»   » ಮಿಸ್ ಮಾಡ್ಬೇಡಿ: 'ರಥಾವರ' ಟ್ರೈಲರ್ ನ 10 ಕುತೂಹಲ ದೃಶ್ಯಗಳು

ಮಿಸ್ ಮಾಡ್ಬೇಡಿ: 'ರಥಾವರ' ಟ್ರೈಲರ್ ನ 10 ಕುತೂಹಲ ದೃಶ್ಯಗಳು

Posted By:
Subscribe to Filmibeat Kannada

ಚಂದನವನದ 'ಉಗ್ರಂ' ನಟ ಶ್ರೀಮುರಳಿ ಅವರ ಬಹುನಿರೀಕ್ಷಿತ 'ರಥಾವರ' ಚಿತ್ರದ ಜಬರ್ದಸ್ತ್ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಎಲ್ಲೆಡೆ ಸಖತ್ ಸೌಂಡ್ ಮಾಡುತ್ತಿದೆ. ಚೊಚ್ಚಲ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಆಕ್ಷನ್-ಕಟ್ ಹೇಳಿರುವ 'ರಥಾವರ' 'ಉಗ್ರಂ' ಚಿತ್ರದಂತೆ, ಸ್ಯಾಂಡಲ್ ವುಡ್ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ.

ಇದೇ ಮೊದಲ ಬಾರಿಗೆ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಅವರು ನಟ ಶ್ರೀಮುರಳಿ ಅವರ ಡ್ಯುಯೆಟ್ ಹಾಡುತ್ತಿದ್ದು, ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯಕ್ಕೆ ನೇರವಾಗಿ ಲಗ್ಗೆ ಇಟ್ಟಿದ್ದಾರೆ.[ಟ್ರೈಲರ್: 'ರಥಾವರ'ದಲ್ಲಿ ಉಗ್ರರೂಪ ತಾಳಿದ ರೋರಿಂಗ್ ಸ್ಟಾರ್]

ಅಂದಹಾಗೆ ಡಿಸೆಂಬರ್ 4 ರಂದು ಶ್ರೀಮುರಳಿ ಅವರು ತಮ್ಮ 'ರಥಾವರ' ವನ್ನು ಕರ್ನಾಟಕದಾದ್ಯಂತ ತರಲಿದ್ದಾರೆ. ಈಗಾಗಲೇ ಟ್ರೈಲರ್ ನೋಡಿರುವ ಅಭಿಮಾನಿಗಳು ಚಿತ್ರ ಯಾವಾಗ ತೆರೆ ಮೇಲೆ ಅಪ್ಪಳಿಸುತ್ತದೆ ಎಂದು ಜಾತಕಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ.

ಇದೀಗ 'ರಥಾವರ' ಚಿತ್ರದ ಟ್ರೈಲರ್ ನಲ್ಲಿ ಕಂಡು ಬಂದ 10 ಕುತೂಹಲಭರಿತ ವಿಷಯಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ರೋರಿಂಗ್ ಸ್ಟಾರ್ ಶ್ರೀಮುರಳಿ

ಚಿತ್ರದ ಟ್ರೈಲರ್ ನಲ್ಲಿ ಮುಖ್ಯವಾಗಿ ಹೈಲೈಟ್ ಆಗೋದು ಅಂದ್ರೆ, ನಟ ಶ್ರೀಮುರಳಿ ಅವರ ಖದರ್ ಲುಕ್ ಹಾಗು ಖಡಕ್ ಡೈಲಾಗ್ಸ್. 'ಉಗ್ರಂ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಮತ್ತೆ ಅದೇ ಹಳೇ ಖದರ್ ಹಾಗೂ ಅಬ್ಬರದಿಂದ ತೆರೆ ಮೇಲೆ ರಾರಾಜಿಸಿದ್ದಾರೆ.[ವಾವ್! 'ರಥಾವರ' ಶ್ರೀಮುರಳಿ ವಾಯ್ಸ್ ನಲ್ಲಿ, ಈ ಹಾಡು ಕೇಳಿದ್ರಾ?]

ಡಿಂಪಲ್ ಕ್ವೀನ್ ರಚಿತಾ ರಾಮ್

ಆಕರ್ಷಕ ನಟಿ ರಚಿತಾ ರಾಮ್ ಅವರು ಇದೇ ಮೊದಲ ಬಾರಿಗೆ ನಟ ಶ್ರೀಮುರಳಿ ಅವರ ಜೊತೆ ತೆರೆ ಹಂಚಿಕೊಂಡಿದ್ದು, ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಸಖತ್ ಆಗಿ ವರ್ಕೌಟ್ ಆಗಿದೆ. ಟ್ರೈಲರ್ ನೋಡಿದ ಗಾಂಧಿನಗರದ ಮಂದಿ ಹೇಳುವ ಪ್ರಕಾರ ಈ ಬಾರಿಯ ಬೆಸ್ಟ್ ಜೋಡಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು 'ಉಗ್ರಂ' ನಟ ಶ್ರೀಮುರಳಿ ಅಂತೆ.

