ಕೃತಿ ಖರಬಂಧ ಜೊತೆ ಪ್ರಜ್ವಲ್ ದೇವರಾಜ್ ಗಲಾಟೆ
ಪ್ರಜ್ವಲ್ ದೇವರಾಜ್ ಈಗ ಬಿಜಿ ನಟ. 'ಭದ್ರ' ಚಿತ್ರದ ಬಳಿಕ ಆಫರ್‌ಗಳ ಮೇಲೆ ಆಫರ್‌ಗಳು ಬಂದು ಬೀಳುತ್ತಿವೆ. ಈ ಮಧ್ಯೆ ಅವರು ಒಂದು 'ಗಲಾಟೆ'ಯನ್ನೂ ಮಾಡಿಕೊಂಡಿದ್ದಾರೆ. ಈ 'ಗಲಾಟೆ' ಆಗಿರುವುದು ಕೃತಿ ಕರಬಂದ ಎಂಬ ದಂತದ ಗೊಂಬೆ ಜೊತೆ.
ವಿಷಯ ಇಷ್ಟೆ, ಎಂ ಡಿ ಶ್ರೀಧರ್ ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ 'ಗಲಾಟೆ' ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ರಾಜೇಂದ್ರ ಕುಮಾರ್ ಎಂಬುವವರು ನಿರ್ಮಿಸುತ್ತಿದ್ದಾರೆ. ಈ ಚಿತ್ರ ಆದಿಯಿಂದ ಅಂತ್ಯದವರೆಗೂ ಪ್ರೇಕ್ಷಕರನ್ನು ಹುಚ್ಚಾಪಟ್ಟೆ ರಂಜಿಸುತ್ತದೆ. ಹಾಗಂತ ನಿರ್ಮಾಪಕರು ಹೇಳಿದ್ದಾರೆ.
'ಗಲಾಟೆ' ಚಿತ್ರದಲ್ಲಿ ಪ್ರಜ್ವಲ್ ಅವರದು ಯಂಗ್ ಲವರ್ ಬಾಯ್ ಪಾತ್ರ. ಚಿತ್ರದಲ್ಲಿ ಇಬ್ಬರು ಲವರ್ಸ್ ಅವನ ಹಿಂದೆ ಬೀಳುತ್ತಾರೆ. ಕತೆ ಮನರಂಜನಾತ್ಮಕವಾಗಿ ಸಾಗುತ್ತದೆ. ಎಲ್ಲೂ ಒಂಚೂರು ಬೋರು ಹೊಡೆಸುವುದಿಲ್ಲ ಎನ್ನುತ್ತಾರೆ ನಿರ್ದೇಶಕ ಎಂ ಡಿ ಶ್ರೀಧರ್.
ಚಿತ್ರಕ್ಕೆ ಕೃಷ್ಣಕುಮಾರ್ ಅವರ ಛಾಯಾಗ್ರಹಣ, ಸೌಂದರ್ ರಾಜನ್ ಅವರ ಸಂಕಲನ, ಜೆಸ್ಸಿ ಗಿಫ್ಟ್ ಸಂಗೀತ ಇದೆ. ಈ ತಂತ್ರಜ್ಞರೆಲ್ಲಾ ಶ್ರೀಧರ್ ಚಿತ್ರಗಳ ಪರ್ಮನೆಂಟ್ ಟೀಂ ಮೆಂಬರ್ಸ್. ಚಿತ್ರದ ನಾಯಕಿ ಕೃತಿ ಖರಬಂಧ. ಈ ಹಿಂದೆ 'ಚಿರು' ಚಿತ್ರದಲ್ಲಿ ಪ್ರೇಕ್ಷಕರ ಹೃದಯ ತಟ್ಟಿದ್ದ ಬೆಡಗಿ. ಅನಿವಾಸಿ ಭಾರತೀಯಳಾಗಿ ಗಲಾಟೆ ಚಿತ್ರದಲ್ಲಿ ಕೃತಿ ಕಾಣಿಸಲಿದ್ದಾರೆ.
ಚಿತ್ರದ ಮತ್ತೊಬ್ಬ ಬೆಡಗಿ ನಿಶಾ ಶೆಟ್ಟಿ. ಮಾಡ್ರನ್ ಹುಡುಗಿಯಾಗಿ ನಿಶಾ ಕಾಣಿಸಲಿದ್ದಾರೆ. ಸುಮನ್ ರಂಗನಾಥ್ ಕೂಡ ಚಿತ್ರದಲ್ಲಿದ್ದು ವಿಶೇಷ ಪಾತ್ರ ಪೋಷಿಸಲಿದ್ದಾರೆ. ಚಿತ್ರದ ಶೀರ್ಷಿಕೆಗೆ ತಕ್ಕಂತೆ 'ಗಲಾಟೆ' ಹುಡುಗನಾಗಿ ಪ್ರಜ್ವಲ್ ದೇವರಾಜ್ ಅಭಿನಯವಿರುತ್ತದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











