ಯಜಮಾನ ನೋಡೋದಕ್ಕೆ ಮುಂಚೆ ಈ 10 ವಿಷ್ಯಗಳನ್ನ ತಿಳಿಯಿರಿ

ಯಜಮಾನ ಸಿನಿಮಾ ಬಿಡುಗಡೆಗೆ ಕೇವಲ ಒಂದು ದಿನ ಮಾತ್ರ ಉಳಿದಿದೆ. ಈಗಾಗಲೇ ಥಿಯೇಟರ್ ಗಳ ಮುಂದೆ ಹಬ್ಬದ ವಾತಾವರಣ ಆರಂಭವಾಗಿದೆ. ಕಟೌಟ್, ಪೋಸ್ಟರ್ ಗಳಿಂದ ಚಿತ್ರಮಂದಿರಗಳು ಶೃಂಗಾರಗೊಂಡಿದ್ದು, ಯಜಮಾನನ ಸ್ವಾಗತಕ್ಕೆ ಸಜ್ಜಾಗಿದೆ.

ಸುಮಾರು ಒಂದೂವರೆ ವರ್ಷದಿಂದ ತೆರೆಮೇಲೆ ದರ್ಶನ್ ಅವರನ್ನ ನೋಡದೇ ಮಂಕಾಗಿದ್ದ ಅಭಿಮಾನಿಗಳು, ಮೊದಲ ದಿನವೇ ಮೊದಲ ಶೋ ನೋಡ್ಬೇಕು ಎಂಬ ಕಾತುರದಲ್ಲಿದ್ದಾರೆ. ಈ ಕಾತುರ, ಕುತೂಹಲ, ನಿರೀಕ್ಷೆಗೆ ತಕ್ಕಂತೆ ಯಜಮಾನ ಕೂಡ ರೆಡಿಯಾಗಿ ಬರ್ತಿದೆ.

ಅಷ್ಟಕ್ಕೂ, ಯಜಮಾನ ಚಿತ್ರದಲ್ಲಿ ಅಂತಹದ್ದೇನು ವಿಶೇಷವಿದೆ. ರೆಗ್ಯೂಲರ್ ಚಿತ್ರದಂತೆ ಇದು ಒಂದು ಎನ್ನುವ ಪ್ರೇಕ್ಷಕರು ಈ ಸ್ಟೋರಿಯನ್ನ ಓದಿ. ದರ್ಶನ್ ಯಜಮಾನ ಯಾಕೆ ಇಷ್ಟೊಂದು ಹೈಪ್ ಕ್ರಿಯೆಟ್ ಮಾಡಿದೆ ಎಂದು ತಿಳಿಯುತ್ತೆ. ಮುಂದೆ ಓದಿ....

ಯಜಮಾನ ಟೈಟಲ್ ವಿಶೇಷ

ಯಜಮಾನ ಟೈಟಲ್ ವಿಶೇಷ

ದರ್ಶನ್ ಯಜಮಾನ ಚಿತ್ರದ ಮೊದಲ ವಿಶೇಷವೇ ಟೈಟಲ್. ಯಾಕಂದ್ರೆ, ಈ ಟೈಟಲ್ ಗೆ ಒಂದು ತೂಕವಿದೆ. ಈ ಹಿಂದೆ 2000ನೇ ಇಸವಿಯಲ್ಲಿ ಡಾ ವಿಷ್ಣುವರ್ಧನ್ ಅಭಿನಯಿಸಿದ್ದ ಯಜಮಾನ ಅತಿದೊಡ್ಡ ಯಶಸ್ಸು ಕಂಡಿತ್ತು. ಆ ಕಥೆಗೆ ಯಜಮಾನ ಶೀರ್ಷಿಕೆ ಸೂಕ್ತವಾಗಿತ್ತು. ಇದೀಗ, ಅದೇ ಟೈಟಲ್ ಜೊತೆ ಬರ್ತಿರೋದರಿಂದ ಅದೇ ರೀತಿ ಕಥೆ ಮತ್ತು ಯಶಸ್ಸು ಕಾಣುತ್ತಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಒಂದೂವರೆ ವರ್ಷದ ನಂತರದ ಸಿನಿಮಾ

ಒಂದೂವರೆ ವರ್ಷದ ನಂತರದ ಸಿನಿಮಾ

ಸುಮಾರು ಒಂದೂವರೆ ವರ್ಷದ ನಂತರ ದರ್ಶನ್ ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ. 2017ರ ದಸರಾ ಹಬ್ಬದಲ್ಲಿ ತಾರಕ್ ಸಿನಿಮಾ ಬಂದಿತ್ತು. ನಂತರ ಕುರುಕ್ಷೇತ್ರ ಬರಬೇಕಿತ್ತು. ಗ್ರಾಫಿಕ್ಸ್ ಕೆಲಸದಿಂದ ವಿಳಂಬವಾಗಿದ್ದು, ಅದಕ್ಕೂ ಯಜಮಾನ ಬರ್ತಿದೆ. ಹೀಗೆ, ಒಂದೂವರೆ ವರ್ಷದಿಂದ ಉಪವಾಸ ಇದ್ದ ಡಿ ಫ್ಯಾನ್ಸ್ ಗೆ ಒಂದೆ ಸಲ ಮೃಷ್ಟಾನ್ನ ಸಿಕ್ಕಿದಾಗಿದೆ.

