twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ಊಸರವಳ್ಳಿ ದಾಳಿಗೆ ಜೋಗಯ್ಯ ಧೂಳಿಪಟ

    By Rajendra
    |

    Jogayya replaced by Oosaravelli
    ಜೂನಿಯರ್ ಎನ್ಟಿಆರ್ ಅಭಿನಯದ ತೆಲುಗು ಚಿತ್ರ 'ಊಸರವಳ್ಳಿ' ದಾಳಿಗೆ ಕಪಾಲಿ ಚಿತ್ರದಲ್ಲಿ ಅರ್ಧ ಸೆಂಚುರಿ ಬಾರಿಸಿದ್ದ 'ಜೋಗಯ್ಯ' ಚಿತ್ರ ಎತ್ತಂಗಡಿಯಾಗಿದೆ. 'ಜೋಗಯ್ಯ' ಅಷ್ಟೇ ಅಲ್ಲದೆ ಕೆಲವು ಕನ್ನಡ ಚಿತ್ರಗಳಿಗೂ ಭಾರಿ ಬಜೆಟ್‌ನ ತೆಲುಗು ಚಿತ್ರಗಳು ಬಿಸಿಮುಟ್ಟಿಸುತ್ತಿವೆ.

    ಮೂಲಗಳ ಪ್ರಕಾರ, ಮಹೇಶ್ ಬಾಬು ಅಭಿನಯದ 'ದೂಕುಡು' ಹಾಗೂ ಜೂ.ಎನ್ಟಿಆರ್ ಅಭಿನಯದ 'ಊಸರವಳ್ಳಿ' ಚಿತ್ರಗಳು ರಾಜ್ಯದಾದ್ಯಂತ 65ಕ್ಕೂ ಅಧಿಕ ಚಿತ್ರಮಂದಿರಗಳಿಗೆ ಲಗ್ಗೆ ಹಾಕಿವೆ. ಆದರೆ ಕೆಎಫ್‌ಸಿಸಿ ನಿಯಮಗಳ ಪ್ರಕಾರ ಪರಭಾಷಾ ಚಿತ್ರಗಳು 24ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುವಂತಿಲ್ಲ.

    ಆದರೆ ಫಿಲಂ ಚೇಂಬರ್‌ನ ನಿಯಮಗಳನ್ನು ಗಾಳಿಗೆ ತೂರಿದ ಈ ಎರಡೂ ಚಿತ್ರಗಳು ಕರ್ನಾಟಕದಲ್ಲಿ ಕೂಚಿಪುಡಿ ಕಥಕ್ಕಳಿ ಮೋಹಿನಿ ಆಟ್ಟಂ ಒಟ್ಟಿಗೆ ಆಡುತ್ತಿವೆ. ಇದನ್ನು ಫಿಲಂ ಚೇಂಬರ್ ಕಣ್ಣು ಬಾಯಿಬಿಟ್ಟುಕೊಂಡು ನೋಡುತ್ತಿರುವುದು ದುರಂತ. ಈ ಎರಡು ತೆಲುಗು ಚಿತ್ರಗಳು ಕರ್ನಾಟಕದಲ್ಲಿ ರು.5 ಕೋಟಿಗೂ ಅಧಿಕ ದುಡ್ಡನ್ನು ಬಾಚಿಕೊಂಡಿವೆ.

    ಕಪಾಲಿ ಚಿತ್ರಮಂದಿರದಲ್ಲಿ ಅರ್ಧ ಶತಕ ಬಾರಿಸಿದ್ದೇ ತಡ 'ಜೋಗಯ್ಯ'ನಿಗೆ ಗೇಟ್‍‌ಪಾಸ್ ನೀಡಲಾಗಿದೆ. ಕಪಾಲಿಯಲ್ಲಿ ಈಗ 'ಊಸರವಳ್ಳಿ' ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ತೆಲುಗು ಚಿತ್ರ ನಿರ್ಮಾಪಕರ ಜೇಬಿಗೆ ಚಿಲ್ಲರೆ ಕಾಸು ಹುಟ್ಟಿಸುತ್ತಿದೆ.

    ವಿಚಿತ್ರ ಎಂದರೆ ಕಪಾಲಿ ಚಿತ್ರಮಂದಿರದಲ್ಲಿ 'ಜೋಗಯ್ಯ' ಚಿತ್ರ 50 ದಿನ ಪ್ರದರ್ಶನ ಕಂಡಿದ್ದಕ್ಕೆ ಆನಂದ ತುಂದಿಲರಾಗಿರುವ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ! ಗಾಂಧಿನಗರದ ಸುಬೇಧಾರ್ ಛತ್ರಂನ ಮತ್ತೊಂದು ಮೂಲೆಯ ಮೂವಿಲ್ಯಾಂಡ್‌ ಚಿತ್ರಮಂದಿರದಲ್ಲಿ 'ದೂಕುಡು' ಬಾಕ್ಸಾಫೀಸ್ ಕೊಳ್ಳೆಹೊಡೆಯುತ್ತಿದೆ. (ಒನ್‌ಇಂಡಿಯಾ ಕನ್ನಡ)

    English summary
    The news is that Jr NTR lead Telugu movie ‘Oosaravelli’ is replaced by Kannada film ‘Jogayya’ in Kapali theater, Bangalore after it completed 50 days – the 100th film of Shivarajakumar.
    Monday, October 10, 2011, 17:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X