'ಚಕ್ರವರ್ತಿ'ಯ ದರ್ಶನಕ್ಕೂ ಮುನ್ನ ನೀವು ಗಮನಿಸಬೇಕಾದ ವಿಶೇಷತೆಗಳು

By Bharath Kumar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರ ನಾಳೆ (ಏಪ್ರಿಲ್ 14) ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನ ಫಸ್ಟ್ ಡೇ, ಫಸ್ಟ್ ಶೋ ನೋಡ್ಬೇಕು ಅಂತ ತುದಿಗಾಲಲ್ಲಿ ಕಾಯ್ತಿದ್ದಾರೆ ಅಭಿಮಾನಿಗಳು.['ಚಕ್ರವರ್ತಿ' ಬಗ್ಗೆ ಇದ್ದ ಡೌಟ್ ಕ್ಲಿಯರ್!]

ಅಷ್ಟಕ್ಕೂ, ಬಿಡುಗಡೆಗೂ ಮುಂಚೆ 'ಚಕ್ರವರ್ತಿ' ಇಷ್ಟೊಂದು ಕ್ರೇಜ್ ಹುಟ್ಟುಹಾಕಲು ಕಾರಣವೇನು? 'ಚಕ್ರವರ್ತಿ'ಯನ್ನ ಫಸ್ಟ್ ಶೋನೇ ನೋಡಲೇಬೇಕು ಎನ್ನುವುದಕ್ಕೆ ಕುತೂಹಲ ಮೂಡಿಸಿರುವ ಅಂಶಗಳೇನು? 'ಚಕ್ರವರ್ತಿ' ಚಿತ್ರದಲ್ಲಿ ಗಮನ ಸೆಳೆಯುವ ವಿಶೇಷತೆಗಳೇನು?

ಇಲ್ಲಿದೆ ನೋಡಿ 'ಚಕ್ರವರ್ತಿ'ಯ ಅಬ್ಬರ ಹೆಚ್ಚಾಗುವಂತೆ ಮಾಡಿದ ಇಂಟ್ರೆಸ್ಟಿಂಗ್ ಅಂಶಗಳು.....ಮುಂದೆ ಓದಿ....

'ಚಕ್ರವರ್ತಿ' ದರ್ಶನ್ ಸಿನಿಮಾ

'ಚಕ್ರವರ್ತಿ' ದರ್ಶನ್ ಸಿನಿಮಾ

ದರ್ಶನ್ ಎಂಬ ಒಂದು ಹೆಸರು ಸಾಕು 'ಚಕ್ರವರ್ತಿ' ಸಿನಿಮಾ ನೋಡೊದಕ್ಕೆ. ಯಾಕಂದ್ರೆ, ಪ್ರತಿಯೊಂದು ಚಿತ್ರಗಳ ಮೂಲಕವೇ ಕನ್ನಡ ಪ್ರೇಕ್ಷಕರನ್ನ ಮನರಂಜನಿಸುತ್ತಿರುವ ನಟ ದರ್ಶನ್. ಹೀಗಾಗಿ, ಈ ಚಿತ್ರದಲ್ಲೂ ದರ್ಶನ್ ಅವರ ಅಭಿನಯ, ಡೈಲಾಗ್, ಫೈಟ್ಸ್, ಡ್ಯಾನ್ಸ್ ಇಷ್ಟವಾಗುವುದ್ರಲ್ಲಿ ಯಾವುದೇ ಅನುಮಾನವಿಲ್ಲ.['ಚಕ್ರವರ್ತಿ' ದರ್ಶನ್ ಗೆ ಶ್ರೀಮುರಳಿ, ಪ್ರಜ್ವಲ್ ದೇವರಾಜ್ ಶುಭ ಹಾರೈಕೆ]

