»   » ಚಿತ್ರೀಕರಣದಲ್ಲಿ 'ಜೋಶ್; ಮಡಿಕೇರಿಯಲ್ಲಿ ಈ ಸಂಭಾಷಣೆ

ಚಿತ್ರೀಕರಣದಲ್ಲಿ 'ಜೋಶ್; ಮಡಿಕೇರಿಯಲ್ಲಿ ಈ ಸಂಭಾಷಣೆ

Posted By:
Subscribe to Filmibeat Kannada

ಎಸ್.ವಿ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಜೋಶ್ಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಆಗಷ್ಟೇ ವರ್ಗಾವಣೆಯಾಗಿ ನಗರದ ನಂದಿನಿ ಲೇಔಟ್‌ನಲ್ಲಿ ಬಾಡಿಗೆ ಮನೆಗೆ ದ್ವಾರಕೀಶ್ ಮಗಳು ನಿತ್ಯಾಳೊಂದಿಗೆ ಆಗಮಿಸುವ ದೃಶ್ಯದ ಚಿತ್ರೀಕರಣ ಈ ಭಾಗದ ಚಿತ್ರೀಕರಣದಲ್ಲಿ ಚಿತ್ರೀಕೃತವಾಗಿದೆ.

ಯುವಪೀಳಿಗೆಯ ಸಂತಸದ ಕೆಲವು ಸನ್ನಿವೇಶಗಳು ಹಾಗೂ ಕ್ಲೈಮ್ಯಾಕ್ಸ್ ಪೂರ್ಣವಾಗಿರುವ ಜೋಶ್ ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ತಂಡ ಬ್ಯಾಂಕಾಕ್ ಅಥವಾ ಕಾಶ್ಮೀರಕ್ಕೆ ತೆರಳಲಿದೆ ಎಂದು ನಿರ್ದೇಶಕ ಶಿವಮಣಿ ತಿಳಿಸಿದ್ದಾರೆ.

ಎಸ್.ವಿ.ಬಾಬು ಅವರ ಪುತ್ರ ಎಸ್.ಸಂಜಯ್‌ಬಾಬು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಿವಮಣಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಂತೋಷ ರೈ ಪತಾಜೆ ಛಾಯಗ್ರಹಣ, ವರ್ಧನ್ ಸಂಗೀತ, ಬಿ.ಎ.ಮಧು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಕಲೆ, ನಾಗೇಂದ್ರಪ್ರಸಾದ್, ಕವಿರಾಜ್, ಹೃದಯಶಿವ ಹಾಗೂ ಆನಂದ್ ಗೀತರಚನೆ, ರವಿವರ್ಮ, ಜಾಲಿಬಾಸ್ಟಿನ್ ಸಾಹಸ, ಸ್ಟಾನ್ಲಿ ಡಿ ಕೋಸ್ಟಾ, ನೋಬಲ್, ಬೃಂದಾ ನೃತ್ಯ, ಮೈಸೂರ್ ಕೃಷ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಕೇಶ್, ವಿಷ್ಣುಪ್ರಸನ್ನ, ಅಕ್ಷಯ್, ಅಲೋಕ್, ಅಮಿತ್, ಜಗನ್ನಾಥ್, ಪೂರ್ಣ, ಸ್ನೇಹ, ಚೇತನ್, ಕರಿಬಸವಯ್ಯ, ರೋಮಗಣೇಶ್, ಮಂಡ್ಯರಮೇಶ್, ತುಳಸಿಶಿವಮಣಿ, ಸುಧಾಬೆಳವಾಡಿ ಮುಂತಾದವರಿದ್ದಾರೆ.

***
ಮಡಿಕೇರಿಯಲ್ಲಿ ಈ ಸಂಭಾಷಣೆ

ಮಂಜಿನ ಊರಿನ ಮಡಿಕೇರಿಯಲ್ಲಿ ಈಗ ಮಳೆಯ ರುದ್ರನರ್ತನ. ವರುಣನ ಆಗಮನದಿಂದ ಸಾಹಸಿಗರ ಊರಿನ ಸೌಂದರ್ಯ ಇಮ್ಮಡಿಗೊಂಡಿರುವ ಈ ಸಂದರ್ಭದಲ್ಲಿ ಓಂಸಾಯಿ ಪ್ರೊಡಕ್ಷನ್ಸ್‌ರವರ 'ಈ ಸಂಭಾಷಣೆ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿದೆ. ಗುಂಗೂರು ಕೇಶದ ಸಂದೇಶ, ಸಿರಿಗಂಧದೂರಿನ ಹರಿಪ್ರಿಯ ಅವರೊಟ್ಟಿಗೆ ಪತ್ರಕರ್ತ ಬಿ.ಗಣಪತಿ, ಲಕ್ಷ್ಮೀದೇವಮ್ಮ, ಹೇಮಾವತಿ, ಶರಣ್ ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಮೇಜರ್ ಶ್ರೀನಿವಾಸ ಪೂಜಾರ್ ಹಾಗೂ ಜ್ಯೋತಿ ಬಸವರಾಜ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ರಾಜಶೇಖರ್ ಅವರು ಪ್ರಥಮ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಸುರೇಶ್‌ಅರಸ್ ಸಂಕಲನ, ಮಂಜು ಮಾಂಡವ್ಯ ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್, ಹರ್ಷ, ರಘು ನೃತ್ಯ, ಎಸ್.ಎಸ್.ಚಂದ್ರಶೇಖರ್ ನಿರ್ಮಾಣನಿರ್ವಹಣೆ, ಭಾಸ್ಕರ್ ನಿರ್ಮಾಣ ಮೇಲ್ವಿಚಾರಣೆ, ದೊಡ್ಡರಂಗೇಗೌಡ, ವಿ.ಮನೋಹರ್, ಜಯಂತಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ಸಂದೇಶ್, ಹರಿಪ್ರಿಯ, ಜ್ಯೋತಿರಾಣಾ, ಶರಣ್, ಸುಮಲತಾ ಅಂಬರೀಶ್, ಬಿ.ಗಣಪತಿ, ಬುಲೆಟ್ ಪ್ರಕಾಶ್, ವಿ.ಮನೋಹರ್ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

ಕನ್ನಡಕ್ಕೆ ರಾಘವೇಂದ್ರ ಎಂಬ ಚಾಕ್ಲೆಟ್ ಹೀರೊ !
ದ್ವಿತೀಯ ಹಂತದ ಚಿತ್ರೀಕರಣದಲ್ಲಿ 'ಜೋಶ್'
ಪುರಾತನ ದೇಗುಲದಲ್ಲಿ ಈ ಸಂಭಾಷಣೆ ಚಿತ್ರ
ಹಾಡುಗಳ ಚಿತ್ರೀಕರಣದಲ್ಲಿ 'ಈ ಸಂಭಾಷಣೆ'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada