»   » ಮಿ.ಕೋಮಲ್‌ರ ಹಾಸ್ಯ ಗರಗಸ ರಸಾಯನ ಸಿದ್ಧ!

ಮಿ.ಕೋಮಲ್‌ರ ಹಾಸ್ಯ ಗರಗಸ ರಸಾಯನ ಸಿದ್ಧ!

Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ನಾಯಕರಾಗಿ ಪ್ರವೇಶ ಮಾಡಿ ವಿಫಲರಾಗಿದ್ದ ಚಿರಂಜೀವಿ ಉರುಫ್ ಕೋಮಲ್ ಕುಮಾರ್, ತನ್ನ ಅಣ್ಣ ಜಗ್ಗೇಶ್ ಅವರಿಂದ ಹಾಸ್ಯ ರಸವನ್ನು ಧಾರೆ ಎರಿಸಿಕೊಂಡು ರಸಿಕರ ಮನದಲ್ಲಿ ಮನೆ ಮಾಡಿರುವುದು ಸುಳ್ಳಲ್ಲ. ಈ ವಾರ ಕೋಮಲ್ ಅವರು ನಾಯಕರಾಗಿ ಪೂರ್ಣಪ್ರಮಾಣದ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮಿ.ಗರಗಸ ಚಿತ್ರ ತೆರೆಕಾಣುತ್ತಿದೆ.

ಏ.11ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಮಿಸ್ಟರ್ ಗರಗಸ ಚಿತ್ರ ಶ್ರೀ ಸಾಯಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ವಿ.ಶ್ರೀನಿವಾಸಲು(ಹೊಸಪೇಟೆ) ಅವರ ನಿರ್ಮಾಣದ ದ್ವಿತೀಯ ಚಿತ್ರವಾಗಿದೆ. ನೋಡುಗರನ್ನು ನಗೆಗಡಲಲ್ಲಿ ತೇಲಿಸಲು ಕೋಮಲ್ ಅವರ ಜೋಡಿಯಾಗಿ , ಅದ್ಭುತನಟ ಅನಂತನಾಗ್ ಹಾಗೂ ಖ್ಯಾತ ನಿರ್ದೇಶಕ ನಾಗಾಭರಣ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ.

ಉಳಿದಂತೆ ಸುಧಾರಾಣಿ, ಐಶ್ವರ್ಯ, ಪವಿತ್ರಾಲೋಕೇಶ್, ರಮೇಶ್‌ಭಟ್, ವಾಣಿಶ್ರೀ, ಲಕ್ಷ್ಮೀಹೆಗ್ಡೆ, ಮಧುಹೆಗ್ಡೆ, ಪವನ್, ರತ್ನಮಾಲ, ಹರಿಣಿ, ಜೈದೇವ್ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ. ದಿನೇಶ್‌ಬಾಬು ಅವರ ಕಥೆ, ಚಿತ್ರಕಥೆ, ಛಾಯಾಗ್ರಹಣ, ನಿರ್ದೇಶನವಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ರಾಜೇಂದ್ರ ಕಾರಂತ್ ಸಂಭಾಷಣೆ, ಈಶ್ವರ್ ಸಂಕಲನ, ವತ್ಸಲಾ ಉಲಿತಾಯ ಸಹ ನಿರ್ದೇಶನ, ಇಸ್ಮಾಯಿಲ್ ಕಲಾ ನಿರ್ದೇಶನ, ರವಿಶಂಕರ್, ಜೈಕುಮಾರ್ ನಿರ್ಮಾಣ ನಿರ್ವಹಣೆಯಿರುವ ಮಿಸ್ಟರ್ ಗರಗಸಕ್ಕೆ ಕೆ ವಿ ಆರ್ ಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

'ರೆಡಿ.. 1, 2,3.... ಓಡಿ ಇಲ್ಲಾಂದ್ರೆ ಇವನು ಸಖತ್ ಕುಯ್ತಾನೆ...'ಎನ್ನುತ್ತವೆ ಈಚಿತ್ರದ ಪೋಸ್ಟರ್ ಗಳು. ನಗರದ ತ್ರಿಭುವನ್, ಸಿದ್ಧಲಿಂಗೇಶ್ವರ, ಆದರ್ಶ, ಮೋಹನ್ , ಪಿವಿಆರ್ ಸೇರಿದಂತೆ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ನೀವು ಕೋಮಲ್ ಅವರಿಂದ ಕುಯ್ಯಿಸಿಕೊಳ್ಳಬಹುದು.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada