twitter
    For Quick Alerts
    ALLOW NOTIFICATIONS  
    For Daily Alerts

    'ಮುನಿರತ್ನ ಕುರುಕ್ಷೇತ್ರ' ನೋಡುವುದಕ್ಕೆ 10 ಕಾರಣಗಳು

    |

    Recommended Video

    Kurukshetra Movie: kurukshetra will releasing on august 9th.

    ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ಕುರುಕ್ಷೇತ್ರ ಬಹಳ ವಿಶೇಷವೆನಿಸಿಕೊಂಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಗೆ ಬರ್ತಿದ್ದು, ಸದ್ಯ ಆಗಸ್ಟ್ 9 ರಂದು ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ.

    ಸುಮಾರು ಎರಡು ವರ್ಷದಿಂದ ಕಾಯಿಸುತ್ತಿರುವ ಚಿತ್ರ. ಅದ್ಭುತ ಮೇಕಿಂಗ್, ಬಹುದೊಡ್ಡ ತಾರಬಳಗ, ಬಹುಕೋಟಿ ವೆಚ್ಚದಲ್ಲಿ ತಯಾರಿ, ನಿರ್ಮಾಪಕ- ಕಲಾವಿದರ ಅತಿಯಾದ ಬಿಲ್ಡಪ್ ಇದೆಲ್ಲ ನೋಡಿ ಈ ಚಿತ್ರದಲ್ಲಿ ಅಂತಹದ್ದೇನಿದೆ ಎಂಬ ಕುತೂಹಲ ಕಾಡುತ್ತಿದೆ.

    ದುರ್ಯೋಧನನ ಜೊತೆ ಅವರೊಬ್ಬರದೇ ಕಟೌಟ್: ಅದಕ್ಕೊಂದು ಕಾರಣನೂ ಇದೆ.!ದುರ್ಯೋಧನನ ಜೊತೆ ಅವರೊಬ್ಬರದೇ ಕಟೌಟ್: ಅದಕ್ಕೊಂದು ಕಾರಣನೂ ಇದೆ.!

    ಕುರುಕ್ಷೇತ್ರ ಯಾಕೆ ಇಷ್ಟೊಂದು ಸ್ಪೆಷಲ್ ಎಂದು ಕೆಲವರು ಕೇಳಬಹುದು. ದರ್ಶನ್ ಸಿನಿಮಾ, ಮುನಿರತ್ನ ನಿರ್ಮಾಣ, ನಾಗಣ್ಣ ನಿರ್ದೇಶನ ಅದನ್ನ ಬಿಟ್ಟರೇ ಈ ಚಿತ್ರದಲ್ಲಿ ಬೇರೆ ಏನಿದೆ, ಯಾಕಾಗಿ ಕುರುಕ್ಷೇತ್ರ ನೋಡಬೇಕು ಎನ್ನುವವರು ಈ ಸ್ಟೋರಿ ಓದಿ.....

    ಪೌರಾಣಿಕ ಚಿತ್ರ ಎಂಬುದೇ ಆಕರ್ಷಣೆ

    ಪೌರಾಣಿಕ ಚಿತ್ರ ಎಂಬುದೇ ಆಕರ್ಷಣೆ

    ಡಾ ರಾಜ್ ಕುಮಾರ್, ವಿಷ್ಣುವರ್ಧನ್ ಅದಕ್ಕೂ ಮುಂಚಿನ ನಟರು ಪೌರಾಣಿಕ ಸಿನಿಮಾಗಳನ್ನ ಮಾಡಿದ್ದಾರೆ. ಇವರುಗಳ ನಂತರ ಕನ್ನಡದಲ್ಲಿ ಇಂತಹ ಪ್ರಯತ್ನ ಆಗಿಲ್ಲ. ಬಹಳ ವರ್ಷದ ನಂತರ ಪೌರಾಣಿಕ ಚಿತ್ರವೊಂದು ತಯಾರಾಗಿರುವುದೇ ಪ್ರೇಕ್ಷಕರಿಗೆ ಹಬ್ಬವಾಗಿದೆ. ಪೌರಾಣಿಕ ಕಾಲದ ವೇಷಭೂಷಣ, ಡೈಲಾಗ್ ಡಿಲವರಿ, ಮ್ಯಾನರಿಸಂ ಎಲ್ಲವೂ ಟ್ರೀಟ್ ಆಗಲಿದೆ. ರೆಗ್ಯೂಲರ್ ಆಗಿ ಲವ್, ಆಕ್ಷನ್, ರೋಮ್ಯಾನ್ಸ್ ನೋಡಿ ಬೋರ್ ಆಗಿರುವ ಅಭಿಮಾನಿಗಳಿಗೆ ಇದು ಫುಲ್ ರಿಲೀಫ್ ನೀಡಬಹುದು.

