ಪ್ರೀತ್ಸೆ ಪ್ರೀತ್ಸೆಗೆ ಸೆನ್ಸಾರ್ ನಿಂದ ಯು ಪ್ರಮಾಣ ಪತ್ರ

ಕನ್ನಡ ಚಿತ್ರರಂಗದ ಯಶಸ್ವಿ ನಾಯಕ ಯೋಗೀಶ್ ಈ ಚಿತ್ರದ ನಾಯಕ. 'ದುನಿಯಾ' ಚಿತ್ರದಲ್ಲಿ 'ಲೂಸ್ ಮಾದ' ಪಾತ್ರದ ಮೂಲಕ ಪ್ರೇಕ್ಷಕರನ್ನು ಸೂರೆಗೊಂಡ ಯೋಗೀಶ್ 'ನಂದಾ ಲವ್ಸ್ ನಂದಿತಾ' ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕನಾಗಿ ಆಗಮಿಸಿದರು. ಇವರ ಅಭಿನಯದ 'ಅಂಬಾರಿ' ಚಿತ್ರ ಕೂಡ ಶತದಿನೋತ್ಸವ ಆಚರಿಸಿಕೊಂಡಿದೆ.
'ಪ್ರೀತ್ಸೆ ಪ್ರೀತ್ಸೆ ' ಚಿತ್ರವು ಉತ್ತಮವಾಗಿ ಮೂಡಿ ಬಂದಿದ್ದು ಜನ ಮನ್ನಣೆಗೆ ಪಾತ್ರವಾಗಲಿದೆ ಎಂದು ಯೋಗೀಶ್ ಅಭಿಪ್ರಾಯ ಪಟ್ಟಿದ್ದಾರೆ. ಕೆ.ಮಾದೇಶ್ ಅವರ ಚಿತ್ರಕತೆ, ನಿರ್ದೇಶನವಿರುವ ಈ ಚಿತ್ರಕ್ಕೆ ಅನುಪ್ ಸೀಳಿನ್ ಸಂಗೀತವಿದೆ. ವೀನಸ್ ಮೂರ್ತಿ ಛಾಯಾಗ್ರಹಣ, ತ್ರಿಭುವನ್, ಇಮ್ರಾನ್ ನೃತ್ಯ, ತಿರುಪತಿ ರೆಡ್ಡಿ ಸಂಕಲನ, ಕೆ.ವಿ.ರಾಜು ಸಂಭಾಷಣೆ, ಸುರೇಶ್ ಗೋಸ್ವಾಮಿ ಕಥೆ-ಸಹನಿರ್ದೇಶನ ಹಾಗೂ ಚಂದ್ರಪ್ಪನವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಉದಯತಾರಾ, ಪ್ರಜ್ಞಾ, ಜೈಜಗದೀಶ್, ಸಂಗೀತಾ, ರಮೇಶ್ ಭಟ್, ಪಿ.ಎನ್.ಸತ್ಯ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
kannada movies ಸೆನ್ಸಾರ್ ರಮೇಶ್ ಭಟ್ ಯೋಗೀಶ್ yogish nagendra prasad ಪ್ರೀತ್ಸೆ ಪ್ರೀತ್ಸೆ ಜೈ ಜಗದೀಶ್ preetse preetse udaya tara ಉದಯ ತಾರಾ


Click it and Unblock the Notifications