'80'ರ ದಶಕದ ಕಥೆ

'80'ರ ದಶಕದ ಕಥೆ

'ಚಕ್ರವರ್ತಿ' ಸಿನಿಮಾ ವಿಶೇಷವೆನಿಸಿಕೊಂಡಿರುವುದೇ ಕಥೆಯ ವಿಚಾರಕ್ಕೆ. ಮೂರು ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನ ಒಂದೇ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ. '80'ರ ದಶಕದಿಂದ ಇಂದಿನವರೆಗೂ ಮೂರು ವಿಭಿನ್ನ ಹಂತದಲ್ಲಿ ಚಿತ್ರಕಥೆ ಮಾಡಲಾಗಿದೆಯಂತೆ. ರೌಡಿಸಂ ಕಥೆ ಹೊಂದಿದ್ದರು, ಅದರ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಇದೆಯಂತೆ. ಮತ್ತೊಂದು ಆಸಕ್ತಿಕರ ಸಂಗತಿ ಅಂದ್ರೆ, 'ಚಕ್ರವರ್ತಿ'ಯಲ್ಲಿ ದೇಶಪ್ರೇಮದ ಕಥೆ ಕೂಡ ಮೂಡಿ ಬಂದಿದೆಯಂತೆ.['ಚಕ್ರವರ್ತಿ' ಕಥೆ ಕುರಿತು ಕಡೆಗೂ ಸುಳಿವು ಕೊಟ್ಟ 'ದಾಸ' ದರ್ಶನ್.!]

'ಚಕ್ರವರ್ತಿ'ಯ ಗೆಟಪ್ ಗಳು

'ಚಕ್ರವರ್ತಿ'ಯ ಗೆಟಪ್ ಗಳು

'ಚಕ್ರವರ್ತಿ' ಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವುದೇ ದರ್ಶನ್ ಅವರ ಗೆಟಪ್ ಗಳ ವಿಚಾರದಲ್ಲಿ. ಮೂರು ವಿಭಿನ್ನ ಚಿತ್ರಕಥೆಯನ್ನ ಹೊಂದಿರುವ ಸಿನಿಮಾದಲ್ಲಿ ದರ್ಶನ್ ಅವರು ಕೂಡ ಮೂರು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಟ್ರೋ ಸ್ಟೈಲ್ ನಲ್ಲಿ ಲವರ್ ಬಾಯ್ ಹಾಗೂ ಲಾಂಗ್, ಗನ್ ಹಿಡಿದು ಮಿಂಚಿದ್ರೆ, ಮತ್ತೊಂದು ಗೆಟಪ್ ನಲ್ಲಿ ಸೂಟು ಬೂಟು ತೊಟ್ಟು ಕೈಯಲ್ಲಿ ಮಿನಿ ಸೂಟುಕೇಸ್ ಹಿಡಿದು ಕುತೂಹಲ ಮೂಡಿಸಿದ್ದಾರೆ.[ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ']

ದಿನಕರ್ ತೂಗುದೀಪ

ದಿನಕರ್ ತೂಗುದೀಪ

ಇದೇ ಮೊದಲ ಬಾರಿಗೆ ದರ್ಶನ್ ಸಹೋದರ ದಿನಕರ್ ತೂಗೂದೀಪ 'ಚಕ್ರವರ್ತಿ' ಚಿತ್ರದ ಮೂಲಕ ಬಣ್ಣ ಹಚ್ಚಿದ್ದು, ಸ್ಯಾಂಡಲ್ ವುಡ್ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ನಿರ್ದೇಶಕ, ನಿರ್ಮಾಪಕ, ವಿತರಕನಾಗಿ ತೆರೆಹಿಂದೆ ಕಮಾಲ್ ಮಾಡುತ್ತಿದ್ದ ದಿನಕರ್ ಈಗ ಸ್ಕ್ರೀನ್ ಮೇಲೂ ಅಬ್ಬರಿಸಲಿದ್ದಾರೆ.[ದಿನಕರ್ 'ಕೇಡಿ' ಆಗಲು ಕಾರಣ 'ಆ' ಒಬ್ಬ ವ್ಯಕ್ತಿ! ಯಾರದು?]

ದರ್ಶನ್-ದಿನಕರ್ ಜುಗಲ್ ಬಂದಿ

ದರ್ಶನ್-ದಿನಕರ್ ಜುಗಲ್ ಬಂದಿ

'ಚಕ್ರವರ್ತಿ' ಸಿನಿಮಾದಲ್ಲಿ ದಿನಕರ್ ತೂಗುದೀಪ ಅಭಿನಯಿಸಿರುವುದು ವಿಶೇಷವೇ. ಆದ್ರೆ, ಈ ಚಿತ್ರದಲ್ಲಿ ದಿನಕರ್, ದರ್ಶನ್ ಅವರ ಎದುರು ವಿಲನ್ ಆಗಿ ತೊಡೆ ತಟ್ಟಿದ್ದಾರೆ ಎಂಬುದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.[ದಿನಕರ್ ಆಕ್ಟಿಂಗ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?]

