ಮೈಸೂರು, ಮೇಲುಕೋಟೆ ಸುತ್ತಮುತ್ತ ಅಪ್ಪು ಹುಡುಗ್ರು
ಡಾ.ರಾಜ್‌ಕುಮಾರ್ ಅರ್ಪಿಸಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ತಾರಾಗಣದ ಚಿತ್ರ ಹುಡುಗ್ರು. ಈ ಚಿತ್ರಕ್ಕೆ ಡಿಸೆಂಬರ್ 6ರಿಂದ ದ್ವಿತೀಯ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ತಮಿಳಿನ ಯಶಸ್ವಿ ಚಿತ್ರ 'ನಾಡೋಡಿಗಳ್' ಚಿತ್ರದ ರೀಮೇಕ್ ಇದಾಗಿದೆ.
ದ್ವಿತೀಯ ಹಂತದ ಚಿತ್ರೀಕರಣವು ಮೇಲುಕೋಟೆ, ಮೈಸೂರು ಸುತ್ತಮುತ್ತ ಸಾಗಲಿದೆ ಎಂದು ನಟ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆ ಗುರುಪ್ರಸಾದ್ (ಎದ್ದೇಳು ಮಂಜುನಾಥ) ಸಂಭಾಷಣೆಯಿದೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ಮೋಹನ್ ಕಲೆ, ದೀಪು ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ, ರುದ್ರೇಶ್ ನಿರ್ದೇಶನ, ಸಹಕಾರ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ, ನಿರ್ಮಾಣ ನಿರ್ವಹಣೆಯಿದೆ. ಚಿತ್ರಕಥೆ ಮತ್ತು ನಿರ್ದೇಶನ ಮಾದೇಶ್.
ತಾರಾಗಣದಲ್ಲಿ ಪುನೀತ್ ರಾಜ್‌ಕುಮಾರ್, ರಾಧಿಕಾ ಪಂಡಿತ್, ಯೋಗೀಶ್, ಶ್ರೀನಗರ ಕಿಟ್ಟಿ, ವಿಶಾಲಹೆಗ್ಡೆ, ಅಭಿನಯಾ (ನಾಡೋಡಿಗಳ್ ಖ್ಯಾತಿ) ರಮ್ಯಾ ಬಾರ್ನೆ, ಶಾಂತಮ್ಮ, ರಂಗಾಯಣ ರಘು, ಸುದಾಬೆಳವಾಡಿ, ಶ್ರೀಕಾಂತ್ ಹೊನ್ನಾವಳ್ಳಿ, ಶ್ರೀನಿವಾಸಪ್ರಭು, ವನಿತಾವಾಸು, ಆಶಾರಾಣಿ, ಕೃಷ್ಣ ಅಡಿಗಾ, ಮುಂತಾದವರಿದ್ದಾರೆ. ಶ್ರೀ ಚಕ್ರೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಚಿತ್ರ.


Click it and Unblock the Notifications











