»   » ಶಿವಣ್ಣನ ಚಿತ್ರದಲ್ಲಿ ಹುಟ್ಟಿದರೆ ಕನ್ನಡನಾಡಲ್ಲಿ...ಹಾಡು

ಶಿವಣ್ಣನ ಚಿತ್ರದಲ್ಲಿ ಹುಟ್ಟಿದರೆ ಕನ್ನಡನಾಡಲ್ಲಿ...ಹಾಡು

Subscribe to Filmibeat Kannada
Shivrajkumar
ಇದು ಆಕಸ್ಮಿಕವಲ್ಲ! ಆದರೆ ನಿರೀಕ್ಷಿತ. ಕಥೆ ಇಷ್ಟೆ,'ಆಕಸ್ಮಿಕ' ಚಿತ್ರದಲ್ಲಿ ಅಣ್ಣಾವ್ರು ಹಾಡಿ ಕುಣಿದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...' ಎಂಬ ಸುಪ್ರಸಿದ್ಧ ಗೀತೆ ಶಿವರಾಜ್ ಕುಮಾರ್ ಚಿತ್ರದಲ್ಲಿ ಪ್ರತಿಧ್ವನಿಸಲಿದೆ. 'ಚೆಲುವೆಯೆ ನಿನ್ನ ನೋಡಲು' ಚಿತ್ರಕ್ಕೆ ಆಕಸ್ಮಿಕ ಚಿತ್ರದ ಈ ಸುಪ್ರಸಿದ್ಧ ಗೀತೆಯನ್ನು ಅಳವಡಿಸಿಕೊಳ್ಳಲಾಗಿದೆ.

ತಲೆಗೆ ಹಳದಿ ಪೇಟ, ಕೈಯಲ್ಲಿ ಕನ್ನಡ ಧ್ವಜ ಹಿಡಿದ ಶಿವರಾಜ್ ಕುಮಾರ್ 'ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟ ಬೇಕು...' ಎಂದು ಹಾಡುವ ಗೀತೆಯನ್ನು ವಿಶ್ವದ ಏಳು ಅದ್ಬುತ ತಾಣಗಳಲ್ಲಿ ಚಿತ್ರೀಕರಿಸಲಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯ ಪುರದಲ್ಲಿರುವ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಡಿ.8ರಂದು ಶಿವರಾಜ್ ಕುಮಾರ್ ಹೊಸ ಚಿತ್ರ'ಚೆಲುವೆಯೆ...' ಚಿತ್ರ ಸೆಟ್ಟೇರಿತು.

ಪ್ರವಾಸಿಗರಿಗೆ ಐತಿಹಾಸಿಕ ಸ್ಥಳಗಳ ಕುರಿತು ತಿಳಿಸುವ ಗೈಡ್ ಆಗಿ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. 'ಜನ್ನಥ್'ಚಿತ್ರದ ಸೋನಾಲ್ ಚೌಹಾಣ್ ಚಿತ್ರದ ನಾಯಕಿ. ಹಿಂದಿ ಚಿತ್ರಗಳ ಖ್ಯಾತ ಛಾಯಾಗ್ರಾಹಕ ಕಬೀರ್ ಲಾಲ್ 'ಚೆಲುಗೆ...' ಕ್ಯಾಮೆರಾ ಹಿಡಿದಿದ್ದಾರೆ. ಕನ್ನಡ ಚಿತ್ರೋದ್ಯಮದ ಮೂಲಕ ತಮ್ಮ ಚಿತ್ರಜೀವನ ಆರಂಭಿಸಿದ ಕಬೀರ್ ಲಾಲ್ 18 ವರ್ಷಗಳ ನಂತರ ಮತ್ತೆ ಕ್ಯಾಮೆರಾ ಹಿಡಿದು ಇತ್ತ ಬಂದಿದ್ದಾರೆ. ಇದೊಂದು ಕೌಟುಂಬಿಕ ಪ್ರಧಾನ ಚಿತ್ರವಾಗಿದ್ದು. ಸಿಕ್ಕಾಪಟ್ಟೆ ಮನರಂಜನೆ ನೀಡಲಿದೆ ಎನ್ನುತ್ತಾರೆ ನಿರ್ದೇಶಕ ರಘುರಾಮ್.

(ದಟ್ಸ್ ಕನ್ನಡಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada