For Quick Alerts
ALLOW NOTIFICATIONS  
For Daily Alerts

ಐಶೂ ಹೆಣ್ಣು ಮಗುವಿಗೆ ಮುದ್ದಾದ ಹೆಸರು ಸೂಚಿಸಿ

By Prasad
|

ಇದೀಗ ತಾನೆ ಬಂದ ಸುದ್ದಿ. ಬುಧವಾರ ಬೆಳಗ್ಗೆ ( ನ 16) ಐಶ್ವರ್ಯ ಬಚ್ಚನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಚ್ಚನ್ ಕುಟುಂಬದ ಅಭಿಮಾನಿಗಳು ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಟ್ಟಿದೆ. ಎಲ್ಲ ಕುತೂಹಲಗಳಿಗೆ, ಊಪಾಹೋಹಗಳಿಗೆ ಈ ಮೂಲಕ ಮಂಗಳ.

ಎರಡು ಸಾವಿರದ ಹನ್ನೊಂದನೇ ವರ್ಷದ ಹನ್ನೊಂದನೇ ತಿಂಗಳು ಹನ್ನೊಂದನೇ ದಿನದ ಹನ್ನೊಂದು ಗಂಟೆ ಹನ್ನೊಂದು ನಿಮಿಷ ಹನ್ನೊಂದು ಸೆಕೆಂಡಿನ ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ.

ಇಂಥ ಶುಭಗಳಿಗೆಯ ಸಂದರ್ಭದಲ್ಲಿ ಮತ್ತೊಂದು ವಿದ್ಯಮಾನದತ್ತ ಇಡೀ ದೇಶ ಕಣ್ಣಿಟ್ಟು ಕೂತಿದೆ. ಅದೇ ಬಾಲಿವುಡ್ ಬ್ಯೂಟಿ ಕ್ವೀನ್, ಮಂಗಳೂರಿನ ಮಗಳು, ಅಭಿ ಬೇಬಿಯ ಮುದ್ದಿನ ಹೆಂಡತಿ ಐಶ್ವರ್ಯ ರೈ ಬಚ್ಚನ್ ತಾಯಿಯಾಗುವ ಸಮಯ.

ಆ ಮುದ್ದಿನ ಮಗುವೂ ಎರಡು ಸಾವಿರದ ಹನ್ನೊಂದನೇ ವರ್ಷದ ಹನ್ನೊಂದನೇ ತಿಂಗಳು ಹನ್ನೊಂದನೇ ದಿನದ ಹನ್ನೊಂದು ಗಂಟೆ ಹನ್ನೊಂದು ನಿಮಿಷ ಹನ್ನೊಂದು ಸೆಕೆಂಡಿಗೇ ಹುಟ್ಟುತ್ತದಾ? ಕಾದು ನೋಡೋಣ. ಅಲ್ಲಿಯವರೆಗೆ ಹುಟ್ಟುವ ಮಗುವಿಗೆ ಒಂದು ಮುದ್ದಾದ ಹೆಸರನ್ನೂ ಸೂಚಿಸಿ.

ಅವಳಿಯಾಗುವ ಸಂಭವನೀಯತೆಯನ್ನು ವೈದ್ಯರು ತಳ್ಳಿಹಾಕಿದ್ದಾರೆ. ಆದ್ದರಿಂದ ಹುಟ್ಟುವ ಕೂಸು ಗಂಡಾದರೂ ಆಗಬಹುದು, ಹೆಣ್ಣಾದರೂ ಆಗಬಹುದು. ಗಂಡು ಹುಟ್ಟಿದರೆ ಯಾರ ಹಾಗೆ ಕಾಣಬಹುದು, ಹೆಣ್ಣಾದರೆ ಯಾರಂತೆ ಕಾಣುತ್ತದೆ ಎಂಬ ಬಗ್ಗೆ ಇಂಟರ್ನೆಟ್ಟಿನಲ್ಲಿ ಸಾಕಷ್ಟು ಚರ್ಚೆಗಳೂ ಆರಂಭವಾಗಿದೆ.

