twitter
    For Quick Alerts
    ALLOW NOTIFICATIONS  
    For Daily Alerts

    ಯಜಮಾನ ಚಿತ್ರದಲ್ಲಿದೆ 10 ಜಲ್ಲಿಕಟ್ಟು ಗೂಳಿಗಳು: ಅದಕ್ಕೆ ಖರ್ಚಾದ ಹಣ ಎಷ್ಟು?

    |

    Recommended Video

    ಯಜಮಾನ ಚಿತ್ರದಲ್ಲಿರೋ ಗೂಳಿಯ ವಿಶೇಷತೆ ಕೇಳಿದ್ರೆ ದಂಗಾಗಿ ಹೋಗ್ತೀರ..!

    ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ಗೂಳಿಗಳ ಪಾತ್ರ ಅತ್ಯಂತ ಪ್ರಮುಖವಾದದು. ಪೋಸ್ಟರ್ ನಲ್ಲಿ ಗಮನಿಸಿದಾಗ ನಾಲ್ಕು ಗೂಳಿಗಳು ದರ್ಶನ್ ಜೊತೆಯಲ್ಲಿದೆ. ಈ ಗೂಳಿಗಳ ಪಾತ್ರವೇನು ಎಂಬುದನ್ನ ಸಿನಿಮಾದಲ್ಲಿ ನೋಡಬಹುದು.

    ಆದ್ರೆ, ಈ ಗೂಳಿಗಳನ್ನ ಸಿನಿಮಾದಲ್ಲಿ ಅಭಿನಯಿಸುವಂತೆ ಮಾಡಿದ ಸಾಹಸಮಯ ಕಥೆಯ ಬಗ್ಗೆ ನೀವು ತಿಳಿಯಲೇಬೇಕು. ಹೌದು, ಯಜಮಾನ ಚಿತ್ರದಲ್ಲಿ ಬಳಸಿಕೊಂಡಿರುವ ಗೂಳಿಗಳು ಸಾಮಾನ್ಯವಾದುದ್ದಲ್ಲ. ಇವು ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟುವಿನಲ್ಲಿ ಭಾಗವಹಿಸುವ ಗೂಳಿಗಳು.

    'ಯಜಮಾನ' ಚಿತ್ರದಲ್ಲಿ ಇದನ್ನು ಮಾತ್ರ ಮಿಸ್ ಮಾಡ್ಕೋಬೇಡಿ'ಯಜಮಾನ' ಚಿತ್ರದಲ್ಲಿ ಇದನ್ನು ಮಾತ್ರ ಮಿಸ್ ಮಾಡ್ಕೋಬೇಡಿ

    ಇದೇ ಗೂಳಿಗಳನ್ನೇಕೆ ಯಜಮಾನ ಚಿತ್ರಕ್ಕಾಗಿ ಕರೆತರಲಾಯಿತು. ಇದನ್ನೆ ಹೇಗೆ ಕರೆದುಕೊಂಡು ಬರಲಾಯಿತು. ಅದಕ್ಕಾಗಿ ನಿರ್ಮಾಪಕರು ಖರ್ಚು ಮಾಡಿದ ವೆಚ್ಚವೆಷ್ಟು, ಅದರಿಂದ ಉಂಟಾದ ಭಯಾನಕ ಘಟನೆ ಏನು ಎಂಬುದನ್ನ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾದ ಪೋನ್ ಕುಮಾರ್ ಬಿಚ್ಚಿಟ್ಟಿದ್ದಾರೆ. ಏನಿದು ಜಲ್ಲಿಕಟ್ಟು ಗೂಳಿಗಳ ಕಹಾನಿ ಮುಂದೆ ಓದಿ.....

