ಕೊಲೆ ರಹಸ್ಯ ಭೇದಿಸಲು ಹೊರಟ ರಮೇಶ್ ಗೆ ಶಾಕ್
ನಟ ರಮೇಶ್ ಕೊಲೆಯೊಂದರ ರಹಸ್ಯ ಭೇದಿಸಲು ಹೊರಟಿದ್ದಾರೆ. ಈ ಪತ್ತೆದಾರಿ ಕೆಲಸಕ್ಕೆ ಮತ್ತಿಬ್ಬರು ರಮೇಶ್ ಜೊತೆ ಕೈಜೋಡಿಸಲಿದ್ದಾರೆ. ಇದೇನಿದು ರಮೇಶ್ ಯಾವಾಗ ಪತ್ತೆದಾರಿ ಶುರುವಚ್ಚಿಕೊಂಡರು ಎಂದು 'ಶಾಕ್' ಆಗಬೇಡಿ.ರಮೇಶ್ ಹೊಸ ಚಿತ್ರದ ಶೀರ್ಷಿಕೆಯೇ 'ಶಾಕ್'.
ಒಂದು ಮನೆ ಮತ್ತು ಮೂರು ಪಾತ್ರಗಳ ಮೂಲಕ ಇಡೀ ಚಿತ್ರದ ಕಥೆ ಹೆಣೆಯಲಾಗಿದೆ. ಸೈಕೋ ಪಾತ್ರದಲ್ಲಿ ರಮೇಶ್ ಕಾಣಿಸಲಿದ್ದಾರೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಹ ಸು ರಾಜಶೇಖರ್. ಚಿತ್ರಕಥೆ, ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.
ಸುಮಾಗುಹಾ ನಾಯಕಿಯಾಗಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನೀನಾಸಂ ಅಶ್ವತ್ ಇದ್ದಾರೆ. ಅರಸಿಕೆರೆಯ ಬಂಗಲೆಯಲ್ಲಿ ಚಿತ್ರೀಕರಣಭರದಿಂದ ಸಾಗಿದೆ. ಚಿತ್ರದಲ್ಲಿ ಈ ಬಂಗಲೆ ಪ್ರಮುಖ ಪಾತ್ರ ವಹಿಸಲಿದೆಯಂತೆ. ತೋಟದ ಬಂಗಲೆಯ ಮಾಲೀಕರನ ಕೊಲೆಗಾರ ಯಾರು? ಕೊಲೆ ಯಾಕೆ ನಡೆಯಿತು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟವರಿಗೆ 'ಶಾಕ್' ಕಾದಿರುತ್ತದೆ.
ಅಮರಚಂದ್ ಜೈನ್, ವಿಜಯ್ ಸುರಾನಾ, ಮಂಗೀಲಾಲ್ ಜೈನ್ ಮತ್ತು ರಮೇಶ್ ರವರು ಶಾಕ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಅರಸಿಕೆರೆಯಲ್ಲಿ ಆರಂಭವಾಗಿದೆ. ಶ್ರೀಸಂಕೇಶ್ವರ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ನಿರಂಜನಬಾಬು ಛಾಯಾಗ್ರಹಣ, ಶ್ರೀನಿವಾಸ್‌ರೆಡ್ಡಿ ಸಂಕಲನ, ಬಾಬುಖಾನ್ ಕಲಾನಿರ್ದೇಶನ ಹಾಗೂ ಜಾನಿ ಅವರ ಸಾಹಸ ನಿರ್ದೇಶನದೆ.


Click it and Unblock the Notifications











