twitter
    For Quick Alerts
    ALLOW NOTIFICATIONS  
    For Daily Alerts

    ಹುಚ್ಚಿಯಾದ ಮಳೆ ಹುಡುಗಿ ಪೂಜಾ ಗಾಂಧಿ

    By Staff
    |

    ಹುಚ್ಚಿ ಚಿತ್ರದ ಚಿತ್ರೀಕರಣ 22 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಸತತವಾಗಿ ನಡೆದು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕವಿತಾಲಯ ಫಿಲಂಸ್ ಲಾಂಛನದಲ್ಲಿ ಡಿ.ಬಿ. ಕುಮಾರಸ್ವಾಮಿ ನಿರ್ಮಿಸುತ್ತಿರುವ ವೆಂಕಟೇಶ್ ಪಂಚಾಂಗಂ ಕಥೆ-ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಪೂಜಾಗಾಂಧಿಯವರು ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಚಿತ್ರದಲ್ಲಿ ಆಕಸ್ಮಿಕವಾಗಿ ನಡೆದಂತಹ ಒಂದು ಘಟನೆಯಲ್ಲಿ ನೊಂದು ಬಳಲಿದ ಯುವತಿಯೋರ್ವಳು ಜೀವನದಲ್ಲಿ ತುಂಬಾ ನಿರಾಸೆ ಹೊಂದುತ್ತಾಳೆ. ಮಾನಸಿಕವಾಗಿ ಆಘಾತಕ್ಕೊಳಗಾಗಿ, ತನ್ನ ಸುತ್ತಲಿನ ಎಲ್ಲರೂ ತನಗೆ ಮೋಸಮಾಡುತ್ತಾರೆಂದು ಕಲ್ಪಿಸಿಕೊಂಡು ವಿಚಿತ್ರವಾಗಿ ವರ್ತಿಸುವ ಈ ಹುಚ್ಚಿ ಹಿನ್ನೆಲೆ ಏನು ? ಆಕೆಯ ಜೀವನದಲ್ಲಿ ನಡೆದಂತಹ ಘಟನೆ ಯಾವುದು ಎಂಬುದನ್ನು ಕುತೂಹಲಕಾರಿಯಾಗಿ ನಿರ್ದೇಶಕರು ನಿರೂಪಿಸಿದ್ದಾರೆ.

    ಒಂದು ಮಗು ಹಾಗೂ ಪೂಜಾ ಗಾಂಧಿ ಇವರಿಬ್ಬರ ಸುತ್ತ ಸಾಗುವ ಈ ಕಥೆಯ ಹೆಚ್ಚಿನ ಭಾಗವನ್ನು ರಾಜರಾಜೇಶ್ವರಿನಗರದಲ್ಲಿ ಖಾಸಗಿ ಮನೆಯೊಂದರಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಳೆದ ವಾರದಿಂದ ಚಿತ್ರದ ಡಬ್ಬಿಂಗ್ ಕಾರ್ಯ ನಡೆದು, ಸೋಮವಾರ ಮುಕ್ತಾಯಗೊಂಡಿದೆ. ಇಡೀ ಚಿತ್ರದಲ್ಲಿ ಒಂದೇ ಹಾಡು ಇದೆ. ನವೀನ್ ಸುವರ್ಣ ಅವರು ಛಾಯಾಗ್ರಾಹಕರಾಗಿದ್ದು, ನಿರ್ಮಾಪಕ ಗಿರಿ ಪಂಚಾಂಗಂ ಅವರೇ ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆ ಮಾಡಿದ್ದಾರೆ. ಕಪಾಲಿ ಅವರ ನಿರ್ಮಾಣ ನಿರ್ವಹಣೆ, ನಾಗೇಂದ್ರ ಅರಸ್‌ರ ಸಂಕಲನ ಈ ಚಿತ್ರಕ್ಕಿದೆ. ತಿಲಕ್, ಅನಂತ್‌ನಾಗ್, ಸುಧಾರಾಣಿ, ಧರ್ಮ, ವೆಂಕಟೇಶ್ ಪ್ರಸಾದ್, ಮನ್‌ದೀಪ್‌ರಾಯ್ ಹಾಗೂ ವಿಶೇಷ ಪಾತ್ರವೊಂದರಲ್ಲಿ ಬೇಬಿ ಸೌಂದರ್ಯ (ಸೋನು) ಅಭಿನಯಿಸಿದ್ದಾರೆ
    (ದಟ್ಸ್ ಕನ್ನಡ ಸಿನಿ ವಾರ್ತೆ)

    ಪೂಜಾ ಗಾಂಧಿ ಗ್ಯಾಲರಿ

    Sunday, May 10, 2009, 12:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X