ಕೆಲಸ ಪೂರ್ತಿ ಮುಗಿಸಿಕೊಂಡು 'ಲಕ್ಕಿ'ಯಾದ ರಾಧಿಕಾ

ಒಂದಾನೊಂದು ಕಾಲದಲ್ಲಿ ಒಂದೇ ದೋಣಿಯಲ್ಲಿ ಪ್ರಯಾಣಿಕರಾಗಿದ್ದ ರಾಧಿಕಾ ಮತ್ತು ರಮ್ಯಾ ಮತ್ತೆ ಒಂದಾಗಿದ್ದಾರೆ. ಇದೇನಿದು ಅಂತ ಗಾಬರಿಯಾಗಬೇಡಿ. ಅಂದ್ರೆ ಒಂದೇ ವೇಳೆಯಲ್ಲಿ ಚಿತ್ರರಂಗದಲ್ಲಿ ಸ್ಪರ್ಧೆಯಲ್ಲಿದ್ದರಲ್ಲಾ! ರಾಧಿಕಾ ನಿರ್ಮಾಣದ 'ಲಕ್ಕಿ' ಚಿತ್ರದಲ್ಲಿ ರಮ್ಯಾ ನಟಿಸುತ್ತಿದ್ದಾರೆ ಅಷ್ಟೇ. ರಮ್ಯಾ ಜೊತೆ ಲಕ್ಕಿ ನಟನಾಗಿ ಯಶ್ ಇದ್ದಾರೆ. ಬಾಕಿ ಇದ್ದ ಒಂದು ಹಾಡನ್ನು ಮುಗಿಸಿ ಇದೀಗ ಶೂಟಿಂಗ್ ಗೆ ಮಂಗಳ ಹಾಡಿದ್ದಾರೆ ರಾಧಿಕಾ.

ವೃತ್ತಿಯಲ್ಲಿ ಡಾಕ್ಟರ್ ಆಗಿರುವ ನಿರ್ದೇಶಕ 'ಸೂರಿ' (ದೂನಿಯಾ ಸೂರಿ ಅಲ್ಲಾರಿ) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮೊದಲು ಮಿಲನ ಪ್ರಕಾಶ ಜೊತೆ ಇದ್ದ ಸೂರಿಗೆ, ಇದು ಸ್ವತಂತ್ರ ನಿರ್ದೇಶನದ ಪ್ರಥಮ ಚಿತ್ರ. "ಇಡೀ ಚಿತ್ರ 'ನಾಯಿ'ಯೊಂದರ ಮೇಲೆ ಕೇಂದ್ರೀಕೃತವಾಗಿದೆ. ರೊಮ್ಯಾಂಟಿಕ್ ಹಾಡೊಂದಿದೆ ಹಾಗೂ ಚಿತ್ರ ಪೂರ್ತಿ ನನ್ನ ಹಿಂದೆ ಸುತ್ತುವುದು ಯಶ್ ಕೆಲಸ" ಅಂದಿದ್ದಾರೆ ರಮ್ಯ.

"ಚಿತ್ರದಲ್ಲಿ ಡಾನ್ಸ್ ಗೆ ಬಹಳ ಮಹತ್ವವಿದೆ. ಹಾಗಾಗಿಯೇ ನಟ ಯಶ್ ನನ್ನು ಹೀರೋ ಮಾಡಿಕೊಂಡಿದ್ದೇನೆ" ಅಂದಿದ್ದಾರೆ ನಿರ್ಮಾಪಕಿ ರಾಧಿಕಾ. ರಾಕಿಂಗ್ ಸ್ಟಾರ್ ಯಶ್, ರಮ್ಯಾ ಜೊತೆ ನಟಿಸುತ್ತಿರುವುದು ಇದೇ 'ಮೊದಲಾ ಸಲ.' ಸಾಕಷ್ಟು ವಿಭಿನ್ನ ಲುಕ್ ಹಾಗ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಯಶ್ ಲಕ್, ಈ ಚಿತ್ರದ ಮೂಲಕ ಇನ್ನೂ ಎತ್ತರೆತ್ತರಕ್ಕೆ ಹೋಗಲಿದೆಯಂತೆ. ಒಟ್ಟಿನಲ್ಲಿ ಮೋಹಕ ನಗೆಯ ನಟಿ ರಾಧಿಕಾ ನಿರ್ಮಾಣದ 'ಲಕ್ಕಿ' ತೆರೆಗೆ ಬರುವುದೊಂದೇ ಬಾಕಿ... (ಒನ್ ಇಂಡಿಯಾ ಕನ್ನಡ)

More from Filmibeat

English summary
The first Radhika and Ramya combination - Radhika as producer and Ramya as lead heroine with Yash 'Lucky' has completed the movie.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X