ಅಲ್ಲದೆ, ಐಶು ಹೆರಿಗೆಯ ಮೇಲೆ 150 ಕೋಟಿ ರು. ಬೆಟ್ಟಿಂಗ್ ಕೂಡ ಕಟ್ಟಲಾಗಿದೆ ಎಂಬ ಮಾಹಿತಿಯೂ ಬಂದಿದೆ. ಇದರ ಮೇಲೂ ಬೆಟ್ಟಿಂಗಾ ಅನ್ನಬೇಡಿ. ಮುಂಬೈನಲ್ಲಿ ಸುರಿಯುವ ಮಳೆಯ ಮೇಲೆ ಬೆಟ್ಟಿಂಗ್ ಕಟ್ತಾರೆ, ಇನ್ನೂ ಐಶ್ವರ್ಯಳ ಐಸಿರಿಯ ಮೇಲೆ ಬೆಟ್ಟಿಂಗ್ ಕಟ್ಟದೆ ಇರ್ತಾರಾ?

ಐಶ್ವರ್ಯನೇ ಆಗಲಿ ಇನ್ನಾರೇ ಆಗಲಿ, ಮಗು ಹುಟ್ಟುತ್ತಿದ್ದಂತೆ ಜನ್ಮ, ನಕ್ಷತ್ರ, ರಾಶಿ, ದಿನಾಂಕಕ್ಕೆ ತಕ್ಕಂತೆ ಹೆಸರಿಗಾಗಿ ಇಂಟರ್ನೆಟ್ಟನ್ನು ಜಾಲಾಡುವವರೇ ಎಲ್ಲ. ಯಾವ್ದೇ ರಾಶಿ, ನಕ್ಷತ್ರ, ಜಾತಿ, ಪಂಗಡಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಹೆಸರುಗಳು ನೆಟ್ಟಲ್ಲಿ ಲಭ್ಯ.

ನೀವೂ ಐಶ್ವರ್ಯಳ ಮಗುವಿಗೆ ಒಂದು ಹೆಸರನ್ನು ಸೂಚಿಸಿ. ಥೇಟ್ ಅಪ್ಪನ ಥರಾನೇ ಅವ್ನೆ ಅಂತ ಅಂದ್ಕೊಂಡ್ರೆ ಅಭಿಮಾನ್, ಇಲ್ರೀ ಅಮ್ಮನನ್ನೇ ಹೋಲ್ತೈತೆ ಅಂದ್ಕೊಂಡ್ರೆ ಅಭಿಲಾಷಾ! ಎಂಗೈತೆ? ಅಭಿ ಅಭಿ ಅನ್ನುವ ಹೆಸರು ಕೇಳಿ ಕೇಳಿ ಬೇಜಾರಾಗಿದ್ದರೆ ನಿಮಗಿಷ್ಟವಾದ ಹೆಸರನ್ನು ನೀವೇ ಸೂಚಿಸಿ. ನೀವು ಹೇಳಿದ ಹೆಸರು ಬಚ್ಚನ್ ಸಾಹೇಬರಿಗೂ ಇಷ್ಟವಾದರೆ ಲಾಕ್ ಕರ್ದಿಯಾ ಜಾಯ್ ಅಂತನೂ ಹೇಳಿಯಾರು. ಸೂಚಿಸ್ಲೇ ಬೇಕಂತ ಬಲವಂತವೇನೂ ಇಲ್ಲ, ನಿಮ್ಮಿಷ್ಟ!

English summary
Suggest a beautiful name for Aishwarya Rai Bacchan's baby, who will be taking birth on 11.11.11 in Mumbai. If the baby looks like his father Abhishek, then Abhiman. If the baby resembles her mother Aishwarya, then Abhilasha. Search for hindu baby names in the net and find out a suitable name.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more