»   » ಪುನೀತ್ ತಲೆಗೆ 1 ಲಕ್ಷ ರು. ಬೆಲೆಯ ವಿಶೇಷ ವಿಗ್!

ಪುನೀತ್ ತಲೆಗೆ 1 ಲಕ್ಷ ರು. ಬೆಲೆಯ ವಿಶೇಷ ವಿಗ್!

Posted By:
Subscribe to Filmibeat Kannada

ಚಿತ್ರನಟರು ತಮ್ಮ ಕೇಶವಿನ್ಯಾಸವನ್ನು ಬದಲಾಯಿಸಿಕೊಳ್ಳಲು ವಿಗ್ ಬಳಸುವುದು ಸಾಮಾನ್ಯ ಸಂಗತಿ.ಬಕ್ಕತಲೆಯ ಕಲಾವಿದರು ಹಾಗೂ ನಾಯಕ ನಟರಿಗೆ ವಿಗ್ ಅನಿವಾರ್ಯ. ತಲೆ ತುಂಬ ಕೂದಲಿರುವವರೂ ಚಿತ್ರವಿಚಿತ್ರ ಗೆಟಪ್ ಗಾಗಿ ವಿಗ್ ಬಳಸುವುದು ಈಗ ಮಾಮೂಲು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ತಮ್ಮ ಹೊಸ ಚಿತ್ರ 'ರಾಜ್'ಗಾಗಿ ವಿಗ್ ಬಳಸುತ್ತಿದ್ದಾರೆ. ಮುಂಬೈ ಕೇಶ ವಿನ್ಯಾಸಕರು ರೂಪಿಸಿರುವ ಈ ವಿಶೇಷ ವಿಗ್ ನ ಬೆಲೆ 1 ಲಕ್ಷ ರು. ಗಳು. ಇದಕ್ಕೂ ಮುನ್ನ ಅವರು 'ವೀರ ಕನ್ನಡಿಗ' ಚಿತ್ರದಲ್ಲಿ ವಿಗ್ ಉಪಯೋಗಿಸಿದ್ದರು. ಅದೊಂದು ತೆಲುಗು ಗೆಟಪ್ ವಿಗ್ ಆಗಿತ್ತು. ಆದರೆ ಈಗ ಬಳಸುತ್ತಿರುವ ವಿಗ್ ಯಾವ ಗೆಟಪ್ ದು ಎಂದು ಗೊತ್ತಾಗಿಲ್ಲ. ಮತ್ತೊಂದು ಮಾಹಿತಿಯ ಪ್ರಕಾರ, 'ರಾಜ್' ಚಿತ್ರದ ಕೆಲವೊಂದು ದೃಶ್ಯಗಳಿಗಷ್ಟೇ ಈ ವಿಶೇಷ ವಿಗ್ ಬಳಕೆಯಾಗುತ್ತಿದೆ. ಇನ್ನುಳಿದಂತೆ ಚಿತ್ರದ ಬಹುತೇಕ ದೃಶ್ಯಗಳಲ್ಲಿ ಪುನೀತ್ ತಮ್ಮ ಅಸಲಿ ಕೇಶವನ್ನೇ ಪ್ರದರ್ಶಿಸಲಿದ್ದಾರೆ.

ಈ ಬಗ್ಗೆ ಪುನೀತ್ ಮಾತನಾಡುತ್ತಾ, ಇದೊಂದು ವಿಶೇಷವಾಗಿ ವಿನ್ಯಾಸಗೊಳಿಸಿದ ವಿಗ್. ಇದು ನನ್ನ ತಲೆಗೆ ಸರಿಯಾಗಿ ಹೊಂದಾಣಿಕೆಯಾಗಿದೆ. ಕೆಲವೊಂದು ದೃಶ್ಯಗಳಲ್ಲಿ ಮಾತ್ರ ಇದನ್ನು ಬಳಸುತ್ತಿದ್ದೇವೆ. ಉಳಿದಂತೆ ನಾನು ಸಹಜ ಗೆಟಪ್ ನಲ್ಲಿ ನಟಿಸಿದ್ದೇನೆ ಎಂದರು. ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಸೀತಿಭೈರವೇಶ್ವರ ಪ್ರೊಡಕ್ಷನ್ಸ್ ಬ್ಯಾನರಿನಡಿ ನಿರ್ಮಿಸಲಾಗುತ್ತಿದೆ. ಈ ಬಹುಕೋಟಿ ಚಿತ್ರವನ್ನು ಸುರೇಶ್ ಗೌಡ ಮತ್ತು ಶ್ರೀನಿವಾಸ್ ಮೂರ್ತಿ ನಿರ್ಮಿಸುತ್ತಿದ್ದಾರೆ. ಸಂಗೀತ ಸಂಯೋಜನೆ ವಿ.ಹರಿಕೃಷ್ಣ, ಛಾಯಾಗ್ರಹಣ ಎಸ್.ಕೃಷ್ಣ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada