ಪತ್ರಕರ್ತೆಗೆ ಕೊಲೆ ಬೆದರಿಕೆ ಒಡ್ಡಿದ ನಟ ಸಾಮ್ರಾಟ್

ತೆಲುಗು 'ಡಮರುಗಂ' ಚಿತ್ರದ ಶೂಟಿಂಗ್ ವೇಳೆ ಬೇರೊಬ್ಬ ನಟನನ್ನು ಸಂದರ್ಶಿಸುತ್ತಿದ್ದ ಪತ್ರಕರ್ತೆ ಯಲ್ಲವರ್ತಿ ಸುನೀತಾ ಚೌಧರಿ ಅವರ ಹತ್ತಿರ ಬಂದ ನಾಗಾರ್ಜುನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಾನು ನಿನಗೆ ಇಂಟರ್ ವ್ಯೂ ಕೊಡಲ್ಲ ಹೋಗು ಎಂದಿದ್ದಾರೆ. ತಮ್ಮ ಹಳೆ ಚಿತ್ರ ಕಿಂಗ್ ಹಾಡಲ್ಲಿ ವಿಗ್ ಸ್ವಲ್ಪ ಜಾರಿತ್ತು ಎಂದು ಬರೆಯಲು ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದಾರೆ. ಇನ್ಮುಂದೆ ನನ್ನ ಬಗ್ಗೆ ಏನಾದರೂ ಕೆಟ್ಟದಾಗಿ ಬರೆದರೆ ಕೊಲೆಯಾಗಿ ಹೋಗುತ್ತೀಯಾ ಎಂದು ಹೆದರಿಸಿದ್ದಾರೆ.
ಇದಕ್ಕಿಂತ ಹೆಚ್ಚಾಗಿ ಅನ್ನಪೂರ್ಣ ಸ್ಟುಡಿಯೋದಲ್ಲಿದ್ದ ಅಷ್ಟು ಜನರು ನೋಡುತ್ತಿದ್ದಾರೆ ಎಂಬ ಸಣ್ಣ ಅಳಕು ಇಲ್ಲದೆ ಅಸಹ್ಯಕರ ರೀತಿಯಲ್ಲಿ ಕೈ ಸನ್ನೆ ಮಾಡುತ್ತಾ F**K ಎಂದು ನಿಂದಿಸಿದ್ದಾರೆ. ಮಹಿಳೆಯೊಬ್ಬಳಿಗೆ ನೀಡುವ ಕನಿಷ್ಠ ಗೌರವವನ್ನು ನೀಡದ ನಾಗಾರ್ಜುನ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಸುನೀತಾ ತಮ್ಮ ದೂರಿನಲ್ಲಿ ಹೇಳಿದ್ದರು.
More from Filmibeat
English summary
Tollywood actor Akkineni Nagarjuna was booked for outraging the modesty of a freelance journalist on Saturday. Charges were slapped against him for intimidating the woman by the Jubilee Hills police.
ದರ್ಶನ್ ನಿಖಿತಾ ವಿವಾದ ಕಿರಿಕಿರಿ ಕಾಜಲ್ ಅಗರವಾಲ್ ನಾಗಾರ್ಜುನ ಸೋನಾ ಹೈಡೆನ್ darshan nikita thukral controversy kajal aggarwal nagarjuna sona heiden


Click it and Unblock the Notifications











