twitter
    For Quick Alerts
    ALLOW NOTIFICATIONS  
    For Daily Alerts

    ದಿಗಂತ್, ಐಂದ್ರಿತಾ ಲಿಪ್ ಟು ಲಿಪ್ 'ಪಾರಿಜಾತ' ಚುಂಬನ

    |

    Kannada Movie Parijatha
    ದಿಗಂತ್ ಪಾಲಿಗೆ ಕಳೆದ ವರ್ಷ ಅದ್ಯಾಕೋ ಅದೃಷ್ಟ ಇಲ್ಲದ ವರ್ಷವಾಗಿ ಪರಿಣಮಿಸಿತು. ಹೋದ ಪುಟ್ಟ ಬಂದ ಪುಟ್ಟ ಎನ್ನುವ ಹಾಗೆ ಬಂದ ಚಿತ್ರಗಳು ಹೀಗೆ ಬಂದು ಹಾಗೆ ಹೋದವು. ಲೈಫು ಇಷ್ಟೇನೆ ಎನ್ನುವ ಚಿತ್ರವೊಂದನ್ನು ಬಿಟ್ಟು ಉಳಿದ ಚಿತ್ರಗಳು ಅ'ಪುತ್ರ'ಸ್ಯ ಗತಿರ್ನಾಸ್ತಿ ಎನ್ನುವ ಮಟ್ಟ ತಲುಪಿತ್ತು.

    ಯಾರಿಗೆ ಹೇಳಲಿ ನನ್ನ ಈ ಪ್ರಾಬ್ಲಂ ಎನ್ನುತ್ತಿದ್ದ ದಿಗಂತ್ ಗೆ ಸದ್ಯ ಇರುವ ಇನ್ನೊಂದು ಆಶಾವಾದವೆಂದರೆ ಪಾರಿಜಾತ ಚಿತ್ರ. ಮನೋಮೂರ್ತಿ ಸಂಗೀತ ನಿರ್ದೇಶನದ ಈ ಚಿತ್ರ ಈಗಾಗಲೇ ಮ್ಯೂಸಿಕಲ್ ಹಿಟ್ ಆಗ್ಬಿಟ್ಟಿದೆ. ಇದಕ್ಕಿಂತ ದೊಡ್ಡ ಸುದ್ದಿಯೆಂದರೆ ಈ ಚಿತ್ರದಲ್ಲಿ ದಿಗಂತ್ - ಐಂದ್ರಿತಾ ಲಿಪ್ ಟು ಲಿಪ್ ಕಿಸ್ಸಿಂಗ್.

    ಜಯಂತ್ ಕಾಯ್ಕಿಣಿ ಬರೆದಿರುವ 'ನೀ ಮೋಹಿಸು' ಹಾಡಿನಲ್ಲಿ ದಿಗಂತ್ ಐಂದ್ರಿತಾ ತುಟಿಗೆ ತುಟಿ ಗುದ್ದಿ ಕಿಸ್ ಮಾಡಿದ್ದಾರೆ. ಈಗಾಗಲೇ ಪ್ರೀಮಿಯರ್ ನೋಡಿರುವ ಕೆಲವರು ಈ ಬಗ್ಗೆ ಕಾಮೆಂಟ್ ಕೂಡಾ ಮಾಡಿದ್ದಾರೆ. ಮತ್ತೆ ಐಂದ್ರಿತಾಗೆ ಇರುವ ಧೈರ್ಯವನ್ನು ಮೆಚ್ಚಿ ಲೊಚಗುಟ್ಟಿದ್ದಾರೆ. ದಿಗಂತ್ ಗಂತೂ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವ ಹಾಗೆ ಸಿಕ್ಕಿದ್ದೇ ಸೀರುಂಡೆ ಎಂದು ಐಂದ್ರಿತಾ ತುಟಿಗೆ ಲಿಪ್ಸೀಲ್ ಗುದ್ದಿ ಬಿಟ್ಟಿದ್ದಾರೆ.

    ಮನಸಾರೆ ಚಿತ್ರದಲ್ಲಿ ಕೆನ್ನೆ ಕೆಚ್ಚಿಕೊಂಡು ಸುದ್ದಿಯಾಗಿದ್ದ ಐಂದ್ರಿತಾ - ದಿಗಂತ್ ಪಾರಿಜಾತ ಚಿತ್ರದಲ್ಲೂ ಚಮ್ಮಕಚೆಲ್ಲೋ ಎಂದು ಚುಂಬನ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಈ ವರೆಗೂ ಯಾಕೋ ಹಾಟ್ ನ್ಯೂಸ್ ಆಗಿ ಹೊರಹೊಮ್ಮದೇ ಇರುವುದು ಗಾಂಧಿನಗರದ ಮತ್ತೊಂದು ಅಚ್ಚರಿ.

    English summary
    Diganth and Aindrita in lip lock scene in movie Parijatha. This movie is releasing today.
    Friday, February 10, 2012, 12:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X