ಮೊದಲ ಬಾರಿಗೆ ಹರಿಕೃಷ್ಣ ನಿರ್ದೇಶನ

ಮೊದಲ ಬಾರಿಗೆ ಹರಿಕೃಷ್ಣ ನಿರ್ದೇಶನ

ಇಷ್ಟು ದಿನ ಸಂಗೀತ ನಿರ್ದೇಶನ ಮಾಡ್ತಿದ್ದ ಹರಿಕೃಷ್ಣ ಈಗ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದರ ಜೊತೆಗೆ ದರ್ಶನ್ ಮತ್ತು ಹರಿಕೃಷ್ಣ ಜೋಡಿಯಲ್ಲಿ ಸಂಗೀತ ನೀಡಿರುವ 25ನೇ ಚಿತ್ರ. ಪೊನ್ನು ಕುಮಾರ್ ಮತ್ತು ಹರಿಕೃಷ್ಣ ಜಂಟಿಯಾಗಿ ನಿರ್ದೇಶಿರುವ ಸಿನಿಮಾ. ಈ ಚಿತ್ರದ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಹರಿಕೃಷ್ಣ ಹೇಗೆ ಸಿನಿಮಾ ಮಾಡಿರಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

ರಶ್ಮಿಕಾ ಮಂದಣ್ಣ-ದರ್ಶನ್ ಮೊದಲ ಚಿತ್ರ

ರಶ್ಮಿಕಾ ಮಂದಣ್ಣ-ದರ್ಶನ್ ಮೊದಲ ಚಿತ್ರ

ಪುನೀತ್ ಮತ್ತು ರಶ್ಮಿಕಾ, ಗಣೇಶ್ ಮತ್ತು ರಶ್ಮಿಕಾ, ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ....ಈಗ ದರ್ಶನ್ ಜೊತೆ ರಶ್ಮಿಕಾಗೆ ಮೊದಲ ಸಿನಿಮಾ. ಈಗಾಗಲೇ ಇವರಿಬ್ಬರ ಜೋಡಿ ಸೂಪರ್ ಎಂಬ ಮಾತಿದೆ. ಯಜಮಾನ ಚಿತ್ರದಲ್ಲೂ ರಶ್ಮಿಕಾ ಯಶಸ್ಸು ಕಾಣಲಿದ್ದಾರೆ ಎಂಬ ಭರವಸೆ ಹೆಚ್ಚಿದೆ. ಈ ಹಿಂದೆ ದರ್ಶನ್ ಚಿತ್ರದಲ್ಲಿ ರಶ್ಮಿಕಾ ನಟಿಸಬೇಕಿತ್ತು. ಬಟ್ ಆಗ ಮಿಸ್ ಮಾಡಿಕೊಂಡಿದ್ರು. ರಶ್ಮಿಕಾ ಜೊತೆ ತಾನ್ಯ ಹೋಪ್ ಕೂಡ ನಾಯಕಿಯಾಗಿ ನಟಿಸಿದ್ದಾರೆ.

ಧನಂಜಯ್ ಮಿಠಾಯಿ ಸೂರಿ

ಧನಂಜಯ್ ಮಿಠಾಯಿ ಸೂರಿ

ಟಗರು ಚಿತ್ರದಲ್ಲಿ ಡಾಲಿ ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಧನಂಜಯ್ ಈಗ ಯಜಮಾನದ ಚಿತ್ರದಲ್ಲಿ ಮಿಠಾಯಿ ಸೂರಿ ಆಗಿ ಮಿಂಚಿದ್ದಾರೆ. ಬಹುಶಃ ಡಾಲಿ ನೋಡಿದ ಖುಷಿಯಾಗಿದ್ದ ಅಭಿಮಾನಿಗಳಿಗೆ ಮಿಠಾಯಿ ಸೂರಿ ಕೂಡ ಕಿಕ್ ನೀಡಬಹುದು ಎಂಬ ನಿರೀಕ್ಷೆ ಇದೆ.

ಹಾಡುಗಳು ಸೂಪರ್ ಹಿಟ್

ಹಾಡುಗಳು ಸೂಪರ್ ಹಿಟ್

ಬಹುಶಃ ಒಂದೇ ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿರುವುದು ಯಜಮಾನನ ವಿಶೇಷ. ಶಿವನಂದಿ, ಬಸಣ್ಣಿ ಬಾ, ಒಂದು ಮುಂಜಾನೆ, ಯಜಮಾನ ಟೈಟಲ್ ಹಾಡು ಮತ್ತು ಹತ್ತು ರೂಪಾಯಿಗೊಂದು....ಈ ಹಾಡುಗಳ ಸದ್ದು ಯಜಮಾನನ ಬಗ್ಗೆ ಅತಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಹಾಡುಗಳಷ್ಟೇ ಸಿನಿಮಾನೂ ಅಬ್ಬರಿಸಲಿದ್ಯಾ? ಕಾದುನೋಡಬೇಕಿದೆ.

