'ಬೆಲ್ ಬಾಟಮ್' ನೋಡಲು ಈ 10 ಕಾರಣಗಳು ಸಾಕು

ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಮ್ ಸಿನಿಮಾ ಇದೇ ವಾರ ತೆರೆ ಮೇಲೆ ಬರ್ತಿದೆ. ರೆಟ್ರೋ ಸ್ಟೈಲ್ ನಲ್ಲಿ ಮೂಡಿಬಂದಿರುವ ಈ ಚಿತ್ರ ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರನ್ನ ಸೆಳೆದಿದೆ.

ಈಗ ಬರ್ತಿರುವ ರೆಗ್ಯೂಲರ್ ಚಿತ್ರಗಳಂತಲ್ಲ ಈ ಬೆಲ್ ಬಾಟಮ್ ಸಿನಿಮಾ. ಇದರಲ್ಲಿ ಹಲವು ವಿಶೇಷತೆಗಳಿವೆ. ಅದರಲ್ಲಿ ಪ್ರಮುಖವಾಗಿ 10 ಅಂಶಗಳನ್ನ ನಾವು ಹೇಳ್ತೀವಿ. ಈ 10 ಕಾರಣಗಳು ಸಾಕು ನೀವು ಈ ಚಿತ್ರವನ್ನ ಮೊದಲ ದಿನ ಮೊದಲ ಶೋ ನೋಡಲು.

1. ರಿಷಬ್ ಶೆಟ್ಟಿ ಹೀರೋ ಆಗಿ ನಟಿಸಿರುವ ಮೊದಲ ಚಿತ್ರ. ಇದಕ್ಕೂ ಮುಂಚೆ ಕಿರಿಕ್ ಪಾರ್ಟಿ, ರಿಕ್ಕಿ, ಸ.ಹಿ.ಪ್ರಾ. ಶಾಲೆ ಚಿತ್ರಗಳನ್ನ ನಿರ್ದೇಶನ ಮಾಡಿದ್ದರು.

10 reason to watch bell bottom movie

2. ಹರಿಪ್ರಿಯಾ ನಾಯಕಿಯಾಗಿ ನಟಿಸಿರುವ ಸ್ಪೆಷಲ್ ಸಿನಿಮಾ. ಈ ವರ್ಷ ಬಿಡುಗಡೆಯಾಗುತ್ತಿರುವ ಹರಿಪ್ರಿಯಾ ಮೊದಲ ಚಿತ್ರ
3. ಯೋಗರಾಜ್ ಭಟ್ಟರು ಈ ಚಿತ್ರದಲ್ಲಿ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
4. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಹಾಡುಗಳು ಸೂಪರ್ ಹಿಟ್ ಆಗಿವೆ.
5. ಪ್ರಮೋದ್ ಶೆಟ್ಟಿಯಂತಹ ರಂಗಭೂಮಿ ಕಲಾವಿದ ಈ ಚಿತ್ರದಲ್ಲಿಯೂ ಬಹುಮುಖ್ಯ ಪಾತ್ರವಹಿಸಿದ್ದಾರೆ.

10 reason to watch bell bottom movie

6. ಟೀಸರ್, ಟ್ರೈಲರ್, ಹಾಡುಗಳು ಎಲ್ಲದರಲ್ಲೂ ಬೆಲ್ ಬಾಟಮ್ ಆಕರ್ಷಣೆ ಮಾಡಿದೆ.
7. ಜಯತೀರ್ಥ ನಿರ್ದೇಶನದ ಚಿತ್ರ. ಬ್ಯೂಟಿಫುಲ್ ಮನಸುಗಳು, ವೆನ್ನಿಲಾ, ಬುಲೆಟ್ ಬಸ್ಯಾ ನಂತರ ಆಕ್ಷನ್ ಕಟ್ ಹೇಳಿರುವ ಸಿನಿಮಾ.

8. ರೇಟ್ರೋ ಸ್ಟೈಲ್ ಮೂಡಿಬಂದಿರುವುದರಿಂದ 80-90ರ ದಶಕಕ್ಕೆ ಕರೆದುಕೊಂಡು ಹೋಗುತ್ತೆ.
9. ಕಾಮಿಡಿ ಪ್ರಿಯರಿಗಂತೂ ರಸದೌತಣ ಗ್ಯಾರಂಟಿ.
10. ಸಕುಟುಂಬ ಸಮೇತರಾಗಿ ನೋಡುವ ಚಿತ್ರವೆಂಬುದು ಗಾಂಧಿನಗರದ ಪಂಡಿತರ ಲೆಕ್ಕಾಚಾರವಾಗಿದೆ.

More from Filmibeat

English summary
10 Reasons why you should watch 'Bell Bottom' on first day first show. movie will release on february 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X