ನಟಿ ಎಂದು ಗುರುತಿಸಿಕೊಂಡಿರುವ ಪಂಚಭಾಷಾ ತಾರೆ ಛಾಯಾಸಿಂಗ್ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಕವಿತಾ ಲಂಕೇಶ್, ವಿಜಯಲಕ್ಷ್ಮಿಸಿಂಗ್ ಹಾಗೂ ಸುಮನಾ ಕಿತ್ತೂರು ನಂತರ ಆ ಸರದಿಯಲ್ಲಿ ಛಾಯಾ ಸಿಂಗ್ ಸೇರ್ಪಡೆಯಾಗಿದ್ದಾರೆ. 'ಗಾಂಧಿ ಬಜಾರ್ 'ಎಂಬ ಸಿನಿಮಾ ನಿರ್ಮಿಸಲು ಭೂಮಿಕೆಯನ್ನು ತಯಾರಿಸಿದ್ದಾರೆ.

ಛಾಯಾಸಿಂಗ್ ಪ್ರತಿಭಾವಂತೆ ಎಂಬುವದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಪ್ರತಿಭೆಗೆ ತಕ್ಕಂತೆ ಕನ್ನಡದಲ್ಲಿ ಅವಕಾಶ ಸಿಗಲಿಲ್ಲ. ಅಲ್ಲೊಂದು ಇಲ್ಲೊಂದು ಚಿತ್ರಗಳು ದೊರಕಿದವೆಯೇ ಹೊರತು, ಗಾಂಧಿನಗರ ಅವರ ಕಲೆಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅವಕಾಶಗಳು ಕಡಿಮೆಯಾದಾಗ ತಮಿಳುನತ್ತ ಮುಖ ಮಾಡಿದ ಛಾಯಾ, ಅಲ್ಲಿ ತಿರುಡ ತಿರುಡಿ ಚಿತ್ರದಲ್ಲಿ ನಟಿಸಿದರು. ಕೊಂಚ ಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿದರು. ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದ್ದರಿಂದ ಕಿರುತೆರೆಯತ್ತ ಹೆಜ್ಜೆ ಹಾಕಿದರು. ಜೀ ಟಿವಿಯಲ್ಲಿ ಕುಣಿಯೋಣ ಬಾರಾ ಎಂಬ ಕುಣಿಯುವ ಎಪಿಸೋಡ್ ಗೆ ತೀರ್ಪುಗಾರರಾಗಿ ಸಮರ್ಥವಾಗಿ ಕೆಲಸ ನಿರ್ವಹಿಸಿದರು. ಇತ್ತೀಚೆಗೆ ಆ ಸಂಚಿಕೆ ಕೊನೆಗೊಂಡಿದ್ದರಿಂದ ಛಾಯಾಸಿಂಗ್ ನಿರ್ದೇಶನವನ್ನು ಒಂದು ಕೈ ನೋಡೆ ಬೀಡೋಣ ಎಂದು ನಿರ್ದೇಶನಕ್ಕೆ ಇಳಿದಿದ್ದಾರೆ.

ಗಾಂಧಿಬಜಾರ್ ಅವರ ಚಿತ್ರದ ಹೆಸರು. ಇದೇನೂ ಬಸವನಗುಡಿ ಗಾಂಧಿಬಜಾರಿನಲ್ಲೇನಿದೆ ಎಂದು ಹುಬ್ಬೇರಿಸಿಬೇಡಿ. ಹೆಸರು ಮಾತ್ರ ಗಾಂಧಿಬಜಾರ್. ಇದು ಹೈದರಾಬಾದ್ ಬ್ಲೂಸ್ ಮಾದರಿ ಕಂಗ್ಲೀಷ್ ಚಿತ್ರ. ಹಿಂದಿ, ಇಂಗ್ಲೀಷ್ ಭಾಷೆ ಎರಡರಲ್ಲೂ ತಯಾರಾಗುತ್ತದೆ. ಛಾಯಾ ಅವರ ಫ್ರೆಂಡ್ಸ್ ಸೇರಿಕೊಂಡು ಕತೆಯನ್ನು ಬರೆದಿದ್ದಾರೆ. ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಒಂದೆರೆಡು ಸಾಫ್ಟ್ ವೇರ್ ಕಂಪನಿಗಳು ಬಂಡವಾಳ ಹಾಕಲು ಮುಂದೆ ಬಂದಿವೆ.

ಇಂದಿನ ಯುವಕರ ಕನಸು, ಹಪಾಹಪಿ, ತಲ್ಲಣಗಳ ಕತೆಯಿದೆ. ಒಂದೂವರೆ ಗಂಟೆ ಕಾಲಾವಧಿಯ ಈ ಚಿತ್ರದ ಟಾರ್ಗೆಟ್ ಕಂಗ್ಲೀಷ್ ಮಾತಾಡುವ ಯುವಪೀಳಿಗೆ ಹಾಗೂ ಅಂತಾರಾಷ್ಟ್ರೀಯ ಮಾರ್ಕೆಟ್. ಈ ಚಿತ್ರ ಹೀರೊ ಓರಿಯೆಂಟೆಡ್ ಎನ್ನುತ್ತಾರೆ ಛಾಯಾಸಿಂಗ್. ಪ್ರತಿಭೆಯ ಗಣಿಯಾದ ಛಾಯಾಸಿಂಗ್ ನಟಿಯಾಗಿ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ನಿರ್ದೇಶಕಿಯಾಗಿ ಹೆಸರು ಮಾಡಲಿ ಎನ್ನುವ ಹಾರೈಕೆ.

(ದಟ್ಸ್ ಕನ್ನಡಸಿನಿ ವಾರ್ತೆ)

ಕನ್ನಡತಿ ಛಾಯಾ ಸಿಂಗ್ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada