ಇದು ಮಣ್ಣಿನ ದೋಣಿಯಲ್ಲ ಪೇಪರ್ ದೋಣಿ

ಬೆಂಗಳೂರಿನಲ್ಲಿ ಇತ್ತೀಚೆಗೆ ಈ ಚಿತ್ರ ಡಬ್ಬಿಂಗ್ ಪ್ರಕ್ರಿಯೆ ಮುಗಿಸಿಕೊಂಡಿದ್ದು ರೀರೆಕಾರ್ಡಿಂಗ್, ಡಿಟಿಎಸ್ ಮೆರುಗು ನೀಡಲಾಗುತ್ತಿದೆ. ಗಾರ್ಮೆಂಟ್ಸ್ ಉದ್ಯಮದಲ್ಲಿರುವ ಜನಾರ್ಧನ್ ಅತ್ಯುತ್ತಮ ಚಿತ್ರ ನೀಡಬೇಕು ಎಂಬ ಉದ್ದೇಶದಿಂದ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆರ್ ಕೆ ನಾಯಕ್ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ.
ಬೆಂಗಳೂರು, ಬಿಡದಿಯಲ್ಲಿ 40 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ನವೀನ್ ಕೃಷ್ಣ, ಶಾಂತಲಾ ಚಿತ್ರದ ಪ್ರಮುಖ ಪಾತ್ರಧಾರಿಗಳು. ಆದಿಲೋಕೇಶ್, ಅವಿನಾಶ್, ವಿನಯಾ ಪ್ರಕಾಶ್, ಸತ್ಯಜಿತ್ ತಾರಾಗಣದಲ್ಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬೀದರ್‌ನಲ್ಲಿ ಬಿಡುಗಡೆಯಾಯಿತು. ಶೀಘ್ರದಲ್ಲೆ 'ಪೇಪರ್ ದೇಣಿ' ಪ್ರೇಕ್ಷಕರ ಮುಂದೆ ಬರಲಿದೆ ಎನ್ನುತ್ತಾರೆ ನಿರ್ಮಾಪಕರು. (ಒನ್‌ಇಂಡಿಯಾ ಕನ್ನಡ)
More from Filmibeat
English summary
Actor Naveen Krishna lead Kannada film Paper Dhoni is set to hit the screens soon. Debutant director RK Nayak and debutant producer G Janardhan maiden venture on the real life happenings.


Click it and Unblock the Notifications











