»   » ಬಾಯ್ ಫ್ರೆಂಡ್ ಗಾಗಿ ಬಿಕಿನಿ ತೊಟ್ಟ ಪ್ರಿಯಾಂಕ

ಬಾಯ್ ಫ್ರೆಂಡ್ ಗಾಗಿ ಬಿಕಿನಿ ತೊಟ್ಟ ಪ್ರಿಯಾಂಕ

Posted By:
Subscribe to Filmibeat Kannada
Priyanka Chopra
ಬಾಲಿವುಡ್ ನಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದ ನಟಿ ಪ್ರಿಯಾಂಕ ಚೋಪ್ರಾ . ಈ ವರ್ಷ ಆಕೆ ಅತ್ಯಧಿಕ ಚಿತ್ರಗಳಲ್ಲಿ ನಟಿಸಿದ್ದೆ ಅಲ್ಲದೆ 'ಫ್ಯಾಷನ್', 'ದೋಸ್ತಾನಾ'ದಂತಹ ವಿಭಿನ್ನ ಚಿತ್ರಗಳಲ್ಲಿನ ಆಕೆಯ ನಟನೆ ಗಮನ ಸೆಳೆಯುತ್ತದೆ. ಈಗ ಈಕೆ ಕ್ರಿಕೆಟ್ ಕಥೆಯಾಧಾರಿತ 'ವಿಕ್ಟರಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ತನ್ನ ಬಾಯ್ ಫ್ರೆಂಡ್ ಹರ್ಮನ್ ಬವೇಜಾಗಾಗಿ ಬಿಕಿನಿ ತೊಡಲು ಸಿದ್ಧವಾಗಿದ್ದಾರೆ!

ಈಗಾಗಲೇ ಈಕೆ 'ದೋಸ್ತಾನಾ' ಚಿತ್ರದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರಲ್ಲ....ಇನ್ನು ಹೊಸದಾಗಿ ಬಿಕಿನಿ ಧರಿಸಿ ಹರ್ಮನ್ ಜೊತೆ ಕಾಣಿಸಿಕೊಳ್ಳುವುದೇನು ಬಂತು? ಎಂಬುದು ತಾನೆ ನಿಮ್ಮ ಸಂದೇಹ. ಅಲ್ಲೇ ನೋಡಿ ಇರುವುದು ಬಿಕಿನಿ ರಹಸ್ಯ! ಈ ಚಿತ್ರದ ಒಂದು ಹಾಡಿನಲ್ಲಿ ಮಾತ್ರ ಈಕೆ ಬಿಕಿನಿ ಧರಿಸಿ ಡ್ಯಾನ್ಸ್ ಮಾಡಲಿದ್ದಾರೆ. ಅಂದರೆ ಅದೊಂದು ಐಟಂ ಸಾಂಗ್ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಚಿತ್ರದ ನಿರ್ಮಾಪಕ ಮನ್ ಮೋಹನ್ ಶೆಟ್ಟಿ ತಮ್ಮ ಚಿತ್ರದಲ್ಲಿ ಈ ರೀತಿಯ ಒಂದು ಹಾಡು ಇರಲೇಬೇಕು ಎಂದು ಪಟ್ಟು ಹಿಡಿದರಂತೆ. ಚಿತ್ರದ ನಿರ್ದೇಶಕ ಅಜಿತ್ ಪಾಲ್ ವಿಧಿಯಿಲ್ಲದೆ ಒಪ್ಪಿಕೊಳ್ಳಬೇಕಾಯಿತಂತೆ.

ಪ್ರಿಯಾಂಕಾರನ್ನು ಹೇಗಾದರೂ ಮಾಡಿ ಒಪ್ಪಿಸಿ ಎಂದು ಹರ್ಮನ್ ನ ಮೊರೆ ಹೋದನಂತೆ ನಿರ್ದೇಶಕ ಮಹಾಶಯ. ಪ್ರಿಯಾಂಕ ಬಳಿ ಹರ್ಮನ್ ಈ ವಿಚಾರ ಹೇಳಿದ್ದೆ ತಡ ಆಕೆ ಹಿಂದೆ ಮುಂದೆ ಆಲೋಚಿಸದೆ 'ಟೂ ಫೀಸ್' ತೊಡಲು ಸಿದ್ದರಾದರಂತೆ. ಇಷ್ಟಕ್ಕೂ ಈಕೆ ಒಪ್ಪಿಕೊಳ್ಳಲು ತನ್ನ ಬಾಯ್ ಫ್ರೆಂಡ್ ಹರ್ಮನ್ ಮೇಲಿನ ಪ್ರೀತಿಯೇ ಕಾರಣವಂತೆ! ಅದೆಲ್ಲ ಸರಿ ಈ ರೀತಿಯ ಐಟಂ ಸಾಂಗ್ ನಿಮ್ಮ ಚಿತ್ರದಲ್ಲಿ ತುರುಕಲು ಕಾರಣವಾದರೂ ಏನು ಎಂದು ನಿರ್ಮಾಪಕರನ್ನು ಕೇಳಿದರೆ. ಅವರು ಹೇಳಿದಿಷ್ಟು, ತಮ್ಮ ಚಿತ್ರವನ್ನು ಕೊಂಡುಕೊಳ್ಳಲು ವಿತರಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಗುಮಾನಿ ಕಾಡುತ್ತಿದೆ. ಏನು ಮಾಡುವುದು ಎಂದು ಯೋಚಿಸುತ್ತಿರಬೇಕಾದರೆ ಅಲ್ಲಾವುದ್ದೀನನ ಅದ್ಭುತ ದೀಪದಂತೆ ಈ ಆಲೋಚನೆ ಹೊಳೆಯಿತಂತೆ.

ಹರ್ಮನ್ ನಟಿಸಿದ್ದ 'ಲವ್ ಸ್ಟೋರಿ 2050' ಬಾಕ್ಸಾಫೀಸ್ ಗಳಿಕೆಯಲ್ಲಿ ಲಾಗ ಹೊಡೆದಿತ್ತು. ಹಾಗಾಗಿ ಹರ್ಮನ್ ಚಿತ್ರಗಳೆಂದರೆ ವಿತರಕರು ಹಿಂದೆ ಸರಿಯುತ್ತಿದ್ದಾರೆ. ಈ ಸಂಕಟ ಪರಿಸ್ಥಿತಿಯಿಂದ ನಿರ್ಮಾಪಕ ಪಾರಾಗಲು ಉಳಿದಿದದ್ದು ಒಂದೇ ದಾರಿ, ಪ್ರಿಯಾಂಕಾಗೆ ಬಿಕನಿ ತೊಡಿಸುವುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada