ಚಿತ್ರ ನಿರ್ಮಾಪಕ ಕೆ ಮಂಜು ಅವರ ರು.4 ಲಕ್ಷ ದರೋಡೆ

ಕರ್ನಾಟಕ ಬ್ಯಾಂಕ್ ಜೆಪಿ ನಗರ ಶಾಖೆಯಿಂದ ಕೆ ಮಂಜು ಅವರ ಕ್ಯಾಶಿಯರ್ ಮುಕುಂದರಾವ್ ಹಣವನ್ನು ಡ್ರಾ ಮಾಡಿಕೊಂಡು ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮುಕುಂದರಾವ್ ಅವರನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಅವರ ಬಳಿಯಿದ್ದ ಹ್ಯಾಂಡ್ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ದ್ವಿಚಕ್ರವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳನ್ನು ಮುಕುಂದ ಅವರು ಗುರುತಿಸಲು ಸಾಧ್ಯವಾಗಿಲ್ಲ. ಕೆ ಮಂಜು ನಿರ್ಮಿಸುತ್ತಿರುವ ಲೇಟೆಸ್ಟ್ ಚಿತ್ರ 'ಶೈಲೂ' ಪೇಮೆಂಟ್‌ಗಾಗಿ ಈ ಹಣವನ್ನು ಡ್ರಾ ಮಾಡಲಾಗಿತ್ತು. ಆದರೆ ಆ ಹಣ ಕಳ್ಳರ ಪಾಲಾಗಿದೆ. ಇತ್ತೀಚೆಗೆ ಕೆ ಮಂಜು ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿದ್ದು ನೆನಪಿರಬಹುದು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Unidentified miscreants snatch Rs 4 lakh cash from cashier of renowned Kannada film producer K Manju. The incident took place at JP Nagar near Konanakunte cross on 10th October. The cashier has drawn the amount from Karnataka Bank, JP Nagar branch.


Click it and Unblock the Notifications