ದರ್ಶನ್- ದೀಪಾ ಸನ್ನಿಧಿ

ದರ್ಶನ್- ದೀಪಾ ಸನ್ನಿಧಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಯಲ್ಲಿ ದೀಪಾ ಸನ್ನಿಧಿ ಅಭಿನಯಿಸಿರುವುದು 'ಚಕ್ರವರ್ತಿ' ಚಿತ್ರದ ವಿಶೇಷತೆಗಳಲ್ಲಿ ಒಂದು. ಈ ಹಿಂದೆ ದರ್ಶನ್ ಅಭಿನಯದ 'ಸಾರಥಿ' ಚಿತ್ರದ ಮೂಲಕ ದೀಪಾ ಸನ್ನಿಧಿ ಚಿತ್ರರಂಗಕ್ಕೆ ಪರಿಚಯವಾಗಿದ್ದರು. ಈಗ 'ಸಾರಥಿ' ನಂತರ ಎರಡನೇ ಬಾರಿ ದರ್ಶನ್ ಜೊತೆ ಅಭಿನಯಿಸಿದ್ದು, ಇವರಿಬ್ಬರ ಜೋಡಿ ಮೇಲೆ ಎಕ್ಸ್ ಪೆಕ್ಟೇಶನ್ ಹೆಚ್ಚಿದೆ.[ಕರ್ನಾಟಕದಾಚೆಯೂ ಸುನಾಮಿ ಎಬ್ಬಿಸಲು 'ಚಕ್ರವರ್ತಿ' ರೆಡಿ!]

ಬಹುದೊಡ್ಡ ತಾರಬಳಗ

ಬಹುದೊಡ್ಡ ತಾರಬಳಗ

'ಚಕ್ರವರ್ತಿ' ಬಹುದೊಡ್ಡ ತಾರಬಳಗವಿದೆ. ದರ್ಶನ್ ಅವರ ಜೊತೆಯಲ್ಲಿ ಕನ್ನಡ ಪ್ರಮುಖ ನಟರು ಅಭಿನಯಿಸಿದ್ದಾರೆ. ದಿನಕರ್ ತೂಗೂದೀಪ್, ಆದಿತ್ಯ, ಕುಮಾರ್ ಬಂಗಾರಪ್ಪ, ಚಾರುಲತಾ, ಸೃಜನ್ ಲೋಕೇಶ್, ಶರತ್ ಲೋಹಿತಾಶ್ವ, ಯಶಸ್ಸು ಸೂರ್ಯ ಹಾಗೂ 'ಚಕ್ರವರ್ತಿ' ಚಿತ್ರದ ನಿರ್ಮಾಪಕ ಸಿದ್ದಾಂತ್ ಸೇರಿದಂತೆ ಇನ್ನು ಹಲವು ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಹೀಗಾಗಿ, 'ಚಕ್ರವರ್ತಿ' ಸಿನಿಮಾದಲ್ಲಿ ತಾರೆಗಳ ಹಬ್ಬವಾದ್ರೂ ಅಚ್ಚರಿಯಿಲ್ಲ.[ಡೈಲಾಗ್ ಇಲ್ಲದ ಟ್ರೈಲರ್ ಹಿಂದಿನ ಕಥೆ ಬಿಚ್ಚಿಟ್ಟ ದರ್ಶನ್!]

ಅರ್ಜುನ್ ಜನ್ಯ ಮ್ಯೂಸಿಕ್

ಅರ್ಜುನ್ ಜನ್ಯ ಮ್ಯೂಸಿಕ್

'ಚಕ್ರವರ್ತಿ' ಚಿತ್ರದ ವಿಶೇಷತೆಗಳಲ್ಲಿ ಸಂಗೀತ ಮುಖ್ಯವಾದದು. ಇಷ್ಟು ದಿನ ದರ್ಶನ್ ಸಿನಿಮಾಗಳಿಗೆ ಹರಿಕೃಷ್ಣ ಸಂಗೀತ ನೀಡುತ್ತಿದ್ದರು. ಆದ್ರೆ, ಇದೇ ಮೊದಲ ಬಾರಿಗೆ ಅರ್ಜುನ್ ಜನ್ಯ ದರ್ಶನ್ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ 'ಚಕ್ರವರ್ತಿ'ಯ ಹಾಡುಗಳು ಸೂಪರ್ ಹಿಟ್ ಆಗಿದ್ದು, ಆ ಹಾಡುಗಳು ಪರದೆ ಮೇಲೆ ಹೇಗೆ ಮೂಡಿಬಂದಿದೆ ಅಂತ ನೋಡಬೇಕಿದೆ.['ಮಲ್ಟಿಪ್ಲೆಕ್ಸ್' ಇತಿಹಾಸದಲ್ಲಿ ಯಾರು ಮಾಡಿರದ ದಾಖಲೆ ಬರೆದ 'ಚಕ್ರವರ್ತಿ']