    ಕಲಾವಿದರೆಂದು ತೋರಿಸಿಕೊಡುವುದೇ ಪೌರಾಣಿಕ, ಐತಿಹಾಸಿಕ ಸಿನಿಮಾ : ದರ್ಶನ್ಕಲಾವಿದರೆಂದು ತೋರಿಸಿಕೊಡುವುದೇ ಪೌರಾಣಿಕ, ಐತಿಹಾಸಿಕ ಸಿನಿಮಾ : ದರ್ಶನ್

    ಪಾಂಡವರು-ಕೌರವರ ನೋಡುವ ಅವಕಾಶ

    ಪಾಂಡವರು-ಕೌರವರ ನೋಡುವ ಅವಕಾಶ

    ಪಾಂಡವರು ಮತ್ತು ಕೌರವರ ಕಥೆಗಳನ್ನ ಪುಸ್ತಕಗಳಲ್ಲಿ ಓದಿರುವುದು, ಕಥೆಗಳಲ್ಲಿ ತಿಳಿದುಕೊಂಡಿರುವುದು, ಧಾರಾವಾಹಿಗಳಲ್ಲಿ ನೋಡಿರುವುದುಂಟು. ಕುರುಕ್ಷೇತ್ರದ ಮೂಲಕ ಪಾಂಡವರು ಮತ್ತು ಕೌರವರ ಕತೆ, ಕುರುಕ್ಷೇತ್ರ ಯುದ್ಧ, ಅದರ ಹಿಂದಿನ ಕಾರಣ, ಮಹಾಭಾರತದಲ್ಲಿ ಬರುವ ಪಾತ್ರಗಳು ಇವೆಲ್ಲವನ್ನ ತೆರೆಮೇಲೆ ನೋಡುವ ಅವಕಾಶ ಸಿಕ್ಕಿದೆ.

    ಜಗತ್ತಿನ ಮೊದಲ 3ಡಿ ಪೌರಾಣಿಕ ಚಿತ್ರ

    ಜಗತ್ತಿನ ಮೊದಲ 3ಡಿ ಪೌರಾಣಿಕ ಚಿತ್ರ

    ಇಂದಿನ ಟೆಕ್ನಾಲಜಿಯಲ್ಲಿ 3ಡಿ ಸಿನಿಮಾ ಕಾಮನ್. ಈಗಾಗಲೇ ಹಲವು ಚಿತ್ರಗಳನ್ನ 3ಡಿಯಲ್ಲಿ ನೋಡಿರುವ ಪ್ರೇಕ್ಷಕರಿದ್ದಾರೆ. ಆದರೆ, ಒಂದು ಪೌರಾಣಿಕ ಚಿತ್ರವನ್ನ 3ಡಿಯಲ್ಲಿ ನೋಡುವ ಅವಕಾಶ ಇದೇ ಮೊದಲ ಸಲ. ಜಗತ್ತಿನ ಮೊದಲ 3ಡಿ ಪೌರಾಣಿಕ ಚಿತ್ರ ಎಂಬುದು ಕುರುಕ್ಷೇತ್ರದ ಹೆಗ್ಗಳಿಕೆ.

    'ದುರ್ಯೋಧನ' ದರ್ಶನ್

    'ದುರ್ಯೋಧನ' ದರ್ಶನ್

    ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ದರ್ಶನ್ ಅವರನ್ನ ನೋಡಿ ಖುಷಿಯಾಗಿದ್ದ ಅಭಿಮಾನಿಗಳಿಗೆ ಈಗ ದುರ್ಯೋಧನನಾಗಿ ನೋಡುವ ಚಾನ್ಸ್. ದುರ್ಯೋಧನ ಪಾತ್ರಕ್ಕೆ ಡಿ ಬಾಸ್ ಹೇಳಿ ಮಾಡಿಸಿದ ನಟ, ಅವರನ್ನ ಬಿಟ್ಟರೇ ಬೇರೆ ಯಾರೂ ಆ ಪಾತ್ರವನ್ನ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಚರ್ಚೆಯಾಗ್ತಿದೆ. ಹಾಗಾಗಿ, ದುರ್ಯೋಧನ ಈ ಚಿತ್ರದ ಪ್ರಮುಖ ಆಕರ್ಷಣೆ.

