ರವಿ ಬೆಳಗೆರೆಗೆ ಮಾಹಿತಿ ಫೋಟೋ ಕೊಟ್ಟಿದ್ದು ನಾನೇ
ಭೀಮಾ ತೀರದ ವಿವಾದ ಟಿವಿಯಲ್ಲಿ ಪ್ರಸಾರವಾದಾಗಲೂ ರವಿ ಬೆಳಗೆರೆ ಅವರಿಗೆ ಮಳಗೊಂಡ ಅವರು ಹಲವಾರು ಬಾರಿ ಫೋನ್ ಮಾಡಿದರಂತೆ. ಆದರೆ ಅವರು ಫೋನನ್ನೇ ಎತ್ತಲಿಲ್ಲ. ಎಸ್‌ಎಂಎಸ್ ಮಾಡಿದಾಗಲೂ ಅವರಿಂದ ಪ್ರತಿಕ್ರಿಯೆ ಬರಲಿಲ್ಲವಂತೆ.
ಕನ್ನಡ ಪ್ರಭದೊಂದಿಗೂ ಮಾತನಾಡಿರುವ ಮಳಗೊಂಡ ಅವರ ಮತ್ತೊಂದು ಗಂಭೀರ ಆರೋಪ ಹೀಗಿದೆ: "ನನ್ನ ಕೈಕಾಲು ಹಿಡಿದು ಫೋಟೋ, ವರದಿ ಕೇಳುತ್ತಿದ್ದ ಬೆಳಗೆರೆ ಇಂದು ಮನಸ್ಸಾಕ್ಷಿ ಮರೆತು ಎಲ್ಲದಕ್ಕೂ ತಾನೇ ಮೊದಲು ಎನ್ನುವಂತೆ ವಾದಿಸುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ" ಎಂದಿದ್ದಾರೆ.
ಒಟ್ಟಾರೆಯಾಗಿ ಮಳಗೊಂಡ ಅವರ ಆರೋಪದ ಸಾರಾಂಶ ಇಷ್ಟೆ. ಭೀಮಾ ತೀರದ ಹಂತಕರ ಬಗ್ಗೆ ಮೊದಲು ವರದಿ ಮಾಡಿದ್ದು ನಾನು. ಹಂತಕರ ನಾಯಕ ಶಿವಾಜಿ ಬೋರಗಿಯ ಫೋಟೋವನ್ನು ಮೊಟ್ಟ ಮೊದಲ ಬಾರಿಗೆ ತೆಗೆದು ಸಂದರ್ಶಿಸಿ ಪ್ರಕಟಿಸಿದ್ದೆ.
ಇದೇ ವರದಿ ಹಾಗೂ ಫೋಟೋಗಳನ್ನು ರವಿ ಬೆಳಗೆರೆ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ವಾಸ್ತವ ಹೀಗಿರುವಾಗ ನಾನೇ ಮೊದಲು ಎಂದು ಹೇಳಿಕೊಳ್ಳುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
More from Filmibeat
English summary
Kannada movie Bheema Theeradalli plagiarism row lands in another controversy. Journalist TK Malagonda has claimed that (In Kannada Prabha), he has first reported on Chandappa Harijana, a leading criminal of the Bheema Basin who was killed in a police encounter in May 2000.
ರವಿ ಬೆಳಗೆರೆ ವಿವಾದ ಓಂ ಪ್ರಕಾಶ್ ರಾವ್ ದುನಿಯಾ ವಿಜಯ್ ravi belagere om prakash rao duniya vijay ಭೀಮಾ ತೀರದಲ್ಲಿ bheema theeradalli


Click it and Unblock the Notifications