ಚಿಂತನ್ ನಿರ್ದೇಶನ

ಚಿಂತನ್ ನಿರ್ದೇಶನ

'ಚಕ್ರವರ್ತಿ'ಯ ಇಷ್ಟೆಲ್ಲ ವಿಶೇಷತೆಗಳ ನಿಜವಾದ ರೂವಾರಿ ಚಿತ್ರದ ನಿರ್ದೇಶಕ ಚಿಂತನ್. ಇಷ್ಟು ದಿನ ದರ್ಶನ್ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಿದ್ದ ಚಿಂತನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. 'ಚಕ್ರವರ್ತಿ'ಯನ್ನ ನೋಡಲೇಬೇಕು ಎಂಬುದಾದರೇ ದರ್ಶನ್ ಸಿನಿಮಾಗೆ ಚಿಂತನ್ ಅವರ ನಿರ್ದೇಶನ ಹೇಗಿರಲಿದೆ ಎಂಬುದು ಕೂಡ ಕಾರಣವಾಗಲಿದೆ.[ಮೊಟ್ಟಮೊದಲ ಬಾರಿಗೆ ಫೇಸ್ ಬುಕ್ ಲೈವ್: ಚಿಂತನ್ ನ ಕೊಂಡಾಡಿದ ದರ್ಶನ್.!]

ಸ್ವಮೇಕ್ ಸಿನಿಮಾ

ಸ್ವಮೇಕ್ ಸಿನಿಮಾ

ಕನ್ನಡದಲ್ಲಿ ಹೆಚ್ಚಾಗಿ ರೀಮೇಕ್ ಚಿತ್ರಗಳು ಬರುತ್ತೆ ಎಂಬ ಆರೋಪವಿದೆ. ಇಂತಹ ಸಂದರ್ಭದಲ್ಲಿ ಪಕ್ಕಾ ಸ್ವಮೇಕ್ ಚಿತ್ರವೊಂದು ಬರುತ್ತಿದೆ ಅಂದ್ರೆ, ಆ ಚಿತ್ರವನ್ನ ಪ್ರೋತ್ಸಾಹಿಸಬೇಕಾಗಿರುವುದು ಕನ್ನಡ ಪ್ರೇಕ್ಷಕರ ಕರ್ತವ್ಯ.[ಪರಭಾಷೆ ಚಿತ್ರಗಳ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ ದರ್ಶನ್]

ದರ್ಶನ್ ಕನ್ನಡಿಗರಿಗೆ ಕೊಟ್ಟಿರುವ ಕರೆ!

ದರ್ಶನ್ ಕನ್ನಡಿಗರಿಗೆ ಕೊಟ್ಟಿರುವ ಕರೆ!

ಸ್ವತಃ ದರ್ಶನ್ ಅವರೇ ಕನ್ನಡ ಕಲಾಭಿಮಾನಿಗಳಿಗೆ ಕೊಟ್ಟಿರುವ ಸಂದೇಶಕ್ಕಾಗಿ ಆದರೂ 'ಚಕ್ರವರ್ತಿ' ಸಿನಿಮಾ ನೋಡಲೇಬೇಕು. ಮೊಟ್ಟ ಮೊದಲ ಸಲ ಫೇಸ್ ಬುಕ್ ಲೈವ್ ಗೆ ಬಂದಿದ್ದ ದರ್ಶನ್, ಕನ್ನಡ ಸಿನಿಮಾಗಳನ್ನ ಥಿಯೇಟರ್ ನಲ್ಲಿ ಬಂದು ನೋಡಿ, ಪ್ರೋತ್ಸಾಹಿಸಿ ಎಂದು ಕರೆ ಕೊಟ್ಟಿದ್ದಾರೆ. ಹೀಗಾಗಿ, ಕನ್ನಡ ಚಿತ್ರರಸಿಕರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕಾಗಿದೆ.[ಅಭಿಮಾನಿಗಳು ಕೊಡುತ್ತಿರುವ ಭಿಕ್ಷೆ ಇದು: 'ದರ್ಶನ್ ಹೀಗೆ ಹೇಳಿದ್ಯಾಕೆ?]

More from Filmibeat

English summary
Kannada Actor Darshan starrer 'Chakravarthy' is releasing on Friday (April 14) all Over Karnataka. The Movie Directed by Chinthan and also features Dinakar thoogudeepa, Deepa Sannidhi, Srujan Lokesh and Others. Here Are 10 Reasons As to why you should watch 'Chakravarthy'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X