'ಆರ್ಮುಗಂ' ರವಿಶಂಕರ್

'ಕೆಂಪೇಗೌಡ' ಚಿತ್ರದಲ್ಲಿ ಕಿಚ್ಚ ಸುದೀಪ್ ಮುಂದೆ 'ಆರ್ಮುಗಂ' ಅಂತ ಅಬ್ಬರಿಸಿದ ಖಳನಾಯಕ ರವಿಶಂಕರ್ ಅವರು 'ರಥಾವರ' ದಲ್ಲೂ ಅಬ್ಬರಿಸಿ ಬೊಬ್ಬಿರಿದ್ದಾರೆ. ಎಮ್ಮೆ ಮೇಲೆ ಕುಳಿತು ಬರುವ ಎಮ್ ಎಲ್ ಎ ಮಣಿಕಂಠನ ಸ್ಟೈಲ್ ಟ್ರೈಲರ್ ನ ಮತ್ತೊಂದು ಹೈಲೈಟ್.

ರವಿಶಂಕರ್ V/S ಶ್ರೀಮುರಳಿ

'ಉಗ್ರಂ' ಚಿತ್ರದಲ್ಲಿ ನಿರ್ದೇಶಕರು ನಟ ಶ್ರೀಮುರಳಿ ಮತ್ತು ತಿಲಕ್ ಶೇಖರ್ ಅವರನ್ನು ಮೊದಲು ಆಪ್ತ ಗೆಳೆಯರಾಗಿ ನಂತರ ಅವರೇ ಶತ್ರುಗಳಾಗುವ ಸನ್ನಿವೇಶವನ್ನು ತಂದಿದ್ದರು. ಆದರೆ 'ರಥಾವರ' ಚಿತ್ರದಲ್ಲಿ ರವಿಶಂಕರ್ ಮತ್ತು ಶ್ರೀಮುರಳಿ ಅವರ ಜುಗಲ್ ಬಂದಿ ಟ್ರೈಲರ್ ನಲ್ಲಿ ಸಖತ್ ಟ್ವಿಸ್ಟ್ ಮಾಡಿ ಕೊಟ್ಟಿದ್ದು, ಇವರಿಬ್ಬರ ಸಂಬಂಧ ಏನಾಗಿರಬಹುದು ಎಂದು ನೋಡಲು ಚಿತ್ರ ಬಿಡುಗಡೆಯಾಗಬೇಕು.

ಸರಣಿ ಹಂತಕನಾಗಿ ಶ್ರೀಮುರಳಿ

ಸಖತ್ ಆಕ್ಷನ್-ಫೈಟ್ ಹಾಗೂ ರೌಡಿಸಂ ಲೋಕದ ಮತ್ತೊಂದು ಮಗ್ಗಲನ್ನು ತೋರಿಸಲು ಹೊರಟಿರುವ 'ರಥಾವರ' ದಲ್ಲಿ ನಟ ಶ್ರೀಮುರಳಿ ಅವರು ಸರಣಿ ಹಂತಕನ ಪಾತ್ರದಲ್ಲಿ ಮಿಂಚಿರಬಹುದು, ಎಂದು ಮುರಳಿ ಅವರ ಕೈಯಲ್ಲಿರುವ ಗನ್ ಹೇಳುತ್ತದೆ. ಇನ್ನು ಶ್ರೀಮುರಳಿ ಅವರು ಎಮ್ ಎಲ್ ಎ ಮಣಿಕಂಠನ ಬಲಗೈ ಭಂಟ ಆಗಿರುತ್ತಾನೆ ಎಂಬುದು ಟ್ರೈಲರ್ ನೋಡುತ್ತಿದ್ದಂತೆ ತಿಳಿಯುತ್ತದೆ.

ನಟ ಚರಣ್ ರಾಜ್

ಸ್ಯಾಂಡಲ್ ವುಡ್ ನ ಮತ್ತೊಬ್ಬ ಪ್ರತಿಭಾವಂತ ನಟ ಚರಣ್ ರಾಜ್ ಅವರು ಬಹಳ ದಿನಗಳ ನಂತರ 'ರಥಾವರ' ಚಿತ್ರದ ಮೂಲಕ ಗಾಂಧಿನಗರದತ್ತ ಮುಖ ಮಾಡಿದ್ದು, ಚರಣ್ ರಾಜ್ ಅವರು ಚಿತ್ರದಲ್ಲಿ ಸೂಪರ್ ಕಾಪ್ ಪಾತ್ರದಲ್ಲಿ ಮಿಂಚಿದ್ದಾರೆ.[ಡಿಸೆಂಬರ್ 4ಕ್ಕೆ ನಿಮ್ಮ ಮುಂದೆ 'ರಥಾವರ'ನ ದರ್ಶನ..!]