ಟ್ರೈಲರ್ ಅತಿ ದೊಡ್ಡ ಸಕ್ಸಸ್

ಟ್ರೈಲರ್ ಅತಿ ದೊಡ್ಡ ಸಕ್ಸಸ್

ಯಜಮಾನ ಹಾಡುಗಳಂತೆ ಟ್ರೈಲರ್ ಕೂಡ ಅತಿ ದೊಡ್ಡ ಹಿಟ್ ಆಗಿದೆ. ಕೆಜಿಎಫ್ ಬಿಟ್ಟರೇ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿರುವ ಟ್ರೈಲರ್ ಯಜಮಾನ. ಟ್ರೈಲರ್ ನಲ್ಲಿರುವ ಡೈಲಾಗ್ ಗಳು ಕೂಡ ಅಷ್ಟೇ ಸೌಂಡ್ ಮಾಡಿದ್ವು ಚಿತ್ರದ ಬಗ್ಗೆ ಹೈವೋಲ್ಟೇಜ್ ಎಕ್ಸ್ ಪೆಕ್ಟೇಶನ್ ಗೆ ಕಾರಣವಾಗಿದೆ.

ದೊಡ್ಡ ಕಲಾವಿದರ ಬಳಗ

ದೊಡ್ಡ ಕಲಾವಿದರ ಬಳಗ

ಸಾಮಾನ್ಯವಾಗಿ ಕನ್ನಡ ಸಿನಿಮಾಗಳಲ್ಲಿ ಹೀರೋ, ಹೀರೋಯಿನ್, ವಿಲನ್ ಎಂಬ ಕಾನ್ಸೆಪ್ಟ್ ಹೆಚ್ಚಿರುತ್ತೆ. ಆದ್ರೆ, ಯಜಮಾನ ಚಿತ್ರದಲ್ಲಿ ಬಹುದೊಡ್ಡ ತಾರಬಳಗವಿದೆ. ದರ್ಶನ್, ದೇವರಾಜ್, ರಶ್ಮಿಕಾ, ತಾನ್ಯ ಹೋಪ್, ಅನೂಪ್ ಠಾಕೂರ್, ಧನಂಜಯ್, ರವಿಶಂಕರ್, ಸಾಧುಕೋಕಿಲಾ, ಶಿವರಾಜ್ ಕೆ ಆರ್ ಪೇಟೆ, ದತ್ತಣ್ಣ ಹೀಗೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

ಡಿ ಬಾಸ್ 51ನೇ ಸಿನಿಮಾ

ಡಿ ಬಾಸ್ 51ನೇ ಸಿನಿಮಾ

49 ಚಿತ್ರಗಳನ್ನ ಮುಗಿಸಿದ್ದ ದರ್ಶನ್ ಪಾಲಿಗೆ ಯಜಮಾನ 50ನೇ ಸಿನಿಮಾ. ಆದ್ರೆ, ಮೊದಲು ಶುರುವಾಗಿದ್ದು ಕುರುಕ್ಷೇತ್ರ ಎಂಬ ಕಾರಣಕ್ಕೆ ಯಜಮಾನ D51 ಎನ್ನಲಾಗಿದೆ. ಸೋ, ದರ್ಶನ್ ಅವರ 51ನೇ ಸಿನಿಮಾ ಎಂಬ ಕಾತುರ ಅಭಿಮಾನಿಗಳಲ್ಲಿದೆ.

ಶೈಲಜಾ ನಾಗ್ ಸಿನಿಮಾ

ಶೈಲಜಾ ನಾಗ್ ಸಿನಿಮಾ

ಯಜಮಾನ ಚಿತ್ರವನ್ನ ನಿರ್ಮಾಣ ಮಾಡಿರುವುದು ಮೀಡಿಯಾ ಹೌಸ್ ನ ಬಿ ಸುರೇಶ್ ಮತ್ತು ಶೈಲಜಾ ನಾಗ್ ದಂಪತಿ. ಅಂದ್ಹಾಗೆ, ದರ್ಶನ್ ಚಿತ್ರ ನಿರ್ಮಾಣ ಮಾಡಿರುವ ಮೊದಲ ಮಹಿಳಾ ನಿರ್ಮಾಪಕಿ ಎನ್ನುವುದು ಯಜಮಾನನ ಅಪರೂಪದ ಸಂಗತಿ.

More from Filmibeat

English summary
Challenging star darshan starring most expected movie yajamana will release on march 1st all over world. directed by v harikrishna. starring rashmika mandanna and tanya hope. here is the 10 Specialities of darshan yajamana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X