    'ನಿನ್ನನ್ನ ಬಿಟ್ಟರೇ ಕರ್ನಾಟಕಕ್ಕೆ ಇನ್ನೊಬ್ಬ ದುರ್ಯೋಧನ ಇಲ್ಲ' - ರವಿಚಂದ್ರನ್'ನಿನ್ನನ್ನ ಬಿಟ್ಟರೇ ಕರ್ನಾಟಕಕ್ಕೆ ಇನ್ನೊಬ್ಬ ದುರ್ಯೋಧನ ಇಲ್ಲ' - ರವಿಚಂದ್ರನ್

    ಬಹುದೊಡ್ಡ ಕಲಾವಿದರ ಬಳಗ

    ಬಹುದೊಡ್ಡ ಕಲಾವಿದರ ಬಳಗ

    ದರ್ಶನ್, ರವಿಚಂದ್ರನ್, ಅಂಬರೀಶ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಶಶಿ ಕುಮಾರ್, ಸೋನು ಸೂದ್, ಡ್ಯಾನಿಶ್, ಸ್ನೇಹಾ, ಮೇಘನಾ ರಾಜ್, ಯಶಸ್ ಸೂರ್ಯ, ಚಂದನ್ ಕುಮಾರ್, ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ, ರವಿಚೇತನ್, ರವಿಶಂಕರ್ ಹೀಗೆ ಬಹುದೊಡ್ಡ ಕಲಾವಿದರು ಒಂದೇ ಸಿನಿಮಾದಲ್ಲಿ ನಟಿಸಿರುವುದನ್ನ ನೋಡುವ ಸಂದರ್ಭಕ್ಕೆ ಕುರುಕ್ಷೇತ್ರ ಸಾಕ್ಷಿಯಾಗಿದೆ. ಈ ಎಲ್ಲರನ್ನು ಪೌರಾಣಿಕ ಪಾತ್ರದಲ್ಲಿ ನೋಡಬಹುದು ಎಂಬ ಸರ್ಪ್ರೈಸ್ ಮಿಸ್ ಮಾಡಿಕೊಳ್ಳುವಂತಿಲ್ಲ.

    ಅಂಬರೀಶ್ ಕೊನೆಯ ಚಿತ್ರ

    ಅಂಬರೀಶ್ ಕೊನೆಯ ಚಿತ್ರ

    ಅಂಬರೀಶ್ ಅಭಿನಯದ ಕೊನೆಯ ಚಿತ್ರ ಕುರುಕ್ಷೇತ್ರ ಎಂಬುದು ವಿಶೇಷ. ಭೀಷ್ಮನ ಪಾತ್ರದಲ್ಲಿ ನಟಿಸಿರುವ ಅಂಬಿಯನ್ನ ಕೊನೆಯದಾಗಿ ತೆರೆಮೇಲೆ ನೋಡಬಹುದು. ಕಷ್ಟವಾದರೂ ಈ ಪಾತ್ರದಲ್ಲಿ ನಟಿಸಿ, ಡಬ್ಬಿಂಗ್ ಕೂಡ ಮುಗಿಸಿಕೊಟ್ಟಿದ್ದರು ರೆಬೆಲ್. ದರ್ಶನ್ ಜೊತೆ ಅಂಬಿ ಕಾಂಬಿನೇಷನ್ ಹೇಗಿರಬಹುದು ಎಂಬ ಕಾತುರ.

    ದೃಶ್ಯ ವೈಭವದ ಗ್ರಾಫಿಕ್ಸ್

    ದೃಶ್ಯ ವೈಭವದ ಗ್ರಾಫಿಕ್ಸ್

    ಕುರುಕ್ಷೇತ್ರ ಸಿನಿಮಾದ ಬಹುದೊಡ್ಡ ಶಕ್ತಿ ಗ್ರಾಫಿಕ್ಸ್. ಯುದ್ಧ ದೃಶ್ಯಗಳನ್ನ ರೋಚಕವಾಗಿ ಚಿತ್ರೀಕರಿಸಲಾಗಿದೆ. ಹಾಡುಗಳು ಅಷ್ಟೇ ವಿಶೇಷವಾಗಿದೆ. 3ಡಿ ಯಲ್ಲಿ ತಯಾರಾಗಿರುವುದರಿಂದ ಸಹಜವಾಗಿ ಗ್ರಾಫಿಕ್ಸ್ ಕೂಡ ಹೈಲೈಟ್ ಆಗಿದೆ.