ಕಾಮಿಡಿ ನಟ ಸಾಧುಕೋಕಿಲ

ಕಾಮಿಡಿ ನಟ ಸಾಧುಕೋಕಿಲ ಅವರು ಸಖತ್ ಪಂಚ್ ಡೈಲಾಗ್ ಮೂಲಕ 'ರಥಾವರ'ದಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ. ಇವರಿಗೆ ಹಾಸ್ಯ ನಟ ಚಿಕ್ಕಣ್ಣ ಸಾಥ್ ನೀಡಲಿದ್ದಾರೆ. ಅಂದಹಾಗೆ ಚಿಕ್ಕಣ್ಣ ಚಿತ್ರದಲ್ಲಿ ಶ್ರೀಮುರಳಿ ಅವರ ಗೆಳೆಯನ ಪಾತ್ರದಲ್ಲಿ ಮಿಂಚಿದ್ದಾರೆ

ಭರ್ಜರಿ ಆಕ್ಷನ್

'ಉಗ್ರಂ' ಚಿತ್ರದಲ್ಲಿದ್ದಂತೆ, 'ರಥಾವರ' ದಲ್ಲೂ ಶ್ರೀಮುರಳಿ ಅವರು ಭರ್ಜರಿ ಫೈಟ್ ಮಾಡುವ ಮೂಲಕ ರೌಡಿಗಳನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಅನ್ನೋದು ಟ್ರೈಲರ್ ನಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರು ಮುರಳಿ ಅವರಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ.

ಮಾಸ್ ಲುಕ್ ನಲ್ಲಿ ಮುರಳಿ

'ಉಗ್ರಂ' ನಟ ಶ್ರೀಮುರಳಿ ಅವರು 'ಉಗ್ರಂ' ಚಿತ್ರದ ನಂತರ ಮತ್ತೊಮ್ಮೆ 'ರಥಾವರ' ಚಿತ್ರದ ಮೂಲಕ ಸಖತ್ ಮಾಸ್ ಹೀರೋ ಆಗಿ ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ ಎಂಬುದು ಟ್ರೈಲರ್ ನೋಡುತ್ತಿದ್ದಂತೆ ತಿಳಿಯುತ್ತದೆ.

ಬಹುನಿರೀಕ್ಷಿತ ಚಿತ್ರ 'ರಥಾವರ'

ನಿರ್ದೇಶಕ ಬಂಡಿಯಪ್ಪ ಅವರ 'ರಥಾವರ' 2015 ರ ಬಹುನಿರೀಕ್ಷಿತ ಚಿತ್ರವಾಗಿದೆ. ಇನ್ನು ಟ್ರೈಲರ್ ಬಿಡುಗಡೆಯಾದ ಮೇಲಂತೂ, ಚಿತ್ರದ ಬಗ್ಗೆ ಸಿನಿ ಪ್ರೀಯರಿಗೆ ಬಹಳ ಕುತೂಹಲ ಮೂಡಿದ್ದು, ಚಿತ್ರ ಬಿಡುಗಡೆಯನ್ನೇ ಕಾಯುತ್ತಿದ್ದಾರೆ. ಇನ್ನು 'ರಥಾವರ' ಚಿತ್ರದ ಹೆಚ್ಚಿನ ಅಪ್ ಡೇಟ್ಸ್ ಗಾಗಿ ಫಿಲ್ಮಿಬೀಟ್ ಕನ್ನಡ ನೋಡುತ್ತಿರಿ.

ಜಬರ್ದಸ್ತ್ ಟ್ರೈಲರ್ ನೋಡಿ

'ಉಗ್ರಂ' ನಟ ಶ್ರೀಮುರಳಿ ಹಾಗೂ ನಟಿ ರಚಿತಾ ರಾಮ್ ಕಾಣಿಸಿಕೊಂಡಿರುವ 'ರಥಾವರ' ಚಿತ್ರದ ಜಬರ್ದಸ್ತ್ ಟ್ರೈಲರ್ ಇಲ್ಲಿದೆ ನೋಡಿ..[ಜಬರ್ದಸ್ತ್ ಟ್ರೈಲರ್ ನೋಡಿ]

English summary
Ugramm star Srimurali is gearing up for the release of his upcoming movie Rathaavara. Rathaavara is the most expected movie of the year 2015 and it is directed by newbie Chandrashekar Bandiyappa. Check out the 10 Interesting facts about Srimurali's 'Rathaavara' Trailer

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada