ಡಿ.17ಕ್ಕೆ ನಿಮ್ಮೆಲ್ಲರ ನೆಚ್ಚಿನ 'ನಾಯಕ' ಬರುತ್ತಿದ್ದಾನೆ
ನಾಯಕ, ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು ಡಿಸೆಂಬರ್ 17ರಂದು ತೆರೆಗೆ ಅಪ್ಪಳಿಸುತ್ತಿದೆ. ರಾಜ್ಯದಾದ್ಯಂತ 60 ಚಿತ್ರಮಂದಿರಗಳಲ್ಲಿ ನಾಯಕನ ಆಗಮನವಾಗುತ್ತಿದೆ. ರಾಗಿಣಿ ಮತ್ತು ನವೀನ್ ಚಿತ್ರದ ಪ್ರಮುಖ ಪಾತ್ರಧಾರಿಗಳು.
"ಇದು ಎಲ್ಲ ಚಿತ್ರಗಳಂತೆ ಕಮರ್ಷಿಯಲ್ ಚಿತ್ರವಲ್ಲ. ಚಿತ್ರಕತೆ ವಿಭಿನ್ನವಾಗಿದೆ. ಪ್ರತಿ ಸನ್ನಿವೇಶವನ್ನು ಹೆಚ್ಚು ಜಾಗ್ರತೆಯಿಂದ ಚಿತ್ರೀಕರಿಸಿ ತೆರೆಗೆ ತಂದಿದ್ದೇವೆ. ಲವ್ ಮತ್ತು ಆಕ್ಷನ್ ಪ್ರಧಾನವಾದ ಈ ಚಿತ್ರದಕೆಲ ದೃಶ್ಯಗಳನ್ನು ಕಾಡಿನ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದೇವೆ" ಎನ್ನುತ್ತಾರೆ ಚಿತ್ರದ ನಿರ್ದೇಶಕ ಶೇಖರ್.
ಕ್ಯಾಮೆರಾ ಬಳಸಲಾಗದಂತಹ ಕಡೆ ವಿಶೇಷ ಹ್ಯಾಂಡಿಕ್ಯಾಮ್‌ನಿಂದ ಚಿತ್ರೀಕರಿಸಿದ್ದೇವೆ. 'ನಾಯಕ' ಚಿತ್ರ ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದು ತಾಂತ್ರಿಕವಾಗಿ ಉಳಿದ ಭಾಷೆಯ ಚಿತ್ರಗಳಿಗೆ ಸರಿಸಮವಾಗಿ ನಿಲ್ಲುತ್ತದೆ ಎಂದು ವಿಶ್ವಾಸವನ್ನು ಚಿತ್ರದ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.
ರಮೇಶ್ ಕುಮಾರ್ ಮತ್ತು ಪ್ರದೀಪ್ ಕುಮಾರ್ ಎಂಬುವವರು ಸೇರಿ ನಿರ್ಮಿಸಿರುವ ಚಿತ್ರ ಇದಾಗಿದೆ. ಚಿತ್ರದ ಬಗ್ಗೆ ಮಾಧ್ಯಮಗಳ ಮತ್ತು ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಬಗ್ಗೆ ಕುತೂಹಲ ಉಂಟಾಗಿದೆ ಎಂದು ರಾಗಿಣಿ ತಿಳಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಅವರ ಸಂಗೀತ ಸಂಯೋಜನೆ ಇದೆ.


Click it and Unblock the Notifications