    'ಯಜಮಾನ' ಪ್ರೆಸ್ ಮೀಟ್ ನಲ್ಲಿ ನಡೆದ 6 ವಿಶೇಷ ಕ್ಷಣಗಳು 'ಯಜಮಾನ' ಪ್ರೆಸ್ ಮೀಟ್ ನಲ್ಲಿ ನಡೆದ 6 ವಿಶೇಷ ಕ್ಷಣಗಳು

    ಹತ್ತು ಗೂಳಿಗಳು ಬೇಕಾಗಿತ್ತು

    ಹತ್ತು ಗೂಳಿಗಳು ಬೇಕಾಗಿತ್ತು

    ''ಒಂದು ಗೂಳಿಗೆ ಒಂದು ದಿನಕ್ಕೆ ಹತ್ತು ಸಾವಿರ ರೂಪಾಯಿ ನೀಡಬೇಕು. ಯಜಮಾನ ಚಿತ್ರದಲ್ಲಿ ಹತ್ತು ಗೂಳಿಗಳನ್ನ ಬಳಸಲಾಗಿದೆ. ಅಂದ್ರೆ, ಒಂದು ದಿನಕ್ಕೆ 1 ಲಕ್ಷ. (ಎಷ್ಟು ದಿನ ಚಿತ್ರೀಕರಣ ಮಾಡಿದ್ರು ಎಂಬುದು ಬಿಟ್ಟುಕೊಟ್ಟಿಲ್ಲ) ಅದನ್ನ ದಿಂಡುಕಲ್ ನಿಂದ ಲಾರಿಯಲ್ಲಿ ಸಾಗಿಸಬೇಕಾಗಿತ್ತು. ಒಂದು ಲಾರಿಯಲ್ಲಿ ಎರಡು ಎತ್ತುಗಳು ಮಾತ್ರ ಸಾಧ್ಯ. ಅದಕ್ಕಾಗಿ ಐದು ಲಾರಿ ಬೇಕಾಯಿತು''

    ಡೈಲಾಗ್ ಬರೆಯೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿರ್ತಾರಂತೆ ದಾಸಡೈಲಾಗ್ ಬರೆಯೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿರ್ತಾರಂತೆ ದಾಸ

    ಅದನ್ನ ತರೋದೇ ದೊಡ್ಡ ಸಾಹಸ

    ಅದನ್ನ ತರೋದೇ ದೊಡ್ಡ ಸಾಹಸ

    ''ಎತ್ತುಗಳು ಸಿಕ್ತು, ಲಾರಿ ಇದೆ ಅಂತ ಕರೆದುಕೊಂಡು ಬರೋಕೆ ಆಗಲ್ಲ. ಅದಕ್ಕಾಗಿ ಆರ್.ಟಿ.ಓ ಪರ್ಮಿಮಿಷನ್, ಪ್ರಾಣಿದಯ ಸಂಘದಿಂದ ಅನುಮತಿ, ಆ ಎತ್ತುಗಳ ಜೊತೆ ಸುಮಾರು 30 ಜನರು ಅಲ್ಲಿಂದ ಬಂದಿದ್ದು, ಹೀಗೆ ಇನ್ನು ಹಲವು ಅನುಮತಿಗಳನ್ನ ತಗೊಂಡು ಅಲ್ಲಿಂದ ಕರೆದುಕೊಂಡು ಬರಲಾಗಿದೆ''

    ಸೆಟ್ ನಲ್ಲಿ ಒಂದು ಗೂಳಿ ನಿಯಂತ್ರಣ ತಪ್ಪಿತ್ತು

    ಸೆಟ್ ನಲ್ಲಿ ಒಂದು ಗೂಳಿ ನಿಯಂತ್ರಣ ತಪ್ಪಿತ್ತು

    ''ಹೀಗೆ, ಒಂದು ದಿನ ಶೂಟಿಂಗ್ ನಡೆಯಬೇಕಾದರೇ ಆ ಗೂಳಿಗಳ ಪೈಕಿ ಒಂದು ಗೂಳಿ ನಿಯಂತ್ರಣ ತಪ್ಪಿ ಹಗ್ಗದಿಂದ ತಪ್ಪಿಸಿಕೊಂಡಿತ್ತು. ಅಲ್ಲಿಂದ ಎಲ್ಲ ಜನರನ್ನ ಅಟ್ಟಾಡಿಸಿತ್ತು. ಜನರು ಭಯಗೊಂಡಿಡಿದ್ದರು. ನಂತರ ಹೇಗೋ ಅದನ್ನ ಹಿಡಿದು ನಿಲ್ಲಿಸಿದ್ದಾಯಿತು'' ಎಂದು ಭಯಾನಕ ಘಟನೆಯೊಂದನ್ನ ವಿವರಿಸಲಾಯಿತು.

