For Quick Alerts
  ALLOW NOTIFICATIONS  
  For Daily Alerts

  ಪುಂಡ ಅಭಿಮಾನಿಗೆ ಜೆನಿಲಿಯಾ ಕಪಾಳಮೋಕ್ಷ

  By Rajendra
  |

  ಲವ್ಲಿ ಬೆಡಗಿ ಜೆನಿಲಿಯಾ ಅಭಿಮಾನಿಯೊಬ್ಬನ ಕೆನ್ನೆ ಬೆಚ್ಚಗೆ ಮಾಡಿದ ಪ್ರಸಂಗವಿದು. ಪುಂಡಅಭಿಮಾನಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ ಘಟನೆ ಆಂಧ್ರದ ವಿಜಯವಾಡದಲ್ಲಿ ನಡೆದಿದೆ. ಮಳಿಗೆಯೊಂದರ ಉದ್ಘಾಟನೆಗೆ ತೆರಳಿದ್ದ ಆಕೆಯನ್ನು ಮುಟ್ಟಲು ಪುಂಡ ಅಭಿಮಾನಿಯೊಬ್ಬ ಮುಂದಾಗಿದ್ದೆ ತಡ ಜೆನಿಲಿಯಾ ಆತನ ಕೆನ್ನೆ ಊದಿಸಿದ್ದಾರೆ.

  ಉದ್ಘಾಟನಾ ಸ್ಥಳಕ್ಕೆ ಆಕೆ ಬರುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡರು. ಬಿಗಿ ಭದ್ರತೆ ಒದಗಿದಲಾಗಿದ್ದರು ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಕಂಡಿದ್ದೆ ತಡ ಅವರ ಅಭಿಮಾನದ ಕಟ್ಟೆ ಹೊಡೆಯಿತು. ಅವರಲ್ಲೊಬ್ಬ ಪುಂಡ ಅಭಿಮಾನಿಗೆ ಏನಾಯಿತೋ ಏನೋ ಆಕೆಯನ್ನು ಮುಟ್ಟಲು ಮುಂದಾದ.ಅಷ್ಟೇ ಕ್ಷಣಮಾತ್ರದಲ್ಲಿ ಕಪಾಳಮೋಕ್ಷ ನಡೆದುಹೋಯಿತು.

  "ಆತ ಹದ್ದುಮೀರಿ ವರ್ತಿಸಿದ, ಹಾಗಾಗಿ ತಾನು ಕಪಾಳಮೋಕ್ಷ ಮಾಡಿ ಬುದ್ಧಿ ಕಲಿಸಿದ್ದಾಗಿ" ಜೆನಿಲಿಯಾ ವಿವರಣೆ ನೀಡಿದರು. ಈ ಸಂಬಂಧ ಜೆನಿಲಿಯಾ ಪೊಲೀಸರಿಗೆ ಯಾವುದೇ ದೂರನ್ನು ಕೊಡಲಿಲ್ಲ. ಆದರೂ ಪೊಲೀಸರು ಆ ಪುಂಡನನ್ನು ವಶಕ್ಕೆ ತೆಗೆದುಕೊಂಡರು. 'ಸತ್ಯ ಇನ್ ಲವ್' ಬೆಡಗಿಯನ್ನು ಕಂಡು ಅಭಿಮಾನಿ ಇನ್ ಲವ್ ಆದರೆ ಹೀಗೆ ಆಗುವುದು.

  English summary
  Actress Genelia D souza has slapped a fan, who tried to touch her during a private function in Vijayawada. She was in city to inaugurate a showroom. The actress had a bitter experience, when she reached the place.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X