ಕ್ರೇಜಿಸ್ಟಾರ್ ಪರಮಶಿವ ಸ್ವಮೇಕ್ ಅಲ್ಲ ರೀಮೇಕ್

By Rajendra

ತಮ್ಮ ಮಹತ್ವಾಕಾಂಕ್ಷಿ ಚಿತ್ರ 'ಮಂಜಿನ ಹನಿ' ಗುಂಗಿನಲ್ಲೇ ಏಕಾಂಗಿಯಾಗಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಒಮ್ಮೆಲೆ ಮೈಕೊಡವಿಕೊಂಡು ದಿಗ್ಗನೆ ಎದ್ದು ಬಂದಿದ್ದಾರೆ. ಈಗ ಅವರ ಕೈಯಲ್ಲಿ ಏನಿಲ್ಲ ಎಂದರೂ ಅರ್ಧ ಡಜನ್ ಚಿತ್ರಗಳಿವೆ. ಕ್ರೇಜಿಲೋಕ, ಪರಮಶಿವ, ನರಸಿಂಹ, ಕೀಚಕ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ವಿಶೇಷ ಎಂದರೆ ರವಿಚಂದ್ರನ್ ರೀಮೇಕ್ ಚಿತ್ರಗಳಿಗೆ ಸ್ವಮೇಕ್ ಟಚ್ ಕೊಟ್ಟವರು. ಈಗ ಸೆಟ್ಟೇರಿರುವ 'ಪರಮಶಿವ' ಕೂಡ ರೀಮೇಕ್. ತಮಿಳಿನ ಯಶಸ್ವಿ 'ಸಮುಥಿರಮ್' ಚಿತ್ರವನ್ನು ನೀಟಾಗಿ ಕನ್ನಡಕ್ಕೆ ತರಲಾಗುತ್ತಿದೆ. ಅಂದಹಾಗೆ 'ಸಮುಥಿರಮ್' ಚಿತ್ರವೇನು ತುಂಬಾ ಹೊಸದಲ್ಲ. 2001ರಲ್ಲಿ ತೆರೆಕಂಡಿತ್ತು.

ಈಗ ರವಿಚಂದ್ರನ್ ಇದನ್ನು ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಈ ಚಿತ್ರದ ಮೂಲಕ ನಟಿ ಸಾಕ್ಷಿ ಶಿವಾನಂದ್ ಕನ್ನಡದಲ್ಲಿ ಎರಡನೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಅಣಜಿ ನಾಗರಾಜ್ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು ಸದ್ಯಕ್ಕೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Crazy Star Ravichandra and the sultry seductress Sakshi Shivanand latest flick Paramashiva is the remake of the Tamil film Samuthiram. The movie is being produced by Anaji Nagaraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X