    ಧನಂಜಯ್ ಅವರನ್ನ ದರ್ಶನ್ ಹೇಗೆ ಕರೆಯುತ್ತಾರೆ ಗೊತ್ತಾ?ಧನಂಜಯ್ ಅವರನ್ನ ದರ್ಶನ್ ಹೇಗೆ ಕರೆಯುತ್ತಾರೆ ಗೊತ್ತಾ?

    ನಿರ್ಮಾಪಕ ದಿಟ್ಟ ನಿರ್ಧಾರ ಮೆಚ್ಚುವಂತದ್ದು

    ನಿರ್ಮಾಪಕ ದಿಟ್ಟ ನಿರ್ಧಾರ ಮೆಚ್ಚುವಂತದ್ದು

    ''ಆರಂಭದಲ್ಲಿ ದಿಂಡಕಲ್ ಗೆ ಹೋಗಿ ಬರಿ ಗೂಳಿಗಳ ಶೂಟಿಂಗ್ ಮಾಡಿಕೊಂಡು ಬರೋಣ ಎಂದು ನಿರ್ದೇಶಕ ಪಿ ಕುಮಾರ್ ಅಂದುಕೊಂಡಿದ್ದರಂತೆ. ಆದ್ರೆ, ನಿರ್ಮಾಪಕಿ ಶೈಲಜಾ ನಾಗ್ ಅವರು ಧೈರ್ಯ ಮತ್ತು ದಿಟ್ಟ ನಿರ್ಧಾರದಿಂದ ಅಲ್ಲಿಂದ ಗೂಳಿಗಳನ್ನ ಇಲ್ಲಿಗೆ ಕರೆದುಕೊಂಡು ನೈಜವಾಗಿ ಶೂಟ್ ಮಾಡಲಾಯಿತು'' ಎಂದು ತಿಳಿಸಿದರು.

    ದರ್ಶನ್ ಹಸು ಒಂದಿದೆ

    ದರ್ಶನ್ ಹಸು ಒಂದಿದೆ

    ಈ ಜಲ್ಲಿಕಟ್ಟು ಎತ್ತುಗಳ ಜೊತೆ ದರ್ಶನ್ ಅವರ ಹಸು ಕೂಡ ಒಂದಿದೆ. ಅದರ ಹೆಸರು ಭೀಮ. ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಈ ಹಸುವನ್ನ ಸಾಕಲಾಗುತ್ತಿದೆ. ದರ್ಶನ್ ಅವರು ಪ್ರಾಣಿಪ್ರಿಯರಾಗಿದ್ದು, ತಮ್ಮ ಚಿತ್ರಗಳಲ್ಲಿ ತಮ್ಮದೇ ಹಸು, ಕುದುರೆಗಳನ್ನ ಬಳಸಿರುವ ಉದಾಹರಣೆಯೂ ಇದೆ.

    ಯಜಮಾನ ಚಿತ್ರದಲ್ಲಿ ನಟಿಸಿದೆ ದರ್ಶನ್ ಹಸು, ಅದರ ಹೆಸರೇನು?ಯಜಮಾನ ಚಿತ್ರದಲ್ಲಿ ನಟಿಸಿದೆ ದರ್ಶನ್ ಹಸು, ಅದರ ಹೆಸರೇನು?

    ಗೂಳಿಗಳದ್ದು ಪ್ರಮುಖ ಪಾತ್ರ

    ಗೂಳಿಗಳದ್ದು ಪ್ರಮುಖ ಪಾತ್ರ

    ಅಂದ್ಹಾಗೆ, ಯಜಮಾನ ಚಿತ್ರದಲ್ಲಿ ಗೂಳಿಗಳದ್ದು ಪ್ರಮುಖ ಪಾತ್ರವಿದೆಯಂತೆ. ದರ್ಶನ್ ಪಾತ್ರಕ್ಕೂ ಈ ಎತ್ತುಗಳಿಗೆ ಸಂಬಂಧವಿದೆಯಂತೆ. ಹಾಗಾಗಿ, ಜಲ್ಲಿಕಟ್ಟುವಿನಿಂದ ಗೂಳಿಗಳನ್ನ ತರಲೇಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ನಿರ್ದೇಶಕ ಪಿ ಕುಮಾರ್ ಹೇಳಿದ್ದಾರೆ.

    English summary
    10 jallikattu bulls are used in darshan yajamana movie shooting. bulls are played very important role in this movie.
    Thursday, February 21, 2019, 14:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X