»   » ರಾಧಿಕಾಗಾಂಧಿಯ ಚಿಕ್ಕಮಲ್ಲಿಗೆಗೆ ಸೆನ್ಸಾರ್ ಮೆಚ್ಚುಗೆ

ರಾಧಿಕಾಗಾಂಧಿಯ ಚಿಕ್ಕಮಲ್ಲಿಗೆಗೆ ಸೆನ್ಸಾರ್ ಮೆಚ್ಚುಗೆ

Subscribe to Filmibeat Kannada

ಹೆಸರಿನಲ್ಲೇ ಮನಸೂರೆಗೊಳ್ಳುವ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ನಿರ್ದೇಶಕ ಈ.ಚನ್ನಗಂಗಪ್ಪನವರ ಕನಸಿನ ಕೂಸು. ಕನ್ನಡಿಗರಿಂದ ಕನ್ನಡಿಗರಿಗಾಗಿ ನಿರ್ಮಾಣವಾಗಿರುವ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಎಲ್ಲಾ ವಿಭಾಗಕ್ಕೂ ಹಿಡಿಸುವ ಚಿತ್ರ ಎಂಬ ಪ್ರಶಂಸೆಯ ಮಾತು ಚಿತ್ರಕ್ಕೆ ಮಂಡಲಿಯಿಂದ ಕೇಳಿಬಂದಿದೆ.

ಹಿಂದೆ ಯಾವ ಚಿತ್ರದಲ್ಲೂ ಕಾಣದ ಕರುನಾಡಿನ ಸುಂದರ ಸ್ಥಳಗಳಲ್ಲಿ ಛಾಯಾಗ್ರಾಹಕ ಜೆ.ಜಿ.ಕೃಷ್ಣ ಸೆರೆಹಿಡಿದಿರುವ ಚಿಕ್ಕಮಲ್ಲಿಗೆಯ ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ. ಕನ್ನಡದ ಗಾಯಕರೇ ಹಾಡಿರುವ ಗೀತೆಗಳಿಗೆ ಕೆ.ಕಲ್ಯಾಣ್ ಸಂಗೀತ ಸಂಯೋಜಿಸಿದ್ದಾರೆ.

ಕೆಂಪಾಂಬಿಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿ.ಅಶ್ವತ್ ಹಾಗೂ ಡಿ.ರಾಮಚಂದ್ರ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ರವಿ ಸಂಕಲನ, ಸುಂದರಂ ಕಲೆ, ಪ್ರಕಾಶ್, ರುದ್ರೇಶ್ ಸಹ ನಿರ್ದೇಶನ, ಡಿ.ರಮೇಶ್ ನಿರ್ಮಾಣನಿರ್ವವಹಣೆಯಿರುವ ಚಿತ್ರದ ತಾರಾಗಣದಲ್ಲಿ ಶ್ರವಂತ್, ಜಗದೀಶ್, ಆನಂದ್, ರಾಧಿಕಾಗಾಂಧಿ, ಸಿ.ಆರ್.ಸಿಂಹ, ರಾಮಕೃಷ್ಣ, ಅವಿನಾಶ್, ವಿಜಯಸಾರಥಿ, ಎ.ಎಸ್.ಮೂರ್ತಿ, ಕರಿಬಸವಯ್ಯ, ವಿನಯಾಪ್ರಕಾಶ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮಲೆನಾಡಿನ ಅರಮನೆಯಲ್ಲಿ ಮಲ್ಲಿಗೆಯ ಕಂಪು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada