»   » ರಾಧಿಕಾ ಪಂಡಿತ್ ಅಭಿನಯದ ಈ ಚಿತ್ರಗಳಲ್ಲಿ ನಿಮಗೆ ಬೆಸ್ಟ್ ಯಾವುದು.?

ರಾಧಿಕಾ ಪಂಡಿತ್ ಅಭಿನಯದ ಈ ಚಿತ್ರಗಳಲ್ಲಿ ನಿಮಗೆ ಬೆಸ್ಟ್ ಯಾವುದು.?

Posted By:
Subscribe to Filmibeat Kannada
ರಾಧಿಕಾ ಹುಟ್ಟುಹಬ್ಬ ಸ್ಪೆಷಲ್ : 9 ವಿಭಿನ್ನ ಸಿನಿಮಾಗಳು | ಯಾವುದು ಬೆಸ್ಟ್? | Filmibeat Kannada

'ಸ್ಯಾಂಡಲ್ ವುಡ್ ಸಿಂಡ್ರೆಲಾ' ಅಂತಾಲೆ ಕರೆಸಿಕೊಳ್ಳುವ 'ಮಿಸಸ್ ರಾಮಾಚಾರಿ' ರಾಧಿಕಾ ಪಂಡಿತ್ ಇಂದು (ಮಾರ್ಚ್) 34ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ರಾಧೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಬರ್ತಡೇ ದಿನ ಕೇಕಗ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಮದುವೆಯಾದಾಗನಿಂದಲೂ ಬೆಳ್ಳಿತೆರೆಯಿಂದ ದೂರವಿರುವ ರಾಧಿಕಾ, ಈಗ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ತವರು ಮನೆಯಲ್ಲಿ ಫ್ಯಾನ್ಸ್ ಜೊತೆಗೆ ಹುಟ್ಟುಹಬ್ಬ ಆಚರಿಸಿದ ರಾಧಿಕಾ ಪಂಡಿತ್

ಅಂದ್ಹಾಗೆ, ರಾಧಿಕಾ ಪಂಡಿತ್ ನಾಯಕಿಯಾಗಿ 10 ವರ್ಷಗಳಾಗಿವೆ. ಈ ಹತ್ತು ವರ್ಷದಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನ, ವಿಶೇಷ ಪಾತ್ರಗಳ ಮೂಲಕ ಎಲ್ಲರನ್ನ ರಂಜಿಸಿದ್ದಾರೆ ಈ ಮುದ್ದು ಚೆಲುವೆ. ಹಾಗಿದ್ರೆ, ರಾಧಿಕಾ ಅವರು ಇಷ್ಟು ಚಿತ್ರಗಳಲ್ಲಿ ನಿಮಗೆ ಇಷ್ಟವಾದ ಸಿನಿಮಾ ಯಾವುದು ಎಂದು ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಮುಂದೆ ನೋಡಿ.....

ಮೊಗ್ಗಿನ ಮನಸು

ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರದ ಮೂಲಕ ಚಂದನವನದಲ್ಲಿ ನಾಯಕಿಯಾಗಿ ಪ್ರವೇಶ ಮಾಡಿದ ರಾಧಿಕಾ ಪಂಡಿತ್, ಮೊದಲ ಚಿತ್ರದಲ್ಲೇ ಎಲ್ಲರನ್ನ ಕ್ಲೀನ್ ಬೌಲ್ಡ್ ಮಾಡಿದ್ದರು. ಟೀನೆಜ್ ಪಾತ್ರ ನಿರ್ವಹಿಸಿದ್ದ ರಾಧಿಕಾ ಸ್ಯಾಂಡಲ್ ವುಡ್ ನ ಹೊಸ ಕ್ರಶ್ ಆಗಿದ್ದರು.

ಹೊಸ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾದ ರಾಧಿಕಾ ಪಂಡಿತ್

ಕೃಷ್ಣನ್ ಲವ್ ಸ್ಟೋರಿ

ಮತ್ತೆ ಶಶಾಂಕ್ ನಿರ್ದೇಶನದ 'ಕೃಷ್ಣನ್ ಲವ್ ಸ್ಟೋರಿ' ಸಿನಿಮಾದಲ್ಲಿ ರಾಧಿಕಾ ನಾಯಕಿಯಾಗಿ ಕಾಣಿಸಿಕೊಂಡ್ರು. ಅಜಯ್ ರಾವ್ ನಾಯಕನಾಗಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಮಧ್ಯಮ ವರ್ಗದ ಹುಡುಗಿ ಪಾತ್ರದಲ್ಲಿ ಮಿಂಚಿದ್ದ ರಾಧಿಕಾ ತಮ್ಮ ನೈಜ ಅಭಿನಯದ ಮೂಲಕ ಇಲ್ಲಿಯೂ ಮಚ್ಚುಗೆ ಗಳಿಸಿಕೊಂಡಿದ್ದರು.