    ನಾಗಣ್ಣ ಮೇಲೆ ಭರವಸೆ

    ನಾಗಣ್ಣ ಮೇಲೆ ಭರವಸೆ

    ಕಮರ್ಷಿಯಲ್ ಸಿನಿಮಾಗಳ ಮೂಲಕ ಸಕ್ಸಸ್ ಕಂಡಿದ್ದ ನಾಗಣ್ಣ, ಸಂಗೊಳ್ಳಿ ರಾಯಣ್ಣ ಎಂಬ ಐತಿಹಾಸಿಕ ಚಿತ್ರ ಮಾಡಿ ಗೆದ್ದಿದ್ದರು. ಅದೇ ಯಶಸ್ಸಿನ ಹಿಂದೆಯೇ ಪೌರಾಣಿಕ ಚಿತ್ರವನ್ನೂ ತುಂಬಾ ಚೆನ್ನಾಗಿ ಮಾಡಿರಬಹುದು ಎಂಬ ನಂಬಿಕೆ ಇದೆ. ಮುನಿರತ್ನ ಅವರ ಧೈರ್ಯ ಕೂಡ ಮೆಚ್ಚುವಂತದ್ದು. ಅದಕ್ಕಾಗಿ ಈ ಸಿನಿಮಾ ಹೇಗೆ ಬಂದಿದೆ ಎಂದು ನೋಡಬೇಕು.

    ಬಾಹುಬಲಿ ಮೀರಿಸುತ್ತಾ?

    ಬಾಹುಬಲಿ ಮೀರಿಸುತ್ತಾ?

    ಇದೆಲ್ಲದರ ಮಧ್ಯೆ ಬಾಹುಬಲಿ ಚಿತ್ರವನ್ನ ಮೀರಿಸುತ್ತಾ ಎಂಬುದು ಬಹುದೊಡ್ಡ ಕುತೂಹಲವಾಗಿದೆ. ಟ್ರೈಲರ್, ಹಾಡು, ಮೇಕಿಂಗ್ ಎಲ್ಲವೂ ಒಂದ ಹಂತಕ್ಕೆ ಅದ್ಧೂರಿಯಾಗಿದೆ. ದರ್ಶನ್ ಕೂಡ ಬಹಳ ವೈಭವವಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಬಾಹುಬಲಿ ಮೀರಿಸುತ್ತೆ ಎಂದು ಬಿಂಬಿಸಿದ್ದಾರೆ. ಹಾಗಾಗಿ, ಅಷ್ಟರ ಮಟ್ಟಿಗೆ ಈ ಸಿನಿಮಾ ವರ್ಕೌಟ್ ಆಗಿದ್ಯಾ ಎಂಬುದಕ್ಕೆ ನೋಡಬೇಕಿದೆ.

    'ಬಾಹುಬಲಿ' ಸಿನಿಮಾವನ್ನು ಸೈಡಿಗಿಡಿ ಎಂದ ಡಿ ಬಾಸ್!'ಬಾಹುಬಲಿ' ಸಿನಿಮಾವನ್ನು ಸೈಡಿಗಿಡಿ ಎಂದ ಡಿ ಬಾಸ್!

    ನಿಖಿಲ್-ದರ್ಶನ್ ವಿವಾದ

    ನಿಖಿಲ್-ದರ್ಶನ್ ವಿವಾದ

    ಕುರುಕ್ಷೇತ್ರ ಸಿನಿಮಾಗೆ ಸಂಬಂಧಿಸದಂತೆ ದರ್ಶನ್ ಮತ್ತು ನಿಖಿಲ್ ಕುಮಾರ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿತ್ತು. ದರ್ಶನ್ ಚಿತ್ರದಲ್ಲಿ ನಿಖಿಲ್ ಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಸೋ, ಅದು ಎಷ್ಟರ ಮಟ್ಟಿಗೆ ಸತ್ಯ, ನಿಜಕ್ಕು ಉದ್ದೇಶಪೂರ್ವಕವಾಗಿ ಹಾಗೆ ಮಾಡಲಾಗಿದ್ಯ ಎಂಬುದು ಕೂಡ ಕೇಂದ್ರಬಿಂದು ಆಗಿದೆ.

    ಮೊಟ್ಟ ಮೊದಲ ಸಲ 'ಅಭಿಮನ್ಯು' ನಿಖಿಲ್ ಬಗ್ಗೆ ಮಾತನಾಡಿದ ಡಿ-ಬಾಸ್ಮೊಟ್ಟ ಮೊದಲ ಸಲ 'ಅಭಿಮನ್ಯು' ನಿಖಿಲ್ ಬಗ್ಗೆ ಮಾತನಾಡಿದ ಡಿ-ಬಾಸ್

    English summary
    Kannada Actor darshan, ravichandran, arjun sarja, nikhil kumar, sonu sood, sneha, meghana raj starrer kurukshetra will releasing on august 9th. here is 10 Reason To why want to Watch Kurukshetra
    Tuesday, August 6, 2019, 16:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X