ಅದ್ಧೂರಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಚೊಚ್ಚಲ ಸಿನಿಮಾ ಅದ್ಧೂರಿ. ಈ ಚಿತ್ರದಲ್ಲಿ ಲಕ್ಕಿ ನಾಯಕಿಯಾಗಿದ್ದು ರಾಧಿಕಾ ಪಂಡಿತ್. ಕಾಲೇಜ್ ಹುಡುಗಿ ಪಾತ್ರದಲ್ಲಿ ಮೋಡಿ ಮಾಡಿದ ರಾಧಿಕಾಗೆ ಇದು ವೃತ್ತಿ ಜೀವನದಲ್ಲಿ ದೊಡ್ಡ ಹಿಟ್ ತಂದುಕೊಡ್ತು.

ಚಂದನವನದ ರಾಧೆಯ ಹುಟ್ಟುಹಬ್ಬಕ್ಕೆ ಸಿಕ್ತು ವಿಶೇಷ ಉಡುಗೊರೆ

ಡ್ರಾಮಾ

ರಾಕಿಂಗ್ ಸ್ಟಾರ್ ಯಶ್ ಜೊತೆಯಲ್ಲಿ ಅಭಿನಯಿಸಿದ ಡ್ರಾಮಾ ಸಿನಿಮಾದಲ್ಲಿ ರಾಧಿಕಾ ಬಬ್ಲಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದರು. ಇದು ರಾಧಿಕಾಗೆ ಹೊಸ ಸ್ಟೈಲ್ ನಲ್ಲಿ ಮಿಂಚುವ ಅವಕಾಶ ಮಾಡಿಕೊಟ್ಟಿತ್ತು.

ಕಡ್ಡಿಪುಡಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಅಭಿನಯಿಸಿದ ಸಿನಿಮಾ ಕಡ್ಡಿಪುಡಿ. ಮೊದಲ ಭಾರಿಗೆ ಗೃಹಿಣಿ ಪಾತ್ರದಲ್ಲಿ ರಾಧಿಕಾ ಬಣ್ಣ ಹಚ್ಚಿದ್ದರು. ಡಿ-ಗ್ಲಾಮರ್ ರೋಲ್ ನಲ್ಲಿ ಸಿಂಡ್ರೆಲಾ ಸೂಪರ್ ಎನಿಸಿಕೊಂಡಿದ್ದರು.

ನಟಿ ರಾಧಿಕ ಪಂಡಿತ್ ಕುಟುಂಬಕ್ಕೆ ಬಂದ ಮಹಾಲಕ್ಷ್ಮಿ

ಬಹುದ್ದೂರ್

'ಅದ್ಧೂರಿ' ಯಶಸ್ಸಿನ ನಂತರ ಧ್ರುವ ಸರ್ಜಾ ಜೊತೆ ರಾಧಿಕಾ ಅಭಿನಯದ ಎರಡನೇ ಚಿತ್ರ ಬಹುದ್ದೂರ್. ಈ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಸಿಕ್ಸರ್ ಬಾರಿಸಿತ್ತು.

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ

ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಜುಗಲ್ ಬಂದಿಯಲ್ಲಿ ಮೂಡಿ ಬಂದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ರಾಧಿಕಾ ಅವರ ಅದೃಷ್ಟವನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿತ್ತು. ಇವರಿಬ್ಬ ಜೋಡಿಗೆ ಸ್ಯಾಂಡಲ್ ವುಡ್ ಮಂದಿ ಫುಲ್ ಫಿದಾ ಆಗಿದ್ದರು.

ಪ್ರೇಮಿಗಳ ದಿನ 'ಅಪರೂಪದ ಚಿತ್ರ' ಶೇರ್ ಮಾಡಿದ ಯಶ್ ಪತ್ನಿ ರಾಧಿಕಾ ಪಂಡಿತ್

ಜೂಮ್

ಸಾಮಾನ್ಯವಾಗಿ ಒಂದೇ ರೀತಿಯ ಲುಕ್ ನಲ್ಲಿ ಅಭಿನಯಿಸುತ್ತಿದ್ದ ರಾಧಿಕಾ ಮೊದಲ ಭಾರಿಗೆ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡ ಸಿನಿಮಾ ಜೂಮ್. ಕಂಪ್ಲೀಟ್ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದ ರಾಧಿಕಾ, ಹೊಸ ರೀತಿಯಲ್ಲಿ ಜನಕ್ಕೆ ಇಷ್ಟವಾದರು.

ಸಂತು ಸ್ಟ್ರೈಟ್ ಫಾರ್ವಾಡ್

ಇನ್ನು ಮದುವೆಗೂ ಮುಂಚೆ ರಾಧಿಕಾ ಅಭಿನಯಸಿದ್ದ ಕೊನೆಯ ಸಿನಿಮಾ 'ಸಂತು ಸ್ಟ್ರೈಟ್ ಫಾರ್ವಾಡ್'. ಕೊನೆಯದಾಗಿ ರಾಧಿಕಾ ಅವರನ್ನ ಈ ಚಿತ್ರದಲ್ಲಿ ನೋಡಿದವರಿಗೆ ಈ ಸಿನಿಮಾ ತುಂಬಾ ಕಾಡಿರುತ್ತೆ. ಇಷ್ಟು ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು.? ಕಾಮೆಂಟ್ ಮಾಡಿ ತಿಳಿಸಿ.

English summary
Radhika Pandit is the most beautiful and gorgeous actress in Kannada film industry. today 34th birthday. Here's a list of top 10 remarkable movies of Radhika Pandit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada